RNI NO. KARKAN/2006/27779|Thursday, December 26, 2024
You are here: Home » breaking news » ಗೋಕಾಕ:ಈದ್ ಮಿಲಾದದಂದು ಮದ್ಯಪಾನ ನಿಷೇಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮಾಜ ಭಾಂಧವರಿಂದ ಮನವಿ

ಗೋಕಾಕ:ಈದ್ ಮಿಲಾದದಂದು ಮದ್ಯಪಾನ ನಿಷೇಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮಾಜ ಭಾಂಧವರಿಂದ ಮನವಿ 

ಈದ್ ಮಿಲಾದದಂದು ಮದ್ಯಪಾನ ನಿಷೇಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮಾಜ ಭಾಂಧವರಿಂದ ಮನವಿ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 6 :

 

ಈದ್ ಮಿಲಾದದಂದು ಮದ್ಯಪಾನ ನಿಷೇಧಿಸುವಂತೆ ಆಗ್ರಹಿಸಿ ಇಲ್ಲಿಯ ಮುಸ್ಲಿಂ ಭಾಂಧವರು ಮನವಿ ಅರ್ಪಿಸಿದರು

ಬುಧವಾರದಂದು ನಗರದ ಮಿನಿ ವಿಧಾನಸೌಧದಲ್ಲಿ ಸೇರಿದ ಮುಸ್ಲಿಂ ಭಾಂಧವರು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು

ಹಜರತ್ ಮಹ್ಮದ ಪೈಗಂಬರ ( ಸ್ವ.ಅ.ಸ ) ಅವರು ತಮ್ಮ ಜೀವಿತಾವಧಿಯಲ್ಲಿ ಮದ್ಯಪಾನವನ್ನು ಬಲವಾಗಿ ವಿರೋಧಿಸಿ ಸಾಮಾಜಿಕ ಕಾಂತ್ರಿಯನ್ನೇ ಮಾಡಿ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಿದ್ದಾರೆ. ನವೆಂಬರ 10 ರಂದು ಇಡೀ ದೇಶವೇ ಅತ್ಯಂತ ವಿಜಂಭ್ರನೆಯಿಂದ ಹಜರತ್ ಮಹ್ಮದ ಪೈಗಂಬರ ( ಸ್ವ.ಅ.ಸ ) ಅವರ ಜಯಂತಿಯನ್ನು ಈದ್ ಮಿಲಾದಯನ್ನಾಗಿ ಆಚರಿಸುತ್ತಾರೆ ಈ ದಿನದಂದು ನಗರದದ್ಯಂತ ಮದ್ಯಪಾನವನ್ನು ನಿಷೇಧಿಸಿ ಜಯಂತಿಯನ್ನು ಸರಳವಾಗಿ ಮತ್ತು ಭಾಂಧವೈದಿಂದ ಸಹೋದರತ್ವದಿಂದ ಆಚರಿಸಲು ಅನುಮಾಡಿ ಕೊಡಬೇಕಲ್ಲದೆ ಕರ್ನಾಟಕದಲ್ಲಿ ಆಚರಿಸುವ ಪ್ರತಿಯೊಬ್ಬ ಶರಣರ ,ಮಹಾತ್ಮರ ಜಯಂತಿಗಳ ದಿನದಂದು ಮದ್ಯಪಾನ ನಿಷೇಧಿತ ದಿನವೆಂದು ಘೋಷಿಸಬೇಕೆಂದು ಸಮಸ್ತ ಮುಸ್ಲಿಂ ಸಮಾಜ ಭಾಂಧವರ ಪರವಾಗಿ ಮನವಿಯಲ್ಲಿ ವಿನಂತಿಸಲಾಗಿದೆ

ಈ ಸಂದರ್ಭದಲ್ಲಿ ಮುಫ್ತಿ ಖಾಜಾ ಸುಳೇಭಾವಿ, ಮೌಲಾನ ಅಜೀಜ , ಇರ್ಷಾದ್ ಪಟೇಲ, ಶರೀಫ್ ಮುಧೋಳ, ಜಾವೇಧ ಖತೀಬ, ಇಮ್ರಾನ್ ತಫಕೀರ ಇತರರು ಇದ್ದರು

Related posts: