RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಗೋಕಾಕ ಉಪ ಚುನಾವಣೆ : ನ 9 ರಂದು ಬೆಂಬಲಿಗರ ಸಭೆ ಕರೆದ ಬಿಜೆಪಿ ಮುಖಂಡ ಅಶೋಕ

ಗೋಕಾಕ:ಗೋಕಾಕ ಉಪ ಚುನಾವಣೆ : ನ 9 ರಂದು ಬೆಂಬಲಿಗರ ಸಭೆ ಕರೆದ ಬಿಜೆಪಿ ಮುಖಂಡ ಅಶೋಕ 

ಗೋಕಾಕ ಉಪ ಚುನಾವಣೆ : ನ 9 ರಂದು ಬೆಂಬಲಿಗರ ಸಭೆ ಕರೆದ ಬಿಜೆಪಿ ಮುಖಂಡ ಅಶೋಕ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ 6 :
ಶನಿವಾರ ದಿನಾಂಕ 9   ರಂದು ಮುಂಜಾನೆ 11 ಗಂಟೆಗೆ ನಗರದ ‘ಜ್ಞಾನ ಮಂದಿದ ಆಧ್ಯಾತ್ಮ ಕೇಂದ್ರದಲ್ಲಿ ಸಭಾಂಗಣದಲ್ಲಿ ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ತಮ್ಮ ರಾಜಕೀಯ ಮತ್ತು ಸಾಮಾಜಿಕ ಹೋರಾಟಗಳ ಮಾರ್ಗದರ್ಶಕರು, ಹಿತೈಸಿಗಳು, ಮುಖಂಡರು ಮತ್ತು ಕಾರ್ಯಕರ್ತರುಗಳ ಮಹತ್ವದ ಸಭೆಯನ್ನು ಕರೆಯಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಈ ವಿಷಯ ತಿಳಿಸಿರುವ ಅವರು ಇದೇ ೨೦೧೯ ರ ಡಿಸೆಂಬರ್ ೦೫ ರಂದು ಗೋಕಾಕ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವ ಎಲ್ಲ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಅನೇಕ ಊಹಾಪೋಹಗಳು ಜನತೆಯನ್ನು ಗೊಂದಲಕ್ಕೆ ಇಡು ಮಾಡುತ್ತಿವೆ. ಆದರೆ ಗೋಕಾಕ ತಾಲೂಕಿನ ಜನಸಮುದಾಯ ಇಲ್ಲಿಯ ಸರ್ವಾಧಿಕಾರಿ ಮನೋಭಾವನೆಯ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗೆ ನಮ್ಮ ಸುಧೀರ್ಘ ಹೋರಾಟಕ್ಕೆ ಮನಃಪೂರ್ವಕ ಸಹಾಯ, ಸಹಕಾರ ಮತ್ತು ಬೆಂಬಲ ನೀಡುತ್ತ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಇಂದಿನ ರಾಜಕೀಯ ಸನ್ನಿವೇಶದಲ್ಲಿಯೂ ಸಹ ಅವರ ಅನಿಸಿಕೆಗಳೆ ನನಗೆ ಮಹತ್ವದಾಗಿವೆ. ಒಂದು ಕಡೆಗೆ ಈ ಉಪಚುನಾವಣೆ ಕುರಿತು ಭಾರತೀಯ ಜನತಾ ಪಕ್ಷದ ವರಿಷ್ಠ ಮುಖಂಡರು ಮತ್ತು ಮುಖ್ಯಮಂತ್ರಿಗಳ ಸೂಚನೆ, ಇನ್ನೊಂದೆಡೆ ನನ್ನ ರಾಜಕೀಯ ಮತ್ತು ಸಾಮಾಜಿಕ ಹೋರಾಟದ ನಿಜವಾದ ಶಕ್ತಿಯಾಗಿರುವ ಮತದಾರರು, ಮಾರ್ಗದರ್ಶಕರು, ಹಿತೈಸಿಗಳು, ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯಗಳಿಗೆ ಪೂರಕವಾದ ನಡೆ ಇವುಗಳ ಕುರಿತು ನಿರ್ಣಯ ಮಾಡಬೇಕಾಗಿದೆ.
ಕಾರಣ, ಈ ಮಹತ್ವದ ಸಭೆಯಲ್ಲಿ ತಮ್ಮೆಲ್ಲರ ಅಭಿಪ್ರಾಯಗಳಿಗೆ ಪೂರಕವಾಗಿ ಚರ್ಚಿಸಿ ನಿರ್ಣಯ ಮಾಡಬೇಕಾಗಿದೆ. ಇದೇ ಕಾರಣದಿಂದ ತಾವುಗಳು ಈ ಮಹತ್ವದ ಸಭೆಗೆ ಆಗಮಿಸಿ ತಮ್ಮ ಭಾವನೆಗಳಿಗೆ ಪೂರಕವಾದ ನಿರ್ದೇಶನ ನೀಡಬೇಕೆಂದು ಅವರು ವಿನಂತಿಸಿದ್ದಾರೆ.

Related posts: