RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ವಾಹನ ಚಾಲಕರು ಸುರಕ್ಷಿತ ಚಾಲನೆ ಮಾಡಿ ತಮ್ಮ ಜೀವದೊಂದಿಗೆ ತಮ್ಮ ಕುಟುಂಬದ ರಕ್ಷಣೆ ಮಾಡಬೇಕು

ಗೋಕಾಕ:ವಾಹನ ಚಾಲಕರು ಸುರಕ್ಷಿತ ಚಾಲನೆ ಮಾಡಿ ತಮ್ಮ ಜೀವದೊಂದಿಗೆ ತಮ್ಮ ಕುಟುಂಬದ ರಕ್ಷಣೆ ಮಾಡಬೇಕು 

ವಾಹನ ಚಾಲಕರು ಸುರಕ್ಷಿತ ಚಾಲನೆ ಮಾಡಿ ತಮ್ಮ ಜೀವದೊಂದಿಗೆ ತಮ್ಮ ಕುಟುಂಬದ ರಕ್ಷಣೆ ಮಾಡಬೇಕು

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 6 :

 
ವಾಹನ ಚಾಲಕರು ಸುರಕ್ಷಿತ ಚಾಲನೆ ಮಾಡಿ ತಮ್ಮ ಜೀವದೊಂದಿಗೆ ತಮ್ಮ ಕುಟುಂಬದ ರಕ್ಷಣೆಯನ್ನು ಮಾಡುವಂತೆ ಇಲ್ಲಿಯ ಜೆ.ಎಮ್.ಎಫ್.ಸಿ ನ್ಯಾಯಾಲಯದ ಪ್ರಧಾನ ದಿವಾನಿ ನ್ಯಾಯಾಧೀಶರಾದ ವಿರೇಶ ಕುಮಾರ ಸಿ.ಕೆ ಹೇಳಿದರು
ಬುಧವಾರದಂದು ನಗರಸಭೆಯ ಸಭಾಭವನದಲ್ಲಿ ಕಾರ್ಮಿಕ ಇಲಾಖೆ ಗೋಕಾಕ , ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಮಾಜಿಕ ಭದ್ರತಾ ಮಂಡಳಿ ಬೆಂಗಳೂರು, ಭಾರತೀಯ ರೆಡಕ್ರಾಸ್ ಸಂಸ್ಥೆ ಬೆಳಗಾವಿ, ತಾಲೂಕಾ ಕಾನೂನು ಸೇವೆಗಳ ಸಮಿತಿ ಮತ್ತು ನ್ಯಾಯವಾದಿಗಳ ಸಂಘ ಗೋಕಾಕ , ತಾಲೂಕಾಡಳಿ ಮತ್ತು ನಗರಸಭೆ ಇವುಗಳ ಸಂಯುಕ್ತಾಶ್ರಯದಲ್ಲಿ ಅಫಘಾತ ಜೀವ ರಕ್ಷಕ ಯೋಜನೆ ಅಡಿ ನೊಂದಾಯಿತ ವಾಣಿಜ್ಯ ವಾಹನ ಚಾಲಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು
ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸಿ ತಮ್ಮ ಜವಾಬ್ದಾರಿಯನ್ನು ಅರಿತು ವಾಹನಗಳನ್ನು ಚಾಲನೆ ಮಾಡಿ ಅಫಘಾತಗಳಿಂದ ತಮ್ಮನ್ನು ರಕ್ಷಿಸುಕೊಂಡು ಇತರರನ್ನು ರಕ್ಷಿಸಿ ವಾಹನಗಳ ನೊಂದಣಿ,ವಿಮೆ ಹಾಗೂ ಚಾಲನಾ ಪತ್ರದೊಂದಿಗೆ ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸಿ ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಹಣ ಗಳಿಸುವ ಏಕೈಕ ಉದ್ದೇಶದಿಂದ ಆರೋಗ್ಯ ಹಾಳು ಮಾಡಿಕೋಳದೆ ನಿದ್ರೆ ಹಾಗೂ ಆಹಾರಕ್ಕೆ ಮಹತ್ವ ನೀಡಿ ಆರೋಗ್ಯವಂತರಾಗಿರಿ ಎಂದು ತಿಳಿಸಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೌರಾಯುಕ್ತ ವಿ.ಎಸ್.ತಡಸಲೂರ ವಹಿಸಿದ್ದರು.
ವೇದಿಕೆ ಮೇಲೆ ಬೆಳಗಾವಿ ಉಪ ವಿಭಾಗದ ಕಾರ್ಮಿಕ ಇಲಾಖೆ ಅಧಿಕಾರಿ ತರನ್ನುಮ ಬೆಂಗಾಲಿ , ಇಂಡಿಯನ್ ರೇಡಕ್ರಾಸ್ ಸೊಸೈಟಿ ಬೆಳಗಾವಿಯ ಚೇರಮನ್ ಅಶೋಕ ಬದಾಮಿ, ವಕೀಲರ ಸಂಘದ ಅಧ್ಯಕ್ಷ ಯು.ಬಿ.ಶಿಂಪಿ , ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ , ಕಾರ್ಮಿಕ ನಿರೀಕ್ಷಕ ಪಿ.ವಿ.ಮಾವರಕರ ಇದ್ದರು

Related posts: