RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಸಂಘಟನೆಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ : ಬಸವರಾಜ ಸಾಯನ್ನವರ

ಗೋಕಾಕ:ಸಂಘಟನೆಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ : ಬಸವರಾಜ ಸಾಯನ್ನವರ 

ಸಂಘಟನೆಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ : ಬಸವರಾಜ ಸಾಯನ್ನವರ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 9 :

 

 

ಸಂಘಟನೆಗಳು ಸಮಾಜದ ಸುಧಾರಣೆಯೊಂದಿಗೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯವೆಂದು ಎಪಿಎಮ್‌ಸಿ ನಿರ್ದೇಶಕ ಬಸವರಾಜ ಸಾಯನ್ನವರ ಹೇಳಿದರು.
ಶುಕ್ರವಾರದಂದು ಇಲ್ಲಿಯ ಮಾರ್ಕಂಡೇಯ ನಗರದಲ್ಲಿ ಅಂಬೇಡ್ಕರ ಯುವ ಸೇನೆ ತಾಲೂಕಾ ಮಹಿಳಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಘಟನೆಯಿAದ ಅಭಿವೃದ್ದಿ ಸಾಧ್ಯ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ಸಮಾಜವನ್ನು ಎಲ್ಲರೂ ಸಂಘಟಿತರಾಗಿ ಅಭಿವೃದ್ದಿಗೆ ಶ್ರಮಿಸಬೇಕು. ಸರ್ಕಾರಿ ಸೌಲಭ್ಯಗಳ ಮಾಹಿತಿಯ ಅರಿವನ್ನು ಎಲ್ಲರಿಗೂ ಮೂಡಿಸಿ ಅದನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಸಂಘಟನೆಗಳು ಶ್ರಮಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಡಾ|| ಅರ್ಜುನ ಬಂಡಿ, ರಾಜ್ಯಾಧ್ಯಕ್ಷ ಫಕೀರಪ್ಪ ಹೊಸಮನಿ, ಉಪಾಧ್ಯಕ್ಷ ಪರಶುರಾಮ ರಾಯಬಾಗ, ಮಹಿಳಾ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಜಯಶ್ರೀ ಮಾದರ, ಜಿಲ್ಲಾ ಪದಾಧಿಕಾರಿಗಳಾದ ಪರಶುರಾಮ ಮುನವಳ್ಳಿ, ಉತ್ತಮ ಹರಿಜನ, ಅರ್ಜುನ ಕೆಳಗೇರಿ, ಬಸವರಾಜ ಲಿಂಗದಳ್ಳಿ, ತಾಲೂಕಾ ಪದಾಧಿಕಾರಿಗಳಾದ ಶೋಭಾ ಖಂಡ್ರಿ, ಸುಶೀಲಾ ದೊಡಮನಿ, ಕಿರಣ ಶಿವಾಳೆ, ಗಣೇಶ ಗುರ್ಲಹೊಸುರ, ಕರೆಪ್ಪ ತೋರಗಲ್ಲ ಸೇರಿದಂತೆ ಅನೇಕರು ಇದ್ದರು.

Related posts: