RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಎಲ್ಲರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುವದೆ ನಿಜವಾದ ಮಾನವ ಧರ್ಮ : ಜಾವೇದ ಗೋಕಾಕ

ಗೋಕಾಕ:ಎಲ್ಲರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುವದೆ ನಿಜವಾದ ಮಾನವ ಧರ್ಮ : ಜಾವೇದ ಗೋಕಾಕ 

ನಿರಾಶ್ರಿತರಿಗೆ ಹಣ್ಣು- ಹಂಪಲು ವಿತರಿಸುತ್ತಿರುವ ಗಣ್ಯರು

ಎಲ್ಲರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುವದೆ ನಿಜವಾದ ಮಾನವ ಧರ್ಮ : ಜಾವೇದ ಗೋಕಾಕ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 10 :

 

 

ಎಲ್ಲರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುವದೆ ನಿಜವಾದ ಮಾನವ ಧರ್ಮ ಎಂದು ಅಂಜುಮನ್ ಏ ಇಸ್ಲಾಂ ಕಮಿಟಿಯ ಅಧ್ಯಕ್ಷ ಜಾವೇದ ಗೋಕಾಕ ಹೇಳಿದರು

ರವಿವಾರದಂದು ನಗರದ ಹೊರ ವಲಯದ ನಿರಾಶ್ರಿತರ ಕೇಂದ್ರದಲ್ಲಿ ನಡೆದ ಈದ ಮಿಲಾದ ಆಚರಣೆಯ ನಿಮಿತ್ಯವಾಗಿ ಹಮ್ಮಿಕೊಂಡಿದ್ದ ಹಣ್ಣು – ಹಂಪದ ವಿತರಣಾ ಸಮಾರಂಭದಲ್ಲಿ ನಿರಾಶ್ರಿತರಿಗೆ ಹಣ್ಣು – ಹಂಪಲ ವಿತರಿಸಿ ಅವರು ದಿವ್ಯ ಮಾತನಾಡಿದರು

ಕಷ್ಟ ಬಂದಾಗ ಯಾರು ಕೂಡಾ ಧರ್ಮ, ಜಾತಿ ಎಂದು ಪರಿಗಣಿಸದೆ ದೇವರನ್ನು ನೆನೆಯಲು ಮೇಲೆ ನೋಡುತ್ತೇವೆ ವಿನ್ಹ ಅಕ್ಕಪಕ್ಕ ವಲ್ಲ ಇದರ್ಥ ದೇವರು ಒಬ್ಬನೇ ಇದ್ದಾನೆ ಎಂದರ್ಥ ಈ ಸತ್ಯವನ್ನು ಅರಿತು ನಾವು ಬಾಳಿ ಬದುಕ ಬೇಕಾಗಿದೆ ಎಂದ ಅವರು ಜಗತ್ತನ ಎಲ್ಲ ಜೀವರಾಶಿಗಳು ಶಾಂತಿ ಮತ್ತು ಸುಖವನ್ನು ಬಯಸಿದ ಹಾಗೆ ಮಾನವೀಯ ಮೌಲ್ಯಗಳನ್ನು ಹೊಂದಿರುವ ನಾವುಗಳು ಸಹ ಶಾಂತಿ ಮತ್ತು ಸುಖವನ್ನು ಬಯಸಬೇಕು . ಸೌರ್ಹದಯುತವಾಗಿ ಬಾಳಿ ಬದುಕಿರುವ ಪ್ರವಾದಿ , ದಾರ್ಶನಿಕರ ಸಮಾನತೆಯ ತತ್ವಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿ ಕೋಳಬೇಕಾಗಿದೆ ಎಂದು ಜಾವೇದ ಹೇಳಿದರು

ಇಲ್ಲಿನ ಉಪ ಕಾರಾಗೃಹದಲ್ಲಿ ವಿಚಾರನಾಧೀನ ಖೈದಿಗಳಿಗೆ ಹಣ್ಣು – ಹಂಪ್ಫಲ ವಿತರಿಸುತ್ತಿರುವದು

ಇದೇ ಸಂದರ್ಭದಲ್ಲಿ ನಗರದ ಸಾರ್ವಜನಿಕ ಆಸ್ವತ್ರೆ , ಉಪ ಕಾರಾಗೃಹ ಹಾಗೂ ವಸತಿ ನಿಲಯಗಳಿಗೆ ಬೇಟಿ ನೀಡಿದ ಮುಸ್ಲಿಂ ಭಾಂಧವರು ರೋಗಿಗಳಿಗೆ, ವಿಚಾರನಾದೀನ ಖೈದಿಗಳಿಗೆ ಮತ್ತು ಮಕ್ಕಳಿಗೆ ಮಕ್ಕಳಿಗೆ ಹಣ್ಣು – ಹಂಪ್ಫಲಗಳನ್ನು ವಿತರಿಸಿ ಈದ ಮಿಲಾದ ಹಬ್ಬವನ್ನು ಆಚರಿಸಿದರು

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಎಸ್.ಎ.ಕೊತವಾಲ, ಮೊಸೀನ ಖೋಜಾ, ಅಬ್ದುಲ್ ರಹೇಮಾನ ದೇಸಾಯಿ , ಕುತಬುದ್ಧೀನ ಗೋಕಾಕ ,ಇಲಾಹಿ ಖೈರದಿ, ಮಲ್ಲಿಕ ಪೈಲವಾನ, ಜುಬೇರ ತ್ರಾಸಗರ, ಜಾಕೀರ ಕುಡಚಿ , ಅಬ್ದುಲವಹಾಬ ಜಮಾದಾರ, ಇಸ್ಮಾಯಿಲ್ ಗೋಕಾಕ, ಅಬ್ದುಲಗಣಿ ಮುನ್ನೋಳಿ , ದಾದಾಪೀರ ಶಾಬಾಶಖಾನ , ರಪೀಕ ಗುಡವಾಲೆ , ಹಾಜಿ ಅಬ್ದುಲ್ ಗಫಾರ ಕಾಗಜಿ , ಸೇರಿದಂತೆ ಅನೇಕರು ಇದ್ದರು.

Related posts: