ಗೋಕಾಕ:ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ : ಡಾ|| ಸಿ.ಕೆ.ನಾವಲಗಿ
ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ : ಡಾ|| ಸಿ.ಕೆ.ನಾವಲಗಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 12 :
ಅತ್ಯಂತ ಪುರಾತನ ಹಾಗೂ ಶ್ರೀಮಂತವಾದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದು ಜಾನಪದ ತಜ್ಞ ಡಾ|| ಸಿ.ಕೆ.ನಾವಲಗಿ ಹೇಳಿದರು.
ಸೋಮವಾರದಂದು ಸಂಜೆ ಇಲ್ಲಿಯ ವಿವೇಕಾನಂದ ನಗರದಲ್ಲಿ ಗುಂಪು ಕಲಾವಿದರ ಬಳಗ ಹಾಗೂ ರಾಮ ಪೌಂಡೇಶನ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಹಚ್ಚೇವ ಕನ್ನಡದ ದೀಪ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಮಾತೃಭಾಷೆ ಕನ್ನಡಕ್ಕೆ ನಾವೆಲ್ಲರೂ ಮೊದಲ ಆಧ್ಯತೆಯನ್ನು ನೀಡಬೇಕು. ಇಂದಿನ ಯುವ ಪೀಳಿಗೆಯಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಬೆಳೆಸಬೇಕು. ಕನ್ನಡಪರ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಂಡು ಕನ್ನಡ ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸಲು ಎಲ್ಲರೂ ಶ್ರಮಿಸೋಣವೆಂದರು.
ಕಲಾವಿದ ಜಿ.ಕೆ.ಕಾಡೇಶಕುಮಾರ ಹಾಗೂ ಅವರ ತಂಡದಿAದ ಕನ್ನಡ ಹಾಡುಗಳ ಸಂಗೀತ ಕಾರ್ಯಕ್ರಮ ಜರುಗಿತು. ವೇದಿಕೆ ಮೇಲೆ ಪ್ರೋ. ಜಿ.ವಿ.ಮಳಗಿ, ವಿಷ್ಣು ಲಾತೂರ, ಈಶ್ವರಚಂದ್ರ ಬೆಟಗೇರಿ. ಜಯಾನಂದ ಮಾದರ, ವಿನೂತಾ ನಾವಲಗಿ, ರಜನಿಕಾಂತ ಮಾಳೋದೆ, ಸುರೇಶ ಮುದ್ದಾರ ಇದ್ದರು.