ಗೋಕಾಕ:ಸುಪ್ರೀಂಕೋರ್ಟ್ ತೀರ್ಪು : ದೇವರಿಗೆ ಮೊರೆ ಹೋದ ರಮೇಶ ಜಾರಕಿಹೊಳಿ ಅಭಿಮಾನಿಗಳು
ಸುಪ್ರೀಂಕೋರ್ಟ್ ತೀರ್ಪು : ದೇವರಿಗೆ ಮೊರೆ ಹೋದ ರಮೇಶ ಜಾರಕಿಹೊಳಿ ಅಭಿಮಾನಿಗಳು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 13 :
ಅನರ್ಹ ಶಾಸಕ ರಮೇಶ ಜಾರಕಿಹೊಳಿ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ಬರಲೆಂದು ಹಾರೈಸಿ ರಮೇಶ ಜಾರಕಿಹೊಳಿ ಬೆಂಬಲಿಗರು ಮತ್ತು ಕಾರ್ಯಕರ್ತರು ನಗರ ಮತ್ತು ಮತಕ್ಷೇತ್ರದಾದ್ಯಂತ ಪೂಜೆ ಸಲ್ಲಿಸುತ್ತಿದ್ದಾರೆ
ಮಂಗಳವಾರದಂದು ಬೆಳ್ಳಂಬೆಳಿಗ್ಗೆ ನಗರದ ಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಸೇರಿದ ಕಾರ್ಯಕರ್ತರು , ನಗರಸಭೆ ಸದಸ್ಯರು ಮತ್ತು ಅಭಿಮಾನಿಗಳು ತೀರ್ಪು ರಮೇಶ ಜಾರಕಿಹೊಳಿ ಪರವಾಗಿ ಬರಲಿ ಎಂದು ಪೂಜೆ ಸಲ್ಲಿಸಿ
ಕಳೆದ ಮೂರು ತಿಂಗಳಿನಿಂದ ರಾಜ್ಯದ ಜನತೆಯಲ್ಲಿ ಕುತೂಹಲ ಕೆರಳಿಸಿರುವ ಅನರ್ಹರ ತೀರ್ಪು ಇನ್ನೇನು ಕೆಲವೇ ಗಂಟೆಗಳಲ್ಲಿ ಹೊರ ಬರುವುದರಿಂದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರ ಪರವಾಗಿ ಅವರ ಬೆಂಬಲಿಗರು ದೇವರಿಗೆ ಮೊರೆ ಹೊಗಿದ್ದಾರೆ .