ಚಿಕ್ಕೋಡಿ:ರಾಜ್ಯ ಹೆದ್ದಾರಿಯಲ್ಲಿ ಕನ್ನಡದ ಕಗ್ಗೊಲೆ : ನಿದ್ರಾವಸ್ಥೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು
ರಾಜ್ಯ ಹೆದ್ದಾರಿಯಲ್ಲಿ ಕನ್ನಡದ ಕಗ್ಗೊಲೆ : ನಿದ್ರಾವಸ್ಥೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು
ಚಿಕ್ಕೋಡಿ ಜು 29 : ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡವನ್ನು ತಪ್ಪು ತಪ್ಪಾಗಿ ಬರೆದು ಕನ್ನಡ ಭಾಷೆಯ ಕಗ್ಗೊಲೆ ಮಾಡಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ
ಬಹುತೇಕ ಗ್ರಾಮಗಳ ಹೆಸರನ್ನು ಗುತ್ತಿಗೆದಾರ ಕನ್ನಡದಲ್ಲಿ ತಪ್ಪಾಗಿ ಮುದ್ರಿಸಿದ್ದರೂ ಆತನ ಅಜ್ಞಾನ ಕಂಡೂ ಕೂಡ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತುಕೊಂಡಿರುವುದಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಪಟ್ಟಣಕೋಡಿ ಗ್ರಾಮಕ್ಕೆ ಪಠಾಣ್ ಕುಡಿ, ಖಡಕಲಾಟ ಗ್ರಾಮಕ್ಕೆ ಕಡಕಲಾತ, ಅಕ್ಕೋಳ ಗ್ರಾಮಕ್ಕೆ ಆಕ್ಕೋಡ್, ನಾಯಿಂಗ್ಲಜ ಗ್ರಾಮಕ್ಕೆ ನೈನ್ ಗ್ಲಾಸ್, ಬಂಬಲವಾಡಕ್ಕೆ ಬಂಬಳವಾಡ ಎಂದು ಕನ್ನಡ ಅಕ್ಷರಗಳಲ್ಲಿ ತಪ್ಪು ತಪ್ಪಾಗಿ ಮುದ್ರಿಸಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಆದಷ್ಟು ಬೇಗ ಅಧಿಕಾರಿಗಳು ಎಚ್ಚೆತ್ತುಕೊಂಡು ನಾಮಫಲಕಗಳನ್ನು ಸರಿಯಾಗಿ ಬರೆಯಬೇಕೆಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿದ್ದಾರೆ