ಗೋಕಾಕ:ನಾಳೆ ನಗರಕ್ಕೆ ರಮೇಶ ಜಾರಕಿಹೊಳಿ: ಮೂಲ ಬಿಜೆಪಿಗರಿಂದ ಸಂಪೂರ್ಣ ಬೆಂಬಲ , ಸಹೋದರರಿಗೆ ಟಾಂಗ್ ಕೊಡಲು ವೇದಿಕೆ ಸಜ್ಜು
ನಾಳೆ ನಗರಕ್ಕೆ ರಮೇಶ ಜಾರಕಿಹೊಳಿ: ಮೂಲ ಬಿಜೆಪಿಗರಿಂದ ಸಂಪೂರ್ಣ ಬೆಂಬಲ , ಸಹೋದರರಿಗೆ ಟಾಂಗ್ ಕೊಡಲು ವೇದಿಕೆ ಸಜ್ಜು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ 14 :
ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರು ಸಿ.ಎಂ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜಿಪಿ ಪಕ್ಷವನ್ನು ಸೇರಿದ ಪ್ರಯುಕ್ತ ನಗರ ಘಟಕದ ಪದಾಧಿಕಾರಿಗಳ ನಗರ ಘಟಕದ ಅಧ್ಯಕ್ಷ ಶಶಿಧರ ದೇಮಶೆಟ್ಟಿ ಅವರ ನೇತೃತ್ವದಲ್ಲಿ ಸಭೆ ಸೇರಿ ಬೆಂಬಲವನ್ನು ವ್ಯಕ್ತಪಡಿಸಿದರು .
ಗುರುವಾರದಂದು ಬೆಂಗಳೂರಿನಲ್ಲಿ ರಮೇಶ ಜಾರಕಿಹೊಳಿ ಅವರು ಕಾಂಗ್ರೆಸಗೆ ಕೈ ಕೊಟ್ಟು ಬಿಜೆಪಿಗೆ ಸೇರ್ಪಡೆಗೊಂಡ ನಂತರ ರಮೇಶ ಜಾರಕಿಹೊಳಿ ಅವರ ಗೃಹ ಕಛೇರಿಗೆ ಆಗಮಿಸಿ ಮೂಲ ಬಿಜೆಪಿಗರ ರಮೇಶ ಜಾರಕಿಹೊಳಿ ಅವರನ್ನು ಬೆಂಬಲಿಸುವ ಒಮ್ಮತದ ನಿಯರ್ಣಯ ತೆಗೆದುಕೊಂಡರು
ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುತ್ತಿದಂತೆ ಅವರ ಕಛೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಜರುಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್.ವಿ.ದೇಮಶೇಟ್ಟಿ ಕಾಂಗ್ರೆಸ್ ಪಕ್ಷದಲ್ಲಿ ಇಷ್ಟು ದಿನ ಇದದ್ದು ರಮೇಶ ಜಾರಕಿಹೊಳಿ ಅವರ ಬೆಂಬಲಿಗರು ಇನ್ನು ಮುಂದೆ ಗೋಕಾಕದಲ್ಲಿ ಕಾಂಗ್ರೆಸ್ ಶೂನ್ಯ ಎಂದು ಹೇಳಿದರಲ್ಲದೆ ಇಲ್ಲಿಯ ವರೆಗೆ ನಮ್ಮಲ್ಲಿದ್ದ ಸಣ್ಣ ಪುಟ ವಿನಾಭಿಪ್ರಾಯನ್ನು ಬದಿಗೋತ್ತಿ ರಮೇಶ ಜಾರಕಿಹೊಳಿ ಅವರ ಗೆಲುವಿಗೆ ಶ್ರಮಿಸಬೇಕೆಂದು ತಿಳಿಸಿದರು
ಭವ್ಯ ಸ್ವಾಗತಕ್ಕೆ ಸಜ್ಜಾದ ವೇದಿಕೆ : ಬಿಜೆಪಿ ಸೇರ್ಪಡೆಗೊಂಡು ನ.15 ರಂದು ನಗರಕ್ಕೆ ಆಗಮಿಸುತ್ತಿರುವ ರಮೇಶ ಜಾರಕಿಹೊಳಿ ಅವರ ಭರ್ಜರಿ ಸ್ವಾಗತ ಕೊರಿ ಮಧ್ಯಾಹ್ನ 12 ಘಂಟೆಗೆ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ನಡೆಸಲು ಸಭೆಯಲ್ಲಿ ಚರ್ಚಿಸಲಾಯಿತು ಇದಕ್ಕಾಗಿ ರಮೇಶ ಜಾರಕಿಹೊಳಿ ಅವರ ಗೃಹ ಕಛೇರಿ ಎದುರು ಭವ್ಯ ವೇದಿಕೆ ಸಜ್ಜಾಗುತ್ತಿದ್ದೆ .
ಈ ಸಂದರ್ಭದಲ್ಲಿ ಮುಖಂಡ ಅಂಬಿರಾವ ಪಾಟೀಲ್ , ಬಿಜೆಪಿಯ ಶಕೀಲ ಧಾರವಾಡಕರ , ಶ್ರೀಮತಿ ಶ್ರೀದೇವಿ ತಡಕೋಡ ಸೇರಿದಂತೆ ಇತರರು ಇದ್ದರು .
ಇದಕ್ಕೂ ಮೊದಲು ರಮೇಶ ಜಾರಕಿಹೊಳಿ ಬಿಜೆಪಿ ಸೇರ್ಪಡೆ ಆಗಿದ್ದಾರೆ ಎಂದು ಸುದ್ದಿ ತಿಳಿಯುತ್ತಿದ್ದಂತೆ ಕಛೇರಿ ಮುಂದೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಮೇಶ ಜಾರಕಿಹೊಳಿ ಪರ ಘೋಷಣೆಗಳು ಮೊಳಗಿದವು