RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕಾನೂನು ಬಾಹೀರ ಕೃತ್ಯಗಳಲ್ಲಿ ಭಾಗವಹಿಸಿದರೆ ಅಂತಹ ವ್ಯಕ್ತಿಗಳ ಮೇಲೆ ಶಿಸ್ತು ಕ್ರಮ : ಸಿ.ಪಿ.ಆಯ್ ವೆಂಕಟೇಶ ಮುರನಾಳ

ಗೋಕಾಕ:ಕಾನೂನು ಬಾಹೀರ ಕೃತ್ಯಗಳಲ್ಲಿ ಭಾಗವಹಿಸಿದರೆ ಅಂತಹ ವ್ಯಕ್ತಿಗಳ ಮೇಲೆ ಶಿಸ್ತು ಕ್ರಮ : ಸಿ.ಪಿ.ಆಯ್ ವೆಂಕಟೇಶ ಮುರನಾಳ 

ಕಾನೂನು ಬಾಹೀರ ಕೃತ್ಯಗಳಲ್ಲಿ ಭಾಗವಹಿಸಿದರೆ ಅಂತಹ ವ್ಯಕ್ತಿಗಳ ಮೇಲೆ ಶಿಸ್ತು ಕ್ರಮ : ಸಿ.ಪಿ.ಆಯ್ ವೆಂಕಟೇಶ ಮುರನಾಳ

 
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ನ 14 :

 

 

ಚುನಾವಣೆ ವೇಳೆಯಲ್ಲಿ ಕಾನೂನು ಬಾಹೀರ ಕೃತ್ಯಗಳಲ್ಲಿ ಭಾಗವಹಿಸಿದರೆ ಅಂತಹ ವ್ಯಕ್ತಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮೂಡಲಗಿ ಸಿ.ಪಿ.ಆಯ್ ವೆಂಕಟೇಶ ಮುರನಾಳ ಎಚ್ಚರಿಸಿದರು.
ಅವರು ಸಂಜೆ ಗುರುವಾರ ಪಟ್ಟಣದ ಜನತಾ ಪ್ಲಾಟದ ಸರ್ಕಾರಿ ಕನ್ನಡ ಶಾಲೆಯಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜಕೀಯ ಪಕ್ಷಗಳ ಕಾರ್ಯಕರ್ತರು ಅನುಮತಿ ಇಲ್ಲದೆ ಯಾವುದೇ ಸಭೆ ಸಮಾರಂಭಗಳನ್ನು ಮಾಡಬಾರದು, ಮತ್ತು ಧಾರ್ಮಿಕ ಸ್ಥಳಗಳು ಹಾಗೂ ಸರ್ಕಾರಿ ಕಟ್ಟಡಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಬಾರದು. ಯಾವುದೆ ಮತದಾರನ ಮೇಲೆ ಒತ್ತಡ ಹೇರುವ ಕೆಲಸದಲ್ಲಿ ತೊಡಗಬಾರದು ಎಲ್ಲರೂ ಸೇರಿ ಎಲ್ಲ ಬುತಗಳಲ್ಲಿ ೮೫ ಶೇಕಡಾ ಮತದಾನ ವಾಗುವಂತೆ ನೊಡಿಕೊಳ್ಳಿಬೇಕು ಎಂದು ತಿಳಿವಳಿಕೆ ನೀಡಿದರು.
ಸೆಕ್ಟರ್ ಅಧಿಕಾರಿಯಾಗಿ ನೇಮಕಗೊಂಡಿರುವ ಪ.ಪಂ ಮುಖ್ಯಾಧಿಕಾರಿ ಕೆ.ಭಿ.ಪಾಟೀಲ ಮಾತನಾಡಿ ಯಾವುದೇ ಚಾನಾವಣಾ ಅಕ್ರಮಗಳು ಕಂಡು ಬಂದಲ್ಲಿ ಸಂಬAದಿಸಿದ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಸಾರ್ವಜನಿಕರು ಪಾರದರ್ಶಕ ಚುನಾವಣೆಗೆ ಸಹಕರಿಸಬೇಕೆಂದು ಹೇಳಿದರು.
ಮದ್ಯಾಹ್ನ ಪಟ್ಟಣದಲ್ಲಿ ಮತದಾನ ಜಾಗೃತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಪೊಲೀಸ ಪಥ ಸಂಚಲನ ನಡೆಸಲಾಯಿತು.
ಕಾರ್ಯಕ್ರಮವನ್ನು ಪಿ.ಎಸ್.ಆಯ್ ಹಾಲಪ್ಪಾ ಬಾಲದಂಡಿ ನಿರೂಪಿಸಿ, ವಂದಿಸಿದರು.

Related posts: