RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಿದ್ದರಾಮಯ್ಯ ಸೊಕ್ಕಿನಿಂದ ಹಾಗೂ ಡಿಕೆಶಿ ಅವರ ಭ್ರಷ್ಟಾಚಾರದಿಂದ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡಿದೆ : ಅನರ್ಹ ಶಾಸಕ ರಮೇಶ ಆರೋಪ

ಗೋಕಾಕ:ಸಿದ್ದರಾಮಯ್ಯ ಸೊಕ್ಕಿನಿಂದ ಹಾಗೂ ಡಿಕೆಶಿ ಅವರ ಭ್ರಷ್ಟಾಚಾರದಿಂದ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡಿದೆ : ಅನರ್ಹ ಶಾಸಕ ರಮೇಶ ಆರೋಪ 

ಸಿದ್ದರಾಮಯ್ಯ ಸೊಕ್ಕಿನಿಂದ ಹಾಗೂ ಡಿಕೆಶಿ ಅವರ ಭ್ರಷ್ಟಾಚಾರದಿಂದ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡಿದೆ : ಅನರ್ಹ ಶಾಸಕ ರಮೇಶ ಆರೋಪ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 15 :

 

 

 

 

 

ಸಿದ್ದರಾಮಯ್ಯ ಅವರ ಸೊಕ್ಕಿನಿಂದ ಹಾಗೂ ಡಿಕೆಶಿ ಅವರ ಭ್ರಷ್ಟಾಚಾರದಿಂದ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡಿದೆ ಎಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹೇಳಿದರು
ಶುಕ್ರವಾರದಂದು ರಮೇಶ ಜಾರಕಿಹೊಳಿ ಅವರ ಅಭಿಮಾನಿ ಬಳಗ, ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗೋಕಾಕ ವಿಧಾನಸಭಾ ಮತಕ್ಷೇತ್ರದಿಂದ ಆಯೋಜಿಸಲಾಗಿದ್ದ ಭವ್ಯ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಮ್ಮಿಶ್ರ ಸರಕಾರ ಬಿಜೆಪಿ ಪಕ್ಷದ ಅಧಿಕಾರದಾಹದಿಂದ ಬಿದ್ದಿಲ್ಲ ಬದಲಾಗಿ ಪಕ್ಷದ ವರಿಷ್ಠರ ಸೊಕ್ಕಿನಿಂದ ಬಿದ್ದಿದೆ ಇದಕ್ಕೆ ನಾನು ಕಾರಣವಲ್ಲ, ರಾಜಕಾರಣದಲ್ಲಿ ಸ್ವಾಭಿಮಾನಕ್ಕೆ ದಕ್ಕೆ ಬಂದಾಗ, ಪಕ್ಷಾಂತರ ಅನಿವಾರ್ಯ, ನಾವು ಅನಿವಾರ್ಯವಾಗಿ ಬೇರೆ ಪಕ್ಷ ಸೇರಬೇಕಾಯಿತು, ಎಂದ ಅವರು ನಮ್ಮ ವಿರೋಧಿಗಳು ಹೋರಾಟಗಾರರಲ್ಲ ಕುತಂತ್ರವಾದಿಗಳು ನನಗೆ ಕಾಂಗ್ರೆಸ್ ಪಕ್ಷದಲ್ಲಿ ಕುತಂತ್ರದಿಂದ ಮೋಸ ಮಾಡಲಾಗಿದೆ ಎಂದು ಹೇಳಿದರು.
ನಾನು ಸುಳ್ಳು ಹೇಳುವ ಮನುಷ್ಯನಲ್ಲ ಏನಿದ್ದರೂ ನೇರವಾಗಿ ಹೇಳುವವನು, ನೇರ ನಿಟ್ಟುರವಾದಿಯಾಗಿರುವ ನನಗೆ, ಪಕ್ಷದಲ್ಲಿ ನಮ್ಮ ಸಮಸ್ಯೆ ಹೇಳಿಕೊಂಡರೆ ಅದು ಭಿನ್ನಮತ ಅವರು ಚಮಚಾಗಳಂತೆ ಕಾರ್ಯ ನಿರ್ವಹಿಸಿದರೇ ಪಕ್ಷ ನಿಷ್ಠೆ ಎಂಬ ಪರಿಸ್ಥಿತಿ ಕಾಂಗ್ರೆಸ್ ಪಕ್ಷದಲ್ಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರಕ್ಕೆ ಬರುವಾಗ ಎಲ್ಲ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ಬಿಡದಿ ರೆಸ್ಟೊರೆಂಟ್‌ನಲ್ಲಿ ನಮ್ಮನ್ನು ಇಟ್ಟಿದ್ದರು, ಅಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ಡಿ.ಕೆ.ಶಿವಕುಮಾರ ಕೈ ಗೊಂಬೆಯಂತೆ ಆಗಿತ್ತು, ಆ ಸ್ಥಳದಲ್ಲಿಯೇ ನಾನು ಮತ್ತು ಆರ್.ಶಂಕರ ಅವರು ಕೂಡಿ ಅಂದೇ ಈ ಸರಕಾರ ಕೆಡವಲು ತಂತ್ರ ರೂಪಿಸಿದ್ದೇವು ಎಂದು ಸರಕಾರ ಬೀಳಲು ಕಾರಣವಾದ ವಿಷಯಗಳನ್ನು ಬಿಚಿಟ್ಟ ರಮೇಶ ಹೈದರಾಬಾದ್‌ನಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಜೊತೆ ಮಾತುಕಥೆ ನಡೆಯಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವದಾದರೆ ನಾವು ಕಾಂಗ್ರೇಸ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬರುತ್ತೇವೆ ಎಂದು ಹೇಳಿದಾಗ ಅಮಿತ ಶಾ ರಮೇಶ ಗೋ-ಹೆಡ್ ಎಂದು ಅನುಮತಿ ನೀಡಿದರು ಎಂದು ವೇದಿಕೆಯಲ್ಲಿ ನೆನಪಿಸಿದ ಅವರು ಅಲ್ಲಿಂದ ಇಲ್ಲಿಯವರೆಗೆ ನಡೆದ ಕಷ್ಟದ ಹೋರಾಟದಲ್ಲಿ ನಮಗೆ ಲಕ್ಷ್ಮೀದೇವಿ ಆರ್ಶಿವಾದದಿಂದ ಜಯ ಸಿಕ್ಕಿದೆ ಅಂತಾ ಸರಕಾರ ಬೀಳಲು ಕಾರಣವಾದ ವಿಷಯಗಳನ್ನು ಬಿಚ್ಚಿಟ್ಟರು.
ಚುನಾವಣಾ ಅಖಾಡದಲ್ಲಿ ಲಖನ್ ನನ್ನ ವೈರಿ : ಚುನಾವಣಾ ಕಣದಲ್ಲಿ ಲಖನ್ ಜಾರಕಿಹೊಳಿ ನನ್ನ ವೈರಿ, ಮನೆಯಲ್ಲಿ ಮಾತ್ರ ನನ್ನ ತಮ್ಮ ಎಂದ ರಮೇಶ ಯಾರನ್ನು ಟಿಕಿಸದೆ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಹೇಳಿ ಮತ ಯಾಚನೆ ಮಾಡೋಣ ಎಷ್ಟು ಅಂತರದಿಂದ ಗೆಲ್ಲಿಸುತ್ತಿರೋ ಅದನ್ನು ಮತದಾರರೇ ನಿರ್ಧರಿಸಿ ನನ್ನ ಗೆಲುವಿಗೆ ಕಾರಣವಾಗಬೇಕು ಎಂದು ರಮೇಶ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು
ಅಶೋಕ ಪೂಜಾರಿಗೆ ಬಹಿರಂಗ ಆಹ್ವಾನ: ಸ್ವಾಗತ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರಮೇಶ ಜಾರಕಿಹೊಳಿ ತಮ್ಮ ರಾಜಕೀಯ ಬದ್ದ ವೈರಿ ಬಿಜೆಪಿಯ ಅಶೋಕ ಪೂಜಾರಿಗೆ ತಮ್ಮನ್ನು ಬೆಂಬಲಿಸುವಂತೆ ಬಹಿರಂಗ ಕರೆ ನೀಡಿದ ರಮೇಶ ಜಾರಕಿಹೊಳಿ ಅಧಿಕೃತವಾಗಿ ಬಿಜೆಪಿ ಸೇರಿ ಆಗಿದೆ ಪಕ್ಷದಲ್ಲಿಯ ಸ್ಥಾನ-ಮಾನಗಳ ಬಗ್ಗೆ ಕುಳಿತು ಚರ್ಚೆ ಮಾಡೋಣಾ. ಬಹಿರಂಗವಾಗಿಯೇ ವಿಚಾರ ಮಾಡಿ ನಿರ್ಧಾರ ತೆಗೆದುಕೊಳ್ಳೋಣ ನಿಮ್ಮೊಂದಿಗೆ ನಾನು ಮತ್ತು ಸಿ.ಎಮ್. ಯಡಿಯೂರಪ್ಪ ಇದ್ದೇವೆ ಎದೆಗುಂದದಿರಿ ರಮೇಶ ಜಾರಕಿಹೊಳಿ ಅಶೋಕ ಪೂಜಾರಿ ನಡೆ ಕುರಿತು ಪ್ರತಿಕ್ರೀಯಿಸಿದರು.
ಮುಸ್ಲಿಂ ಮತ ಸೆಳೆಯಲು ಪ್ರಯತ್ನ: ಇಡಿ ಉತ್ತರ ಕರ್ನಾಟಕದ ಅಭಿವೃದ್ದಿಯ ಹಿತದೃಷ್ಟಿಯಿಂದ ಶೇಕಡಾ ೭೦ರಷ್ಟು ಮುಸ್ಲಿಂ ಜನಾಂಗದ ಮತವನ್ನು ಸೆಳೆಯಲು ಪ್ರಯತ್ನಿಸಲಾಗುವುದು. ಅದಕ್ಕಾಗಿ ನಾವು ತಯ್ಯಾರಿ ನಡೆಸುತ್ತೇವೆ. ಕಾರ್ಯಕರ್ತರು ಸಾಥ ನೀಡುವಂತೆ ರಮೇಶ ಅವರು ವಿನಂತಿಸಿದರು.


ಕಾರ್ಯಕ್ರಮಕ್ಕೂ ಮುನ್ನ ನಗರದ ಹೊರ ವಲಯದ ನಾಕಾ ನಂ ೧ಕ್ಕೆ ಆಗಮಿಸಿದ್ದ ಅವರ ಅಭಿಮಾನಿಗಳು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ, ತೆರೆದ ವಾಹನ ಹಾಗೂ ಬೈಕ ರ‍್ಯಾಲಿಯ ಮೂಲಕ ಮೆರವಣಿಗೆಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ನಂತರ ಲಕ್ಷ್ಮೀ  ದೇವಿ ದರ್ಶನ ಪಡೆದರು, ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ಅವರ ಅಭಿಮಾನಿಗಳು ಬೃಹತ ಆಕಾರದ ೨ಕ್ವಿಂಟಲ್ ತೂಕದ ಸೇಬು ಹಣ್ಣಿನ ಹಾರವನ್ನು ಹಾಕಿ ಸ್ವಾಗತಿಸಿದರು.

Related posts: