RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ದಾಸ ಶ್ರೇಷ್ಠ ಶ್ರೀ ಕನಕದಾಸರ ತತ್ವಾದರ್ಶಗಳು ಶತ ಶತಮಾನಗಳು ಕಳೇದರು ಇಂದಿಗೂ ಪ್ರಸ್ತುತವಾಗಿವೆ

ಗೋಕಾಕ:ದಾಸ ಶ್ರೇಷ್ಠ ಶ್ರೀ ಕನಕದಾಸರ ತತ್ವಾದರ್ಶಗಳು ಶತ ಶತಮಾನಗಳು ಕಳೇದರು ಇಂದಿಗೂ ಪ್ರಸ್ತುತವಾಗಿವೆ 

ದಾಸ ಶ್ರೇಷ್ಠ ಶ್ರೀ ಕನಕದಾಸರ ತತ್ವಾದರ್ಶಗಳು ಶತ ಶತಮಾನಗಳು ಕಳೇದರು ಇಂದಿಗೂ ಪ್ರಸ್ತುತವಾಗಿವೆ

 
ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ನ 15 :

 
ದಾಸ ಶ್ರೇಷ್ಠ ಶ್ರೀ ಕನಕದಾಸರ ತತ್ವಾದರ್ಶಗಳು ಶತ ಶತಮಾನಗಳು ಕಳೇದರು ಇಂದಿಗೂ ಪ್ರಸ್ತುತವಾಗಿವೆ. ಇಂದಿನ ಯುವ ಪೀಳಿಗೆ ಮೊಹದ ಬಲೆಗೆ ಸಿಲುಕಿ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ದಾಸ ಶ್ರೇಷ್ಠರ ಭಕ್ತಿಯ ಮಾರ್ಗದ ಮೂಲಕ ಜೀವನ ಪಾವನಗೋಳಿಸಿಕೋಳ್ಳ ಬೇಕು ಎಂದು ಕವಲಗುಡ್ಡದ ಹಣಮಾಪೂರದ ಸಿದ್ಧಶ್ರೀ ಸಿದ್ದಾಶ್ರಮ ಅಮರೇಶ್ವರ ಸ್ವಾಮೀಜಿಗಳು ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ತಾಲೂಕಾಡಳಿ, ಪುರಸಭೆ ಕಾರ್ಯಾಲಯ, ಪ್ರದೇಶ ಕುರುಬರ ಸಂಘದ ಸಂಯುಕ್ತಾಶ್ರಯದಲ್ಲಿ ಜರುಗಿದ 532 ನೇ ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತ್ಯೋತ್ಸವದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಅನುಬವಿಕರು ಹೇಳಿರುವ ಭಕ್ತಿ ಮಾರ್ಗದಲ್ಲಿ ನಡೆದಾಗ ಮಾತ್ರ ಜೀವನಕ್ಕೊಂದು ಆದರ್ಶಮಯ ವ್ಯಕ್ತಿತ್ವ ವಿಕಸನವಾಗುವದು. ಸಮಾಜದಲ್ಲಿ ನಡೆಯುವ ಪ್ರತಿಯೊಂದು ಘಟನಾವಳಿಯಲ್ಲಿ ಪ್ರತಿಯೊಬ್ಬರ ಪಾತ್ರ ಅಗತ್ಯವಿರುತ್ತದೆ. ಈ ಭಾಗದಲ್ಲಿ ಸಮೃದ್ಧವಾದ ಸಮಾಜವಿದ್ದರು ಶೈಕ್ಷಣಿಕವಾಗಿ, ಸಂಘಟನೆ ಮತ್ತು ರಾಜಕೀಯ ಪ್ರಾತಿನಿದ್ಯ ಸಿಗದಿರುವದು ವಿಷಾದನೀಯವಾಗಿದೆ ಎಂದರು.
ಯುವ ಪೀಳಿಗೆಗೆ ಆದರ್ಶಮಯ ಜೀವನ ಶೈಲಿ ಹಾಗೂ ಪರಸ್ಪರ ಸಹಕಾರದ ಜೀವನದಿಂದ ಅಭಿವೃದ್ಧಿಹೊಂದಲು ಸಾಧ್ಯವಾಗುವದು. ದುಷ್ಚಟಗಳಿಂದ ದೂರವಿದ್ದು ಸಮಾಜಮುಖಿ ಕಾರ್ಯಗಳಲ್ಲಿ ಕೈಜೋಡಿಸಬೇಕು. ವೈಚಾರಿಕ ನೆಲೆ ಗಟ್ಟಿನ ಮೇಲೆ ಸಮಾಜಿಕವಾಗಿ ತಾವು ಬೆಳೆಯುವದರ ಜೊತೆಗೆ ಇತರರ ಬೆಳವಣಿಗೆಯನ್ನು ಬಯಸಬೇಕು. ಸ್ವಾರ್ಥ ಬಿಟ್ಟು ಸನ್ಮಾರ್ಗದ ಹಾದಿಯಲ್ಲಿ ಮಕ್ಕಳಿಗೆ, ಅಸಹಾಯಕರಿಗೆ ಸಹಾಯಕರಾಗಿ ಸಮಾಜದ ಒಳಿತಿಗಾಗಿ ಶ್ರಮಿಸಿದಾಗ ಮಾತ್ರ ಸಹಬಾಳ್ವೆ ಸಾಧ್ಯವಾಗುವದು. ಬುದ್ದ ಬಸವ ಅಂಬೇಡ್ಕರಂತಹ ಮಹಾನ ಪುರುಷರ ತತ್ವಾದರ್ಶಗಳು ಎಂದಿಗೂ ಪ್ರಚಲಿತವಾಗಿದ್ದು ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ಮಾತು ಪ್ರಸ್ತುತ ಅತ್ಯಾವಶ್ಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರದೇಶ ಕುರುಬರ ಸಂಘದ ರಾಜ್ಯಾದ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ, ತಹಶೀಲ್ದಾರ ಡಿ.ಜೆ ಮಹಾತ, ತಾಲೂಕಾಧ್ಯಕ್ಷ ಡಾ. ಎಸ್ ಎಸ್ ಪಾಟೀಲ, ಮಾಯಪ್ಪ ರಾಜಾಪೂರ ಮಾತನಾಡಿ, ದಾಸ ಶ್ರೇಷ್ಠ ಕನಕದಾಸರ ಜೀವನ ಮತ್ತು ಅವರ ತತ್ವಾದರ್ಶಗಳು, ಕಿರ್ತನೆಗಳು ಹಾಗೂ ಅವರ ಬದುಕಿನ ಕುರಿತು ಮಾತನಾಡಿದರು.
ಭೀಮರಾವ್ ಘಂಟಿ ಅತಿಥಿ ಉಪನ್ಯಾಸ ನೀಡಿ, ಕನಕದಾಸರ ಕುರಿತು ಸವಿವರವಾಗಿ ಉಪನ್ಯಾಸ ಮಾಲಿಕೆ ನೀಡಿದರು.
ಕುಂಭ ಮೇಳ ಹಾಗೂ ಡೊಳ್ಳಿನ ವಾದ್ಯ ಕನಕದಾಸರ ಭಾವಚಿತ್ರಕ್ಕೆ ಸ್ಥಳೀಯ ಸಿದ್ಧ ಸಂಸ್ಥಾನ ಮಠದ ಪೀಠಾಧಿಕಾರಿ ಶ್ರೀ ಶ್ರೀಪಾದಬೋದ ಸ್ವಾಮೀಜಿ ಚಾಲನೆ ನೀಡಿದರು. ನಗರದ ಬಸವೇಶ್ವರ ವೃತ್ತ, ಸಂಗಪ್ಪಜ್ಜರ ವೃತ್ತ, ಕಲ್ಮೇಶ್ವರ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮ ವೃತ್ತ, ಕರೆಮ್ಮ ದೇವಿ ವೃತ್ತದ ಮುಖಾಂತರ ಭೀರೇಶ್ವರ ದೇವಸ್ಥಾನದಲ್ಲಿ ಮುಕ್ತಾಯಗೋಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಗುರುಗಳಾದ ದುಂಡಪ್ಪ ಒಡೆಯರ, ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಎಸ್.ಜಿ ಢವಳೇಶ್ವರ, ನಿವೃತ್ತ ತಾಲೂಕಾ ವೈಧ್ಯಾಧಿಕಾರಿ ಡಾ. ಆರ್ ಎಸ್ ಬೆನಚಿನಮರಡಿ, ಬಸವಂತ ಕಮತಿ, ಗೋಕಾಕ ಟಿ.ಎ.ಪಿ.ಎಮ್.ಸಿ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಮಾಜಿ ಜಿಪಂ ಸದಸ್ಯರಾದ ರಂಗಪ್ಪ ಇಟ್ಟನ್ನವರ, ಭೀಮಶಿ ಮಗದುಮ್, ಬಿಇಒ ಅಜೀತ ಮನ್ನಿಕೇರಿ, ಸಿಪಿಐ ವೇಂಕಟೇಶ ಮುರನಾಳ, ಪಿಎಸ್.ಐ ಮಲ್ಲಿಕಾರ್ಜುನ ಸಿಂಧೂರ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲಕರ, ಅನ್ವರ ನದಾಫ್, ಹನಮಂತ ಗುಡ್ಲಮನಿ, ಆನಂದ ಟಪಾಲ, ನಿವೃತ್ತ ಪ್ರಾಚಾರ್ಯ ಪ್ರೊ ಎಸ್ ಎಮ್ ಖಮದಾಳ, ಗಂಗಪ್ಪ ಹಳ್ಳೂರ, ಗಿರೀಶ ಹಳ್ಳೂರ, ಬಸಪ್ಪ ಸಾರಾಪೂರ, ಸಿದ್ದಣ್ಣ ಹಳ್ಳೂರ, ಸಂಗಪ್ಪ ಸುರನ್ನವರ, ಜಡೇಪ್ಪಾ ಮಂಗಿ, ಪ್ರಕಾಶ ಅಕ್ಕಡಿ, ಸಂತೋಷ ಬಸಳಿಗುಂದಿ, ಸಹದೇವ ಕಮತಿ ಹಾಗೂ ಮೂಡಲಗಿ ತಾಲೂಕಿನ ಅರಭಾಂವಿ ಮತಕ್ಷೇತ್ರ ಜನಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸಿದ್ದಣ್ಣ ದುರದುಂಡಿ ನಿರೂಪಿಸಿದರು. ಸಂಗಪ್ಪ ಕಟ್ಟಿಕಾರ ಸ್ವಾಗತಿಸಿ ಎಸ್.ಎಸ್ ಮಾವಿನಹಂಡಿ ವಂದಿಸಿದರು.

Related posts: