RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಪರೀಕ್ಷಾ ಕೇಂದ್ರಗಳಿಗೆ ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಧಿಡೀರ್ ಭೇಟಿ

ಗೋಕಾಕ:ಪರೀಕ್ಷಾ ಕೇಂದ್ರಗಳಿಗೆ ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಧಿಡೀರ್ ಭೇಟಿ 

 ಪರೀಕ್ಷಾ ಕೇಂದ್ರಗಳಿಗೆ ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಧಿಡೀರ್ ಭೇಟಿ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 17 :

 

 

ನಗರದಲ್ಲಿ ಎನ್ಎಮ್‌ಎಮ್ಎಸ್‌ ಮತ್ತು ಎನ್‌ಟಿಎಸ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ ಭೇಟಿ ನೀಡಿದರು.

ನಗರದ ಜಿಪಿಯುಸಿ ಶಾಲೆಗೆ ದಿಢೀರ್ ಭೇಟಿ ನೀಡಿದ ಡಿಡಿಪಿಐ ಪರೀಕ್ಷೆ ವ್ಯವಸ್ಥೆಯನ್ನು ಪರಿಶೀಲಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎನ್ ಟಿ ಎಸ್ ಸಿ ಪರೀಕ್ಷೆಗೆ 24 ಕೇಂದ್ರಗಳಲ್ಲಿ ಒಟ್ಟು 8310 ವಿದ್ಯಾರ್ಥಿಗಳು ಮತ್ತು ಎನ್ಎಮ್‌ ಎಮ್ ಸಿ   ಪರೀಕ್ಷೆಗೆ 34 ಕೇಂದ್ರಗಳಿಗಳಲ್ಲಿ ಒಟ್ಟು 9109 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆದಿದ್ದು ಶೇ 90 ಪ್ರತಿಶತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಪರೀಕ್ಷೆಯು ವಿದ್ಯಾರ್ಥಿಗಳಲ್ಲಿ ಸ್ವರ್ಧಾತ್ಮಕ ಮನೋಭಾವ ಬೆಳೆಸಲು ಬಹುಮುಖ್ಯ ಪಾತ್ರ ವಹಿಸಿದ್ದು ಪರೀಕ್ಷೆಗಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಲ್ಲಾ 8 ವಲಯಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವ ಮೂಲಕ ಪರೀಕ್ಷೆ ಎದುರಿಸಲು ತಯಾರಿ ಮಾಡಲಾಗಿದ್ದು , ಶಿಕ್ಷಕರು ವಿಶೇಷ ಕಾಳಜಿ ವಹಿಸಿ ತರಬೇತಿಗಳನ್ನು ನಡೆಸಿದ್ದಾರೆ 8 ಮತ್ತು 10 ತಗರತಿಯ ವಿದ್ಯಾರ್ಥಿಗಳಿಗಾಗಿ ಜರಗುವ ಈ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅನುಕೂಲಕರ ವಾಗಿದೆ ಎಂದು ಡಿಡಿಪಿಐ ಹಂಚಾಟೆ ತಿಳಿಸಿದ್ದಾರೆ

ಈ ಸಂದರ್ಭದಲ್ಲಿ ಗೋಕಾಕ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ , ಚಿಕ್ಕೋಡಿ ಉಪನಿರ್ದೇಶಕ ಕಛೇರಿಯ ಶಿಕ್ಷಣಾಧಿಕಾರಿ ಎ.ಸಿ.ಗಂಗಾಧರ , ಡಯಟ್ ಉಪನ್ಯಾಸಕ ಎಂ.ಡಿ.ಬೇಗ್ , ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಂ.ಬಿ.ಪಾಟೀಲ ಇದ್ದರು

Related posts: