ಗೋಕಾಕ:ಕಾಂಗ್ರೆಸ್ ಟಿಕೆಟ್ ತಪ್ಪಿಸಲು ರಮೇಶ್ ಜಾರಕಿಹೊಳಿ ಗೇಮ್ ಪ್ಲ್ಯಾನ್ : ಲಖನ್ ಆರೋಪ
ಕಾಂಗ್ರೆಸ್ ಟಿಕೆಟ್ ತಪ್ಪಿಸಲು ರಮೇಶ್ ಜಾರಕಿಹೊಳಿ ಗೇಮ್ ಪ್ಲ್ಯಾನ್ : ಲಖನ್ ಆರೋಪ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 17 :
ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ರಮೇಶ ಜಾರಕಿಹೊಳಿ ಗೇಮ್ ಪ್ಯ್ಲಾನ್ ಮಾಡಿದರು ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಗಂಭೀರವಾಗಿ ಆರೋಪಿಸಿದ್ದಾರೆ
ರವಿವಾರದಂದು ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇಷ್ಟು ದಿವಸ ಪ್ರೀತಿಯ ತಮ್ಮ ಎನ್ನುತ್ತಿದ್ದ ರಮೇಶ್ ಜಾರಕಿಹೊಳಿ ಈಗ ಚುನಾವಣೆಗೆ ಸ್ಪರ್ಧಿಸಿದ ಮೇಲೆ ತಮ್ಮ ಅಲ್ಲ ಅಂತಿದ್ದಾರೆ ದಿನಂಪ್ರತಿ ಒಂದೊಂದು ರೀತಿ ರಮೇಶ್ ಜಾರಕಿಹೊಳಿ ಹೇಳಿಕೆ ಕೊಡ್ತಾರೆ ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ ಎಂದ ಲಖನ್ ನಾನು ಸತೀಶ್ ಜಾರಕಿಹೊಳಿ ರಾಮ, ಲಕ್ಷ್ಮಣ, ಕೃಷ್ಣ ಅರ್ಜುನ ರೀತಿ ಇದ್ದಂತೆ ಡಿಸೆಂಬರ್ ಐದಲ್ಲ ಕಡೀತನಕ ನಾನು ರಮೇಶ್ ಜಾರಕಿಹೊಳಿ ಅವನ ತಮ್ಮನಲ್ಲ ನಮ್ಮ ಹೋರಾಟ ನಿರಂತರ ರಮೇಶ್ ಜಾರಕಿಹೊಳಿ ಅಳಿಯಂದಿರ ಭ್ರಷ್ಟಾಚಾರ ವಿರುದ್ಧ ಇರುತ್ತದೆ ಕಾಂಗ್ರೆಸ್ ಪಕ್ಷಕ್ಕೆ ಗೋಕಾಕ್ ಕ್ಷೇತ್ರ ಗೆಲ್ಲಿಸಿ ಉಡುಗೊರೆಯಾಗಿ ಕೊಡ್ತೇವೆ ಎಂದು ಲಖನ್ ಹೇಳಿದರು