ಗೋಕಾಕ:ರಮೇಶ ತಲೆ ಮೊಬೈಲ್ ಇದ್ದ ಹಾಗೇ, ಯಾವಾಗ ಬೇಕಾದ್ರು ಹ್ಯಾಂಗ್ ಆಗುತ್ತೆ : ಶಾಸಕ ಸತೀಶ ವ್ಯಂಗ್ಯ
ರಮೇಶ ತಲೆ ಮೊಬೈಲ್ ಇದ್ದ ಹಾಗೇ, ಯಾವಾಗ ಬೇಕಾದ್ರು ಹ್ಯಾಂಗ್ ಆಗುತ್ತೆ : ಶಾಸಕ ಸತೀಶ ವ್ಯಂಗ್ಯ
ನಮ್ಮ ಬೆಳಗಾವಿ ಇ – ವಾರ್ತೆ ಶ, ಗೋಕಾಕ ನ 17 :
ರಮೇಶನ ಮೆದುಳು ಖಾಲಿ ಇದೆ, ಅವರನ್ನು ಯಾರು ಗಂಭೀರವಾಗಿ ಪರಿಗಣಿಸಬೇಡಿ, ರಮೇಶ ತಲೆ ಮೊಬೈಲ್ ಇದ್ದ ಹಾಗೇ, ಯಾವಾಗ ಬೇಕಾದ್ರು ಹ್ಯಾಂಗ್ ಆಗುತ್ತೆ ಎಂದು ಶಾಸಕ ಹಾಗೂ ಮಾಜಿ ಸಚಿವ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.
ನಗರದ ತಮ್ಮ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರಮೇಶ ಮಂತ್ರಿ ಆಗಲು ಡಿ.ಕೆ. ಶಿವುಕುಮಾರ ಹಾಗೂ ಲಕ್ಷಿö್ಮÃ ಹೆಬ್ಬಾಳ್ಕರ್ ಕಾರಣ. ರಮೇಶ ಓರ್ವ ಹುಚ್ಚ, ಈತನನ್ನೇಕೆ ಮಂತ್ರಿ ಮಾಡಿದ್ರಿ ಎಂದು ಡಿಕೆಶಿ ಹಾಗೂ ಹೆಬ್ಬಾಳ್ಕರ್ ವಿರುದ್ಧ ನಾನು ಅಸಮಾಧಾನಗೊಂಡಿದ್ದೆ. ಅದನ್ನು ಬಿಟ್ಟರೆ ಈ ಇಬ್ಬರ ಮಧ್ಯೆ ವೈಯಕ್ತಿಕ ದ್ವೇಷ ನನಗಿರಲಿಲ್ಲ. ರಮೇಶನೇ ಡಿಕೆಶಿಯನ್ನು ಮಂತ್ರಿ ಮಾಡಲು ಹೊರಟಿದ್ದರು. ಜೊತೆಗೆ ಸಿದ್ದರಾಮಯ್ಯನವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವುದಾಗಿ ರಮೇಶ ಅವರು ಹಲವು ಬಾರಿ ಹೇಳಿದ್ದರು. ಈಗ ಅವರೇ ಉಲ್ಟಾ ಹೊಡೆದು ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಮಾತನಾಡುತ್ತಿದ್ದಾರೆ. ಉಪಚುನಾವಣೆ ಪ್ರಚಾರಕ್ಕೆ ಡಿಕೆಶಿ ಹಾಗೂ ಹೆಬ್ಬಾಳ್ಕರ್ ಇಬ್ಬರನ್ನೂ ಕರೆಸುತ್ತೇವೆ. ಅವರೇ ರಮೇಶ ವಿರುದ್ಧ ತಮ್ಮ ಅಭಿಪ್ರಾಯ ಹೇಳುತ್ತಾರೆ ಕೇಳಿ ಎಂದು ಹೊಸ ಬಾಂಬ್ ಸಿಡಿಸಿದರು.
ಇನ್ನು ಕಾಂಗ್ರೆಸ್ನಲ್ಲಿ ಕೈಚೀಲ ಹಿಡಿಬೇಕು, ಬಾಗಿಲು ಕಾಯಬೇಕು ಅಂತವರಿಗೆ ಮಾತ್ರ ಬೆಲೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ೨೫ ವರ್ಷ ರಮೇಶ ಜಾರಕಿಹೊಳಿ ಸಹ ಕೈಚೀಲ ಹಿಡಿದಿದ್ದಾನೆ. ಯಾವುದೇ ಪಕ್ಷದಲ್ಲಾದರು ಸ್ವಾಮಿನಿಷ್ಠೆ ಬೇಕು. ರಾಜಕೀಯದಲ್ಲಿ ಬೆಳೆಯೋಕೆ ಗಾಡ್ ಫಾದರ್ ಬೇಕೆ-ಬೇಕು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲಿಯೂ ಈ ಸಂಸ್ಕೃತಿ ಇದೆ. ಕೈಚೀಲ ಹಿಡಿಯೋದು ಅಂದರೆ ಚಮಚಾಗಿರಿ ಮಾಡೋದು ಅಂತ ಅಲ್ಲ. ರಮೇಶ ಜಾರಕಿಹೊಳಿ ಅವರು ಬಿ. ಶಂಕರಾನAದ ಅವರ ಕೈಚೀಲ ಹಿಡಿದು ಓಡಾಡಿದ್ರು. ಹೆಬ್ಬಾಳ್ಕರ್, ಡಿಕೆಶಿ ಹಾಗೂ ರಮೇಶ ಜಾರಕಿಹೊಳಿ ಒಂದೇ ಗ್ರೂಪ್ನಲ್ಲಿ ಇದ್ದವರು. ಆನಂತರ ಅವರ-ಅವರಲ್ಲಿಯ ಸಮಸ್ಯೆಯಿಂದಾಗಿ ರಮೇಶ ಹೊರ ಬಂದಿದ್ದಾರೆ ಎಂದರು.
ಷೇರು ಮಾರುಕಟ್ಟೆಯ ದರದಂತೆ ರಮೇಶ ಜಾರಕಿಹೊಳಿ ಅವರ ನಾಯಕರು ಕಾಲ-ಕಾಲಕ್ಕೆ ಬದಲಾಗುತ್ತಾರೆ. ರಮೇಶ ಮೊದಲು ಎಚ್.ಕೆ. ಪಾಟೀಲ್, ಎಸ್. ಎಂ. ಕೃಷ್ಣ ನಂತರ ಸಿದ್ದರಾಮಯ್ಯ ನಮ್ಮ ಲೀಡರ್ ಅಂದ್ರು. ರಮೇಶ ತನಗೆ ಹೇಗೆ ಬೇಕು ಹಾಗೆ ಬದಲಾಗುತ್ತಾರೆ. ಸುಳ್ಳು ಹೇಳುವುದರಲ್ಲಿ ರಮೇಶಗೆ ಪಿಹೆಚ್ಡಿ ಆಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ಈ ಹಿಂದೆ ಚಹಾ ಕುಡಿಯಲು ಹೋಗಿದ್ದು ನಿಜ. ಈಗ ಹೋಗಿಲ್ಲ, ಇನ್ನೂ ಮುಂದೆ ಹೋಗುತ್ತೇನೆ ಎಂದರು.
ಗೋಕಾಕ್ ಉಸ್ತುವಾರಿ ಹೊಣೆ ಲಕ್ಷ್ಮೀ ಹೆಬ್ಬಾಳ್ಕರ್ ಹೊತ್ತಿರುವುದರಿಂದ ಇನ್ಮುಂದೆ ಚಹಾ, ಊಟಕ್ಕೆ ಲಕ್ಷ್ಮಿ ಮನೆಗೆ ಹೋಗುತ್ತೇನೆ. ಇನ್ನು ಮುಂದೆ ನಾನು ಡಿಕೆಶಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಒಂದೇ. ಮೊದಲಿನಿಂದ ರಮೇಶ ಜಾರಕಿಹೊಳಿ ಸ್ವಾರ್ಥಿ. ನಾನು ಮೊದಲಿನಿಂದಲೂ ರಮೇಶನನ್ನು ವಿರೋಧಿಸುತ್ತೇನೆ. ಲಖನ್ ಮೊದಲಿನಿಂದಲೂ ಕಾಂಗ್ರೆಸ್‌ನಲ್ಲಿಯೇ ಇದ್ದಾರೆ ಈಗ ಗೋಕಾಕ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಎಂದು ತಿಳಿಸಿದರು.
ದಿ ೧೮ ನಗರದಲ್ಲಿ ಮೆರವಣಿಯ ಮೂಲಕ ಸಾಗಿ ಲಖನ್ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಜಿಲ್ಲೆಯ ನಾಯಕರು, ಕಾಂಗ್ರೇಸ್ ಪಕ್ಷದ ಚುನಾವಣಾ ವಿಕ್ಷಕ ಶಿವಾನಂದ ಪಾಟೀಲ್ ಆಗಮಿಸಲಿದ್ದಾರೆ ಎಂದು ತಿಳಿಸಿದರು.