ಗೋಕಾಕ:ರಮೇಶ ಕಾಂಗ್ರೆಸ್ ಪಕ್ಷ ಹಾಳು ಮಾಡಿ , ಈಗ ಬಿಜಿಪಿ ಹಾಳು ಮಾಡುಲು ಹೋಗಿದ್ದಾರೆ : ಪ್ರಥಮ ಬಾರಿ ಅದೃಷ್ಟ ಪರೀಕ್ಷೆಗಿಳಿದ ಲಖನ ಆರೋಪ
ರಮೇಶ ಕಾಂಗ್ರೆಸ್ ಪಕ್ಷ ಹಾಳು ಮಾಡಿ , ಈಗ ಬಿಜಿಪಿ ಹಾಳು ಮಾಡುಲು ಹೋಗಿದ್ದಾರೆ : ಪ್ರಥಮ ಬಾರಿ ಅದೃಷ್ಟ ಪರೀಕ್ಷೆಗಿಳಿದ ಲಖನ ಆರೋಪ
ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ನ 18 :
ಗೋಕಾಕ 18 : ಗೋಕಾಕ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಯುವ ಮುಖಂಡ ಲಖನ್ ಜಾರಕಿಹೊಳಿ ಸೋಮವಾರದಂದು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು
ನಗರದ ಕೊಳವಿ ಹಣುಮಂತ ದೇವರ ಗುಡಿಯಿಂದ ಬೃಹತ್ ಮೆರವಣಿಗೆಯಲ್ಲಿ ಸಾಗಿದ ಲಖನ್ ಜಾರಕಿಹೊಳಿ ಅವರಿಗೆ ಸಹೋದರ ಸತೀಶ ಜಾರಕಿಹೊಳಿ , ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ, ಮಾಜಿ ಸಚಿವ ವೀರಕುಮಾರ ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸಾಥ್ ನೀಡಿದರು
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲಖನ್ ಜಾರಕಿಹೊಳಿ ಕಾಂಗ್ರೆಸ್ ದಿಂದ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಾಗಿದೆ. ರಮೇಶ ಜಾರಕಿಹೊಳಿ ಅವರು ಮಾತ್ರ ಕಾಂಗ್ರೆಸ್ ಪಕ್ಷವನ್ನು ಬಿಟ್ಟಿದ್ದಾರೆ ಕಾರ್ಯಕರ್ತರು ಮತ್ತು ಮತದಾರರು ಪಕ್ಷ ಬಿಟ್ಟಿಲ್ಲಾ ,ಗೋಕಾಕ ರಾಜಕಾರಣವೇ ಬೇರೆ ರಾಜ್ಯ ರಾಜಕಾರಣವೇ ಬೇರೆ ,ಅದು ನಮಗೆ ಮಾತ್ರ ತಿಳಯುತ್ತದೆ ಮತದಾರರೇ ನಮ್ಮ ದೇವರು ಅವರ ಮೇಲೆ ನಮಗೆ ವಿಶ್ವಾಸ ವಿದೆ ಅತ್ಯಂತ ಬಹುಮತದಿಂದ ಗೆಲ್ಲಿಸುತ್ತಾರೆ . ನಾವು ಬೆನ್ನಿಗೆ ಚೂರಿ ಹಾಕ್ಕಿಲ್ಲ ರಮೇಶ ಅಳಿಯ 25 ವರ್ಷಗಳಿಂದ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ಈ ಸಲಾ ಕಫ್ ನಮದೇ ಎಂದು ಲಖನ್ ರಮೇಶ ಜಾರಕಿಹೊಳಿ ಈಗಾಗಲೇ ಕಾಂಗ್ರೆಸ್ ಪಕ್ಷ ಹಾಳು ಮಾಡಿದ್ದಾರೆ ಬಿಜೆಪಿಯೂ ಕೂಡಾ ಒಳ್ಳೆಯ ಪಕ್ಷ ಅದನ್ನು ಸಹ ರಮೇಶ ಹಾಳು ಮಾಡುತ್ತಾರೆ ಎಂದು ಸಹೋದರನ ವಿರುದ್ಧ ವಾಗ್ದಾಳಿ ನಡೆಸಿದರು
ಸತೀಶ ಜಾರಕಿಹೊಳಿ ಮಾತನಾಡಿ ನಾನು ಡಮ್ಮಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ ಅಧಿಕೃತ ಅಭ್ಯರ್ಥಿ ಲಖನ್ ನಾನು ಸಪೋಟಿವಾಗಿ ನಾಮಪತ್ರ ಸಲ್ಲಿಸಿದ್ದೇನೆ ಅಷ್ಟೇ. ಇದ್ದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಗೋಕಾಕ ಚುನಾವಣೆ ಕಣ ತ್ರಿಕೋನ ಸ್ವರ್ಧೆ ಉಂಟಾಗಲಿದೆ ನಮ್ಮದೆ ಆದಂತಹ ವೋಟ ಬ್ಯಾಂಕ್ ಇದೆ . ಈಗಾಗಲೇ 70 ಪ್ರತಿಶತ ಪ್ರಚಾರ ಮೂಗಿದ್ದಿದೆ . ಒಂದು ವೋಟ ದಿಂದ ಗೆದ್ದರು ಗೆದ್ದಂತೆ , ಲಕ್ಷ ಮತಗಳಿಂದ ಗೆದ್ದರು ಗೆದ್ದಂತೆ ಯಾವೂದಕ್ಕೂ ಮತದಾರರ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಜನ ನಮ್ಮ ಪರವಾಗಿದ್ದಾರೆ ಇದ್ದ ಶಾಸಕರನ್ನು ಬದಲಾವಣೆ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಸತೀಶ ಹೇಳಿದರು