ಗೋಕಾಕ:ರಮೇಶ ಹೇಳಿದಂತೆ ಕೇಳಿದರೆ ಒಳೆಯವರು ಇಲ್ಲದಿದ್ದರೆ ಬೆನ್ನಿಗೆ ಚೂರಿ ಹಾಕುವವರು : ಲಖನ್ ವ್ಯಂಗ್ಯ
ರಮೇಶ ಹೇಳಿದಂತೆ ಕೇಳಿದರೆ ಒಳೆಯವರು ಇಲ್ಲದಿದ್ದರೆ ಬೆನ್ನಿಗೆ ಚೂರಿ ಹಾಕುವವರು : ಲಖನ್ ವ್ಯಂಗ್ಯ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 19
ಕಳೆದ 25 ವರ್ಷಗಳಿಂದ ರಮೇಶ ಜಾರಕಿಹೊಳಿ ಅವರು ಹೇಳಿದ ಹಾಗೆ ಕೇಳುತ್ತಿದ್ದಾಗ ನಾವು ಒಳ್ಳೆಯದಾಗಿದ್ದೇವು ಆದರೆ ಇಂದು ಅವರು ಅಳಿಯನ ಭ್ರಷ್ಟಾಚಾರವನ್ನು ಹೊರ ತೆಗೆದಾಗ ನಾವು ಬೆನ್ನಿಗೆ ಚೂರಿ ಹಾಕಿದವರಂತೆ ಕಾಣುತ್ತಿದ್ದೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ನಾಮಪತ್ರ ಪರಿಶೀಲನೆ ನಂತರ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು
ಬೇರೆ ಕಡೆ ಜನ ಬೆನ್ನಿಗೆ ಚೂರಿ ಹಾಕಿದ್ರು ಎಂದರೆ ಎನಪ್ಪ ಇದು ಅಂತಾರೆ ಆದರೆ ನಮ್ಮ ಗೋಕಾಕ ತಾಲೂಕಿನ ಜನರಿಗೆ ಏ ಇದಾ ಬಿಡಪ್ಪ ಅಂತಾರೆ ನಾವು ಚೂರಾ ಹಾಕಿಲ್ಲ ರಮೇಶ ಜಾರಕಿಹೊಳಿ ಅವರೇ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಮತದಾರರಿಗೆ ಚೂರಿ ಹಾಕಿದ್ದಾರೆ ಎಂದು ಸಹೋದರ ತಮ್ಮ ಪ್ರತಿಸ್ವರ್ಧಿ ರಮೇಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದರು.
ನೀವು ಎಷ್ಟೆ ಟ್ವಿಸ್ಟ್ ಮಾಡಿ ಪ್ರಶ್ನೆ ಕೇಳಿದರೂ ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ, ಕಳೆದ 20 ವರ್ಷದಿಂದ ನಾನು ರ್ಯಾಂಕ್ ಸ್ಟೂಡೇಂಟ್ ನಾನು ಕ್ವಷನ್ ಪೇಪರ್ ಲೀಕ್ ಮಾಡಲ್ಲ, ಮಾಧ್ಯಮದವರನ್ನು ಸಹ ಅವರು ಕನ್ಪ್ಯೂಸ್ ಮಾಡುತ್ತಿದ್ದಾರೆ ಎಂದು ಲಖನ್ ಜಾರಕಿಹೊಳಿ ಹೇಳಿದರು