ಗೋಕಾಕ:ಶುಕ್ರವಾರ ಅಧಿಕೃತವಾಗಿ ಪ್ರಚಾರ : ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ
ಶುಕ್ರವಾರದಿಂದ ಅಧಿಕೃತವಾಗಿ ಪ್ರಚಾರ : ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ
ನಮ್ಮ ಬೆಳಗಾವಿ ಇ -ವಾರ್ತೆ , ಗೋಕಾಕ ನ 19 :
ನಿನ್ನೆಯಷ್ಟೇ ನಾಮಪತ್ರ ಸಲ್ಲಿಸುವ ಪ್ರತಿಕ್ರಿಯೆ ಮುಗಿದಿದ್ದೆ ಶುಕ್ರವಾರದಿಂದ ಅಧಿಕೃತವಾಗಿ ಚುನಾವಣಾ ಪ್ರಚಾರ ಕೇಗೋಳಲಾಗುವದು ಎಂದು ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಹೇಳಿದರು
ಮಂಗಳವಾರದಂದು ನಗರದ ಮಿನಿ ವಿಧಾನಸೌಧದಲ್ಲಿ ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಮುಗೆಯಿಸಿ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು
ಈ ಚುನಾವಣೆ ಪ್ರತಿಷ್ಠೆಯಾಗಿ ತಗೆದುಕೊಂಡಿರುವ ಮಾಜಿ ಸಿ.ಎಂ ಕುಮಾರಸ್ವಾಮಿ ಅವರು ಗೋಕಾಕ ಉಪ ಚುನಾವಣೆಯ ಎಲ್ಲ ಜವಾಬ್ದಾರಿಗಳನ್ನು ತಗೆದುಕೋಳುತ್ತಾರೆಂದು ಹೇಳಿದ್ದಾರೆ ಈ ಕಾರಣದಿಂದ ನನ್ನ ಸ್ವರ್ಧೆಗೆ ಇನ್ನೂ ಹೆಚ್ಚಿನ ಶಕ್ತಿ ಬಂದಿದೆ ಎಂದ ಅಶೋಕ ಈ ಬಾರಿಯ ಚುನಾವಣೆಯಲ್ಲಿ ಸ್ವಾಭಿಮಾನದ ಬದುಕಿಗೆ ಹೊಸ ಆಯಾಮ ದೊರೆಯಲಿದೆ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು
ನಾವು ಯಾರ ಬಗ್ಗೆಯೂ ಸುಳ್ಳು ಪ್ರಚಾರ ಮಾಡಿಲ್ಲ ನಮ್ಮ ಹೋರಾಟ ಏನಿದ್ದರು ಸರ್ವಾಧಿಕಾರಿ ಧೋರಣೆ ವಿರುದ್ಧ ಇದು ಸುಳ್ಳು ಆಗಿದ್ದರೆ ನಿವೇ ಗೋಕಾಕ ನಗರದ ಗಲ್ಲಿಗಳಲ್ಲಿಗೆ ಹೋಗಿ ಸರ್ವೇ ಮಾಡಿ ಎಂದು ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು ಸತ್ಯ ಯಾವತ್ತಾದರೂ ಸತ್ಯನ್ನೇ ಬರುವ ದಿನಗಳಲ್ಲಿ ಜನರೆ ಇದ್ದಕ್ಕೆ ಉತ್ತರಿಸಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಹೇಳಿದರು