RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ : ಎಫ್.ಜಿ.ಚಿನ್ನನವರ

ಗೋಕಾಕ:ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ : ಎಫ್.ಜಿ.ಚಿನ್ನನವರ 

ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ : ಎಫ್.ಜಿ.ಚಿನ್ನನವರ

ಗೋಕಾಕ ಜು 29: ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ. ಚಿನ್ನನವರ ಹೇಳಿದರು.

ಅವರು ಶನಿವಾರದಂದು ನಗರದ ಸಮುದಾಯ ಭವನದಲ್ಲಿ ಗ್ರಾಮೀಣ ಕೂಟ ಮತ್ತು ನವ್ಯ ದಿಶಾ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಗ್ರಾಮೀಣ ಕೂಟ ಸದಸ್ಯರ ಸಾಮಾಜಿಕ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡದೇ ಸ್ವಚ್ಚತೆಯಿಂದ ಇಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾವು ಪರಿಸರ ಬಗ್ಗೆ ಕಾಳಜಿ ವಹಿಸದೇ ಇರುವುದರಿಂದ ರೋಗರುಜಿನಗಳು ಹೆಚ್ಚಾಗಿ ಹರಡುತ್ತಿವೆ, ಆರೋಗ್ಯವಾಗಿ ಇದ್ದರೇ ಎನೆಲ್ಲಾ ಸಾಧನೆ ಮಾಡಬಹುದಾಗಿದೆ. ಮಹಿಳೆಯರು ಬಯಲಲ್ಲಿ ಬಹಿರ್ದೆಸೆಗೆ ಹೋಗುತ್ತಿರುವುದರಿಂದ ಅತ್ಯಾಚಾರದಂತಹ ಪ್ರಕರಣಗಳು ಹಾಗೂ ವಿಷಜಂತುಗಳು ಕಚ್ಚಿ ಪ್ರಾಣ ಹಾನಿಯಾದ ಘಟನೆಗಳನ್ನು ಕಂಡರೂ ಕೂಡಾ ಇಂದು ನಾವಿನ್ನು ಎಚ್ಚೆತ್ತು ಕೊಂಡಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. ಮದುವೆ ಮುಂಜಿ, ಮನೆಗಳ ನಿರ್ಮಾಣಕ್ಕಾಗಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡುವವರು ಇಂದು ಶೌಚಾಲಯಗಳು ಕೇವಲ ಸಾವಿರಾರು ರೂ.ಗಳಲ್ಲಿ ನಿರ್ಮಿಸಬಹುದಾದರೂ ಕೂಡಾ ಇತ್ತ ಗಮನ ಹರಿಸದಿರುವುದು ಖೇಧಕರ ಸಂಗತಿಯಾಗಿದೆ ಎಂದರಲ್ಲದೇ ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರ ಸಹಾಯ ಧನಗಳನ್ನು ನೀಡುತ್ತಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಕುಟುಂಬವನ್ನು ಆರೋಗ್ಯವಂತವಾಗಿ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.

ಗ್ರೇಡ್-2 ತಹಶೀಲದಾರ ಎಸ್.ಕೆ.ಕುಲಕರ್ಣಿ ಹಾಗೂ ಶಹರ ಠಾಣೆಯ ಎಎಸ್‍ಐ ಬಿ.ಜಿ.ಖಿಚಡಿ ಮಾತನಾಡಿ ಸ್ವಚ್ಛತೆಗಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಂಘ ಸಂಸ್ಥೆಗಳು ಕೂಡಾ ಸರ್ಕಾರದೊಂದಿಗೆ ಕೈ ಜೋಡಿಸಿ ಕಾರ್ಯನಿರ್ವಹಿಸುತ್ತಿವೆ. ಶಹರ ಪ್ರದೇಶಗಳಲ್ಲಿ ವ್ಯಯಕ್ತಿಕ ಶೌಚಾಲಯಗಳು ನಿರ್ಮಾಣದ ಪ್ರಮಾಣ ಹೆಚ್ಚಿವೆ. ಆದರೇ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಇದ್ದು ಗ್ರಾಮೀಣ ಪ್ರದೇಶ ಜನತೆ ಎಚ್ಚೆತ್ತುಕೊಂಡು ಶೌಚಾಲಯಗಳನ್ನು ಹಾಗೂ ಶುದ್ಧ ಕುಡಿಯುವ ನೀರಿಗಾಗಿ ನಳಗಳನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಬೆಳಗಾವಿಯ ಗ್ರಾಮೀಣ ಕೂಟದ ಪ್ರಾದೇಶಿಕ ವ್ಯವಸ್ಥಾಪಕ ವೆಂಕಟನಾಯಕ ಅವರು ಆರ್ಥಿಕ ಸಾಕ್ಷರತೆ ಕುರಿತು ತಮ್ಮ ವಿಚಾರಧಾರೆಗಳನ್ನು ಚಿತ್ರ ಪ್ರದರ್ಶನದ ಮೂಲಕ ವಿವರಿಸಿದರು. ಬೆಂಗಳೂರಿನ ಕಾರ್ಯಕ್ರಮಗಳ ಸಂಯೋಜಕ ರೋಹನ ಮಲ್ಲಿಕ, ವಲಯ ವ್ಯವಸ್ಥಾಪಕ ವಿಶ್ವನಾಥ ಜಿ.ವಿ. ಅವರು ಶಿಬಿರಾರ್ಥಿಗಳಿಗೆ ಸಂಸ್ಥೆಗಳ ದ್ಯೇಯೋದ್ಧೇಶಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದರು. ತುಮಕೂರು ಜಿಲ್ಲೆಯ ಮಧುಗಿರಿ ಜನ-ಜಾಗೃತಿ ಕಲಾ ತಂಡದಿಂದ ನೀರು ಮತ್ತು ನೈರ್ಮಲ್ಯದ ಕುರಿತು ನಾಟಕ ಪ್ರದರ್ಶಿಸಿದರು.

ವೇದಿಕೆ ಮೇಲೆ ಬೆಂಗಳೂರಿನ ನವ್ಯ ದಿಶ ಸಂಸ್ಥೆಯ ಸಹಾಯಕ ಸಂಯೋಜಕ ಕಿರಣ ಕುಲಕರ್ಣಿ, ಬೆಳಗಾವಿ ಅಭಿವೃದ್ದಿ ಅಧಿಕಾರಿಗಳಾದ ವಿರೇಶ ಹಿರೇಮಠ, ಹಣಮಂತಗೌಡ ಪಾಟೀಲ, ಈರಣ್ಣ ನಭಾಪೂರಿ, ಗೋಕಾಕ ಶಾಖಾ ವ್ಯವಸ್ಥಾಪಕ ಕೆ.ಜಿ.ಜಾಧವ ಇದ್ದರು.
ಪ್ರಕಾಶ ಕಲ್ಲಗೌಡರ ಸ್ವಾಗತಿಸಿದರು, ಮಮತಾ ಗೋಸಾವಿ ನಿರೂಪಿಸಿದರು, ಲಕ್ಷ್ಮಣ ತೋಳಿ ವಂದಿಸಿದರು.

Related posts: