RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮಿಲನ ಆಗಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮಿಲನ ಆಗಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ 

ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮಿಲನ ಆಗಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 20 :

 

 
ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮಿಲನ ಆಗಿದೆ ಎಂದು ಕೆಎಂಎಫ್ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು
ಬುಧವಾರ ಗೋಕಾಕ ನಗರದ ಎನ್ಎಸ್ಎಫ್ ಅತಿಥಿಗೃಹದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು
ಹಳೇಯ ಬಿಜೆಪಿ,‌ಹೊಸ ಬಿಜೆಪಿ ಅಂತ ಬೇಧಬಾವ‌ ಮಾಡದೆ ಪ್ರದಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪನವರ ಸಾಧನೆಗಳನ್ನು ಜನರ ಮನೆ ಮನೆಗೆ ತಲುಪಿಸಬೇಕು.ಇದೇ 22 ರಿಂದ ಪ್ರತಿ ಮನೆ ಮನೆಗೆ ಹೋಗಿ ಪ್ರಚಾರ ಕಾರ್ಯ ಆರಂಭಿಸಿ ರಮೇಶ ಜಾರಕಿಹೊಳಿ ಅವರ ಗೆಲುವಿಗೆ ಶ್ರಮಿಸಬೇಕು
ಚುನಾವಣೆ ವೈಯಕ್ತಿಕ ಜಗಳನ್ನು ತರಬಾರದು.
ಇಲಿಗೆ ಪೆಟ್ಟು ಕೊಡಕೆ ಹೋಗಿ ಗಣಪತಿಗೆ ಹಾನಿ ಹಾಗಬಾರದು ಹಿಂತಹ ಸೂಕ್ಷ್ಮ ವಿಚಾರಗಳನ್ನು ಪರಿಗಣಿಸಿ ಕಾರ್ಯಕರ್ತರು ಒಗ್ಗಟಿನಿಂದ ಪಕ್ಷದ ಪರವಾಗಿ ಕೆಲಸ ಮಾಡಬೇಕೆಂದ ಬಾಲಚಂದ್ರ ಜಾರಕಿಹೊಳಿ ಅವರು ಪ್ರತಿ ಗ್ರಾಮದಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಲಾಗುವದು ಎಂದು ಹೇಳಿದರು

ರಮೇಶ ಜಾರಕಿಹೊಳಿ‌ ಗಟ್ಟಿತನನಿಂದ ಸರ್ಕಾರ ಬಂದಿದೆ :
ರಮೇಶ ಜಾರಕಿಹೊಳಿ ಅವರ ಗಟ್ಟಿ ನಿರ್ಧಾರದಿಂದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದು ವಿರಶೈವ ಮತ್ತು ಲಿಂಗಾಯತ ಸಮೂದಾಯ ಒಂದೊಂದು ಮತ ಸಿಎಂ ಯಡಿಯೂರಪ್ಪನವರಿಗೆ ತಲುಪಲಿದೆ. ಗೋಕಾಕ್ ಕ್ಷೇತ್ರದ ಜನರಿಗೆ ವಿಭಿನ್ನವಾದ ಅವಕಾಶ ಸಿಕ್ಕಿದ್ದು, ರಮೇಶ ಜಾರಕಿಹೊಳಿ ಅವರನ್ನು ಆಯ್ಕೆಮಾಡಿದರೆ ಒಬ್ಬ ಸಚಿವನನ್ನು ಆಯ್ಕೆ ಮಾಡಿದಂತೆ ಆಗುತ್ತದೆ ಎಂದು ತಿಳಿಸಿದರು
ಗೋಕಾಕ ಕ್ಷೇತ್ರದಲ್ಲಿ ಜವಾಬ್ದಾರಿ ಹೊತ್ತು ಕೆಲಸ : ನಾನು ಗೋಕಾಕ ಕ್ಷೇತ್ರದಲ್ಲಿ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತೇನೆ ಮತದಾರರು ಚುನಾವಣೆಯಲ್ಲಿ ದೈರ್ಯದಿಂದ ಬಿಜೆಪಿ ಪರ ಕೆಲಸ ಮಾಡಿ ಎಂದು ದೈರ್ಯ ತುಂಬಿದ ಬಾಲಚಂದ್ರ ಅವರು ಚುನಾವಣೆ ನಂತರ ರಮೇಶ ಜಾರಕಿಹೊಳಿ ಸ್ವಂದಿಸದಿದ್ದರೆ ನಾನಿದ್ದೇನೆ.
ನನ್ನ ಮನೆಯ ಬಾಗಿಲು 24 ಘಂಟೆ ತೆಗದಿರುತ್ತದೆ.
ನಾನು ರಮೇಶ ಜಾರಕಿಹೊಳಿ‌ ಕಿವಿ‌ ಹಿಡಿದು ಕೆಲಸ ಮಾಡಿಸುತ್ತೇನೆ.ನಮ್ಮ ಮನೆಯ ಅಂಗಡಿ ಮಧ್ಯಾಹ್ನ 2 ಘಂಟೆಯಿಂದ ಆರಂಭವಾಗಲಿದೆ.ಒಮ್ಮೆ ಆರಂಭವಾದ್ರೆ ರಾತ್ರಿ 2 ಗಂಟೆಯ ವರೆಗೆ ಇರಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಜಾರಕಿಹೊಳಿ‌ ಕುಟುಂಬಕ್ಕೆ ಯಡಿಯೂರಪ್ಪಗೆ ಅವಿನಾಭಾವ ಸಂಬಂಧವಿದೆ : ಶಾಸಕ ನಡಹಳ್ಳಿ
ಸಿಎಂ ಯಡಿಯೂರಪ್ಪ ಹುಟ್ಟು ಹೋರಾಟಗಾರ.ಈ ಹಿಂದೆ ಯಡಿಯೂರಪ್ಪ ಅವರನ್ನು ಮತ್ತು ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಲು ಬಾಲಚಂದ್ರ ಜಾರಕಿಹೊಳಿ ಅವರು ಸಹಾಯ ಮಾಡಿದ್ರು ಎಂದು ಶಾಸಕ ನಡಹಳ್ಳಿ ಹೇಳಿದರು
ಯಡಿಯೂರಪ್ಪ ಬಹುಮತ ಪಡೆಯಲು ಈ ಹಿಂದೆ ಅನೇಕ ಸಲ ಜಾರಕಿಹೊಳಿ‌ ಕುಟುಂಬ ಸಹಾಯ ಮಾಡಿದೆ.ಗೋಕಾಕ್ ಉಪಚುನಾವಣೆ ಅವಶ್ಯಕತೆ ಜಾರಕಿಹೊಳಿ‌ ಕುಟುಂಬಕ್ಕೆ ಇರಲಿಲ್ಲ.
ಸಮ್ಮಿಶ್ರ ಸರ್ಕಾರದಲ್ಲಿ ರಮೇಶ ಜಾರಕಿಹೊಳಿ‌ ಮಂತ್ರಿಯಾಗಿದ್ರು ಅವರು ಮಂತ್ರಿಯಾಗಿ ಇರಬಹುದು ಇತ್ತು.ಮೂರು ತಿಂಗಳು ನ್ಯಾಯಾಲದಲ್ಲಿ ಓಡಾಡುವ ಪರಿಸ್ಥಿತಿ ಬರುತ್ತಿರಲಿಲ್ಲ.ಯಡಿಯೂರಪ್ಪ ಸಿಎಂ ಮಾಡಲು ರಮೇಶ ಜಾರಕಿಹೊಳಿ‌ ತ್ಯಾಗ ಮಾಡಿದ್ದಾರೆ.
ರಮೇಶ ಜಾರಕಿಹೊಳಿ‌ ಒಬ್ಬರೇ ಅಲ್ಲ 17 ಜನ ಶಾಸಕರನ್ನು ಕರೆದುಕೊಂಡ ಹೋದ್ರು.
ಮಂತ್ರಿ ಪದವಿ ತೆಗೆದ್ರು, ಅಪಮಾನ ಮಾಡಿದ್ರು.
ಕೆಲವರು ತೋಳ ಬಂತು ತೋಳ ಎಂದು ಅಪಹಾಸ್ಯ ಮಾಡಿದರು.ಬಹಳ ಚಾಣಾಕ್ಷತನಿಂದ ಸಾಮೂಹಿಕ ರಾಜೀನಾಮೆ ನೀಡಿ ಸರಕಾರ ರಚಿಸಲು ಸಹಕಾರ ನೀಡಿದ್ದಾರೆ ನೀಡಿದ್ದಾರೆ.ರಮೇಶ ಜಾರಕಿಹೊಳಿ‌ ಒಬ್ಬ ಉತ್ತರ ಕರ್ನಾಟಕದ ಹಿರೋ ಎಂದು ಶಾಸಕ ನಡಹಳ್ಳಿ ಹೇಳಿದರು

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷ ಡಾ‌. ವಿಶ್ವನಾಥ್ ಪಾಟೀಲ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಮತ್ತು ಗೋಕಾಕ ಮತಕ್ಷೇತ್ರದ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು

Related posts: