RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಅಶೋಕ ಪೂಜಾರಿ ಮನೆ ಮುಂದೆ ನಾಮಪತ್ರ ಹಿಂಪಡೆಯಲು ಹೈಡ್ರಾಮಾ : ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಭೇಟಿ ಸಂಧಾನ ವಿಫಲ

ಗೋಕಾಕ:ಅಶೋಕ ಪೂಜಾರಿ ಮನೆ ಮುಂದೆ ನಾಮಪತ್ರ ಹಿಂಪಡೆಯಲು ಹೈಡ್ರಾಮಾ : ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಭೇಟಿ ಸಂಧಾನ ವಿಫಲ 

ಅಶೋಕ ಪೂಜಾರಿ ಮನೆ ಮುಂದೆ ನಾಮಪತ್ರ ಹಿಂಪಡೆಯಲು ಹೈಡ್ರಾಮಾ : ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಭೇಟಿ ಸಂಧಾನ ವಿಫಲ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 21 :

 
ಉಪ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದ್ದು , ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರ ಮನವಲಿಸುವ ಕಸರತ್ತು ಜೋರಾಗಿ ನಡೆದಿದೆ

ಗುರುವಾರದಂದು ಅಶೋಕ ಪೂಜಾರಿ ಅವರ ಮನವಲಿಸಲುವ ಕಸರತ್ತಿ ಮುಂದಾದ ಬಿಜೆಪಿಯ ಸ್ಥಳೀಯ ನಾಯಕರಾದ ಬಿಜೆಪಿ ನಾಯಕರಾದ ಡಾ.ವಿಶ್ವನಾಥ್ ಪಾಟೀಲ, ಮಹಾಂತೇಶ ತಾಂವಶಿ , ಶಾಮಾನಂದ ಪೂಜಾರಿ ಸೇರಿದಂತೆ ಕೆಲವರು ಅಶೋಕ ಪೂಜಾರಿ ಅವರ ಜ್ಞಾನ ಮಂದಿರಕ್ಕೆ ಬೇಟಿ ನೀಡಿ ಅಶೋಕ ಪೂಜಾರಿ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮನವಲಿಕೆ ಪ್ರಯತ್ನ ನಡೆಸಿದರು

ಇದರ ಬೆನ್ನಲ್ಲೇ ಅಶೋಕ ಪೂಜಾರಿ ಬೆಂಬಲಿಗರು ಬಿಜೆಪಿ ನಾಯಕರ ಹಿಂದೆ ಹೋಗೊದಾದ್ರೆ ವಿಷ ಉಣಿಸಿ ಹೋಗಿ ಬಾವಿಗೆ ತಳ್ಳಿ ಹೋಗಿ,ಅಶೋಕ್ ಪೂಜಾರಿ ತಂಗಿರುವ ಜ್ಞಾನ ಮಂದಿರದ ಮುಂದೆ ಅಶೋಕ್ ಬೆಂಬಲಿಗರ ಪ್ರತಿಭಟನೆ ನಡೆಸಿದ್ದಾರೆ

ವಿಧಾನ ಪರಿಷತ್ ಸದಸ್ಯ ಮಹಾತೇಶ ಕವಟಗಿಮಠ ಭೇಟಿ ಮನವಲಿಕೆ ಯತ್ನ ಸಂಧಾನ ವಿಫಲ :

ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಮಹಾತೇಶ ಕವಟಗಿಮಠ ಅವರು ಅಶೋಕ ಪೂಜಾರಿ ಅವರು ತಂಗಿರುವ ಜ್ಞಾನ ಮಂದಿರಕ್ಕೆ ಭೇಟಿನೀಡಿ ಬಿಜೆಪಿ ಪಕ್ಷಕ್ಕಾಗಿ ನಿಮಗಾಗಿ ಇಲ್ಲವನ್ನು ಮಾಡಿದೆ ಈ ಭಾರಿ ಪಕ್ಷಕ್ಕಾಗಿ ತ್ಯಾಗ ಮಾಡುವಂತೆ ವಿನಂತಿಸಿದ ಘಟನೆ ನಡೆಯಿತು ಆದರ ಸಂಧಾನಕ್ಕೆ ಅಡತಡೆ ಉಂಟು ಮಾಡಿದ ಅಶೋಕ ಪೂಜಾರಿ ಅವರ ಕೆಲ ಬೆಂಬಲಿಗರು ಮಹಾಂತೇಶ ಕವಟಗಿಮಠ ಅವರ ಮುಂದೆ ಭ್ರಷ್ಟ ವ್ಯವಸ್ಥೆಗೆ ಧಿಕ್ಕಾರ ಎಂದು ಕೂಗಿದ ಘಟನೆ ಜರುಗಿತ್ತು

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಮಹಾಂತೇಶ ಕವಟಗಿಮಠ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಸಿಎಂ ಯಡಿಯೂರಪ್ಪ ಅವರ ನಿರ್ದೇಶನದ ಮೆರೆಗೆ ಅಶೋಕ ಪೂಜಾರಿ ಅವರನ್ನು ಸ್ವರ್ಧೆಯಿಂದ ಹಿಂದೆ ಸರಿದು ಬಿಜೆಪಿ ಯನ್ನು ಬೆಂಬಲಿಸುವಂತೆ ಮನವಲಿಸಲು ಬಂದಿದ್ದು , ಅವರು ಮಾನಸಿಕವಾಗಿ ಸ್ವರ್ಧೆಯಿಂದ ಹಿಂದೆ ಸರಿಯಲು ತಯಾರಿದ್ದರು ಸಹ ಕೆಲ ಒತ್ತಡಗಳಿಂದ ಅದು ಸಾಧ್ಯವಾಗಲಿಲ್ಲ ಮುಂದಿನ ದಿನಗಳಲ್ಲಿ ಅವರನ್ನು ಪಕ್ಷಕ್ಕೆ ಬರುವ ವಿಶ್ವಾಸವಿದೆ ಎಂದು ಹೇಳಿದರು

Related posts: