RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರನ್ನು ಮುಗಿಸುವ ಹುನ್ನಾರ ನಡೆದಿದೆ : ಬಿಜೆಪಿ ಅಭ್ಯರ್ಥಿ ರಮೇಶ ಆರೋಪ

ಗೋಕಾಕ:ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರನ್ನು ಮುಗಿಸುವ ಹುನ್ನಾರ ನಡೆದಿದೆ : ಬಿಜೆಪಿ ಅಭ್ಯರ್ಥಿ ರಮೇಶ ಆರೋಪ 

ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರನ್ನು ಮುಗಿಸುವ ಹುನ್ನಾರ ನಡೆದಿದೆ : ಬಿಜೆಪಿ ಅಭ್ಯರ್ಥಿ ರಮೇಶ ಆರೋಪ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 21 :

 

 

ಸದ್ಯ ಕಾಂಗ್ರೇಸ್ ಪಕ್ಷ ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿ ಕಾಂಗ್ರೇಸ್ ಪಕ್ಷವಾಗಿ ಉಳಿದಿಲ್ಲ. ಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ಅಲ್ಲಿ ಬೆಲೆಯಿಲ್ಲ. ಹಿರಿಯರನ್ನು ಮುಗಿಸುವ ಹುನ್ನಾರ ನಡೆದಿದೆ. ಹೀಗಾಗಿ ಕಾಂಗ್ರೇಸ್ ಪಕ್ಷ ತೋರೆದು ಬಿಜೆಪಿಯಿಂದ ಸ್ಫರ್ಧಿಸಿದ್ದು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈ ಬಲಪಿಸಲು ಬಿಜೆಪಿಗೆ ಮತ ನೀಡುವಂತೆ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು.
ಅವರು, ತಾಲೂಕಿನ ಕೊಳವಿ, ಗಿಳಿಹೊಸುರ, ಖನಗಾಂವ, ಮಿಡಕನಟ್ಟಿ, ಕ್ಯಾಶಪನಟ್ಟಿ, ನಭಾಪೂರ, ದೇವಗೌಡನಹಟ್ಟಿ, ಗುದನಟ್ಟಿ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿ ಮಾತನಾಡಿ, ರಾಜ್ಯದಲ್ಲಿ ಒಳ್ಳೆಯ ಸುಭದ್ರ ಆಡಳಿತವನ್ನು ನೀಡುವ ದ್ರಷ್ಟಿಯಿಂದ ಬಿಜೆಪಿಯಿಂದ ಸ್ಫರ್ಧಿಸಿದ್ದೆನೆ. ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡುವಂತೆ ಅಭ್ಯರ್ಥಿ ರಮೇಶ ಜಾರಕಿಹೊಳಿ ಮತದಾರರಲ್ಲಿ ಮನವಿ ಮಾಡಿದರು.
ಕೊಳವಿ, ಗಿಳಿಹೊಸುರ, ಖನಗಾಂವ, ಮಿಡಕನಟ್ಟಿ, ಕ್ಯಾಶಪನಟ್ಟಿ, ನಭಾಪೂರ, ದೇವಗೌಡನಹಟ್ಟಿ, ಗುದನಟ್ಟಿ ಗ್ರಾಮಗಳಿಗೆ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಆಗಮಿಸುತ್ತಿದ್ದಂತೆ ಸುಮಂಗಲೆಯರು ಆರತಿ ಮಾಡಿ ಸ್ವಾಗತಿಸಿದರು. ಎಲ್ಲ ಗ್ರಾಮಗಳಲ್ಲಿ ಪಾದಯಾತ್ರೆಯ ಮೂಲಕ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ರಮೇಶ ಜಾರಕಿಹೊಳಿ ಅಭಿಮಾನಿಗಳು ಹಾಗೂ ಸಾವಿರಾರು ಗ್ರಾಮಸ್ಥರು ಇದ್ದರು.

Related posts: