ಗೋಕಾಕ:ಉಪ ಚುನಾವಣೆ ಗೋಕಾಕ್ ಎಂಎಲ್ಎ ಬದಲಾವಣೆ ಮಾಡುವ ಚುನಾವಣೆ : ಶಾಸಕ ಸತೀಶ ಜಾರಕಿಹೊಳಿ
ಉಪ ಚುನಾವಣೆ ಗೋಕಾಕ್ ಎಂಎಲ್ಎ ಬದಲಾವಣೆ ಮಾಡುವ ಚುನಾವಣೆ : ಶಾಸಕ ಸತೀಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 24 :
‘ಇದು ಕಾಂಗ್ರೆಸ್ -ಬಿಜೆಪಿ, ಮೋದಿ, ಶಾ, ಯಡಿಯೂರಪ್ಪ -ಇಂದಿರಾ , ಸೋನಿಯಾ ಹಾಗೂ ರಾಹುಲ್ ಗಾಂಧಿ ಚುನಾವಣೆಯಲ್ಲ.ಬದಲಾಗಿ ಗೋಕಾಕ್ ಎಂಎಲ್ಎ ಬದಲಾವಣೆ ಮಾಡುವ ಚುನಾವಣೆ’ ಎನ್ನುವ ಮೂಲಕ ಈ ಬಾರಿ ರಮೇಶ್ ಜಾರಕಿಹೊಳಿ ಯನ್ನ ಮನೆಗೆ ಕಳುಹಿಸಿ ಎಂದು ಶಾಸಕ ಸತೀಶ್ ಜಾರಕಿಹೊಳಿ ಮತದಾರರಿಗೆ ಮನವಿ ಮಾಡಿದ್ರು.
ಇಂದು ಗೋಕಾಕ್ ವಿಧಾನಸಭಾ ಕ್ಷೇತ್ರದ ಜಲಾಲ್ ಗಲ್ಲಿ ಸಹೋದರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಮತಯಾಚನೆ ನಡೆಸಿದ ಅವರು, ಹಿರಿಯ ಸಹೋದರ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು.
ಸದ್ಯ ಉಪಚುನಾವಣೆಯಲ್ಲಿ ನಡೆಯುತ್ತಿರುವುದು ಕಾಂಗ್ರೆಸ್-ಬಿಜೆಪಿ ಜಗಳವಲ್ಲ. ಬದಲಾಗಿ ಅಭಿವೃದ್ಧಿ ಸಲುವಾಗಿ ನಡೆಯುತ್ತಿರುವ ಕದನ.
ಇಲ್ಲಿಯ ಎಂ.ಎಲ್.ಎ ಕಳೆದ 25 ವರ್ಷಗಳಿಂದ ಸರ್ಕಾರದಿಂದ ಒಂದು ಯೋಜನೆಯನ್ನೂ ತಂದಿಲ್ಲ. ಅಭಿವೃದ್ಧಿ ಮಾಡಲು ಮಂತ್ರಿಯಾಗಬೇಕಂದೆ ಇಲ್ಲ. ನಾನು ಮಂತ್ರಿ ಹಾಗೂ ಎಂಎಲ್ಎ ಆಗಿದ್ದಾಗಲೂ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾವು ಇಲ್ಲಿದ್ದಾಗ ಸಾಕಷ್ಟು ಕೆಲಸ ಆಗಿವೆ, ನಗರವನ್ನೂ ಸ್ಚಚ್ಛವಾಗಿಟ್ಟುಕೊಂಡಿದ್ದೇವು. ಅಂದು ಅನುದಾನ ಕೂಡ ಕಡಿಮೆ ಬರುತ್ತಿತ್ತು. ಆದರೆ, ಈಗ ಅದು ದುಪ್ಪಟ್ಟು ಆಗಿದೆ. ಅಂದು 5 ಕೋಟಿ ಬಂದ್ರೆ ಇಂದು 50 ಕೋಟಿ ಬರುತ್ತಿದೆ. ಆದರೆ, ಅಭಿವೃದ್ಧಿ ಮಾತ್ರ ಆಗಿಲ್ಲ ಎಂದರು.
ಈಗೀನ ಎಂಎಲ್ಎ ನಮ್ಮ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಪ್ರವಾಹದಂತಹ ಸಂದರ್ಭದಲ್ಲೂ ನೆರವಿಗೆ ಬರಲಿಲ್ಲ. ಜನರ ಸಮಸ್ಯೆ ಬೇಡವಾದ ಎಂಎಲ್ಎ ನಮಗೂ ಬೇಡ. ಅದಕ್ಕಿಂತೂ ಮುಖ್ಯವಾಗಿ ಕಳೆದ 25 ವರ್ಷಗಳಿಂದ ಎಂ.ಎಲ್ಎ ಮಾಡಿ ಕಳುಹಿಸುತ್ತಿದ್ದ ಪಕ್ಷ ಬಿಟ್ಟು ಹೋಗಿದ್ದಾರೆ. ಹೋಗುವ ಮುಂಚೆ ನಿಮ್ಮನ್ನು ಒಂದು ಮಾತು ಕೇಳಿಲ್ಲ. ಹೀಗೆ ತೀರ್ಥಯಾತ್ರೆ ಮಾಡುತ್ತ ಹೋಗುರನ್ನ ಹಾಗೆ ಹೋಗಲು ಬಿಟ್ಟು ಬಿಡೋಣ. ಎಲ್ಲಿ ಹೋಗ್ತಾರೆ ಹೋಗಲಿ. ನಮ್ಮ ಸಮಸ್ಯೆಗೆ ಸ್ಪಂದಿಸುವ ಎಂಎಲ್ಎ ಯನ್ನು ಆಯ್ಕೆ ಮಾಡೋಣ. ಅದಕ್ಕಾಗಿ ಲಖನ್ ಜಾರಕಿಹೊಳಿಯನ್ನು ಬೆಂಬಲಿಸಿ. ಇವರು ರಮೇಶ್ ನಂತೆ ದೆಹಲಿ, ಬೆಂಗಳೂರು ಅಂತಾ ಅಲೆಯುವುದಿಲ್ಲ. ಇಲ್ಲೆ ಇದ್ದು ನಿಮ್ಮ ಸೇವೆ ಮಾಡುತ್ತಾನೆ. ಅವನ ಹಿಂದೆ ನಾವಿರುತ್ತೇವೆ. ಗೋಕಾಕ್ ನಗರ ಕಟ್ಟಲು ಯೋಜನೆ ಹಾಕಿಕೊಂಡಿದ್ದೇವೆ. ಅದಕ್ಕಾಗಿ ನೀವು ಮತ ನೀಡಿ. ಕೇವಲ ನೀವು ಮಾತ್ರವಲ್ಲ (ಮುಸ್ಲೀಂ), ನಿಮಗೆ ಹಿಂದೂ ಸ್ನೇಹಿತರು, ಆತ್ಮೀಯರು ಇರುತ್ತಾರೆ. ಅವರಿಗೂ ತಿಳಿ ಹೇಳಿ ಮತ ಹಾಕಿಸಿ ಎಂದು ಕೇಳಿಕೊಂಡ್ರು.
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ಜಾಕೀರ್ ನದಾಪ್, ಮುನವಳ್ಳಿ ಜನಾಬ್, ಮುನ್ನಾ ಖತಿಪ್ ಸೇರಿದಂತೆ ದಲಾಲ್ ಗಲ್ಲಿಯ ಮುಸ್ಲೀಂ ಜಮಾತ್ ನ ಜನರು ಈ ವೇಳೆ ಉಪಸ್ಥಿತರಿದ್ದರು.