RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕ್ಷೇತ್ರದ ಹೂಲಿಕಟ್ಟಿ, ಪುಡಲಕಟ್ಟಿ ಮತ್ತು ಜಮನಾಳ ಗ್ರಾಮಗಳಲ್ಲಿ ಲಖನ್ ಬಿರುಸಿನ ಪ್ರಚಾರ

ಗೋಕಾಕ:ಕ್ಷೇತ್ರದ ಹೂಲಿಕಟ್ಟಿ, ಪುಡಲಕಟ್ಟಿ ಮತ್ತು ಜಮನಾಳ ಗ್ರಾಮಗಳಲ್ಲಿ ಲಖನ್ ಬಿರುಸಿನ ಪ್ರಚಾರ 

ಕ್ಷೇತ್ರದ ಹೂಲಿಕಟ್ಟಿ, ಪುಡಲಕಟ್ಟಿ ಮತ್ತು ಜಮನಾಳ ಗ್ರಾಮಗಳಲ್ಲಿ ಲಖನ್ ಬಿರುಸಿನ ಪ್ರಚಾರ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ, 25 :-

 
ಡಿ. 5 ರಂದು ನಡೆಯಲಿರುವ ಗೋಕಾಕ ವಿಧಾಸಭಾ ಉಪಚುನಾವಣೆ ಪ್ರಚಾರ ಪರ್ವ ಜೋರಾಗಿ ಸಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಕ್ಷೇತ್ರದ ಹಳ್ಳಿ-ಹಳ್ಳಿಗೆ ತೆರಳಿ ಮತದಾರ ಪ್ರಭುಗಳಿಗೆ ಭೇಟಿಯಾಗಿ ಮತಯಾಚಿಸುತ್ತಿದ್ದಾರೆ.
ಸೋಮವಾರದಂದು ಕ್ಷೇತ್ರದ ಹೂಲಿಕಟ್ಟಿ, ಪುಡಲಕಟ್ಟಿ ಮತ್ತು ಜಮನಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಮತಯಾಚಿಸಿದರು. ಲಖನ್ ಜಾರಕಿಹೊಳಿ ಅವರಿಗೆ ಹಳ್ಳಿಯ ಮುಖಂಡರು ಸೇರಿದಂತೆ ಯುವಕರು ಭಾರಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಾಲಿ ಶಾಸಕರ ಬದಲಾವಣೆ ಅವಶ್ಯವಿದ್ದು ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು. ನಾನೂ ಗೆದ್ದರೆ ನೀವು ಗೆದ್ದ ಹಾಗೆ ಎಂದ ಅವರು ಸುಳ್ಳು ಪ್ರಚಾರಕ್ಕೆ ಕಿವಿಗೊಡದೆ ಕಾಂಗ್ರೆಸ್ ಚಿಹ್ನೆಗೆ ಮತಹಾಕಿ ಎಂದು ಮನವಿ ಮಾಡಿಕೊಂಡರು.

Related posts: