ಗೋಕಾಕ:ಅನರ್ಹ ಶಾಸಕರಿಗೆ ಕಾಂಗ್ರೇಸ್ ಪಕ್ಷದಿಂದ ಯಾವುದೇ ಮೋಸವಾಗಿಲ್ಲ, ಅವರು ಹೇಳುತ್ತೀರುವುದೆಲ್ಲ ಸುಳ್ಳು : ಶಾಸಕ ಸಿ.ಪುಟ್ಟರಂಗಶೆಟ್ಟಿ
ಅನರ್ಹ ಶಾಸಕರಿಗೆ ಕಾಂಗ್ರೇಸ್ ಪಕ್ಷದಿಂದ ಯಾವುದೇ ಮೋಸವಾಗಿಲ್ಲ, ಅವರು ಹೇಳುತ್ತೀರುವುದೆಲ್ಲ ಸುಳ್ಳು : ಶಾಸಕ ಸಿ.ಪುಟ್ಟರಂಗಶೆಟ್ಟಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 25 :
ಅನರ್ಹ ಶಾಸಕರಿಗೆ ಕಾಂಗ್ರೇಸ್ ಪಕ್ಷದಿಂದ ಯಾವುದೇ ಮೋಸವಾಗಿಲ್ಲ, ಅವರು ಹೇಳುತ್ತೀರುವುದೆಲ್ಲ ಸುಳ್ಳು ಅದನ್ನು ರಾಜ್ಯದ ಜನತೆ ನಂಬಬೇಡಿ ಎಂದು ಚಾಮರಾಜನಗರ ಶಾಸಕ ಹಾಗೂ ಉಪ್ಪಾರ ಸಮಾಜದ ರಾಜ್ಯಾಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಅವರು ಹೇಳಿದರು.
ಸೋಮವಾರದಂದು ನಗರದ ಉಪ್ಪಾರ ಗಲ್ಲಿಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಲಖನ ಜಾರಕಿಹೊಳಿ ಪರ ಮತಯಾಚಿಸಿ ಮಾತನಾಡಿದ ಅವರು, 2018ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದೇ ಇರುವುದರಿಂದ ಅನಿವಾರ್ಯವಾಗಿ ಜೆಡಿಎಸ್-ಕಾಂಗ್ರೇಸ್ ಪಕ್ಷಗಳು ಜಂಟಿಯಾಗಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದವು. ಎರಡು ಪಕ್ಷಗಳಲ್ಲಿ ಮಂತ್ರಿಗಿರಿಗಾಗಿ ಲಾಭಿಗಳು ನಡೆಯುವುದು ಸ್ವಾಭಾವಿಕ, ತಮಗೆ ಮಂತ್ರಿ ಪಟ್ಟಗಳಬೇಕೆಂದು ಕೆಲವೊಂದು ಶಾಸಕರು ಬಿನ್ನಮತ ಸೃಷ್ಟಿಸಿ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದರು. ಇದರಿಂದಾಗಿ ಅವರು ಅನರ್ಹರಾದರೆಂದು ತಿಳಿಸಿದರು.
ತಮಗೆ ಆಶೀರ್ವಾದ ಮಾಡಿದ ಜನತೆಗೆ ಬಗ್ಗೆ ಕಿಂಚಿತ್ತು ಕಾಳಜಿಯನ್ನು ವಹಿಸಿದ 17 ಶಾಸಕರು ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಮತದಾರ ಪ್ರಭುಗಳ ಅಪ್ಪಣೆಯನ್ನು ಪಡೆಯದೆ ರಾಜೀನಾಮೆ ನೀಡಿ ನಾಡಿನ ಜನತೆಗೆ ದ್ರೋಹವೆಸಗಿದ್ದಾರೆ. ಅನರ್ಹ ಶಾಸಕರಿಗೆ ಈ ಉಪಚುನಾವಣೆಯಲ್ಲಿ ಜನತಾ ನ್ಯಾಯಾಲಯದಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿದರು.
ಮಾಜಿ ಸಿ.ಎಮ್ ಸಿದ್ದರಾಮಯ್ಯನವರ ನೇತ್ರತ್ವದ ಕಾಂಗ್ರೇಸ್ ಸರ್ಕಾರ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವ ಉಪ್ಪಾರ ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬೆಂಗಳೂರಿನಲ್ಲಿ ಉಪ್ಪಾರ ಸಮಾಜಕ್ಕಾಗಿ ಎರಡುವರೆ ಎಕರೆ ಜಮೀನು ನಿವೇಶನಕ್ಕಾಗಿ ಮೀಸಲಿಟ್ಟಿದೆ.ನಿಗಮ ಮಂಡಳಿಗಳಲ್ಲಿ ಉಪಾರ ಸಮಾಜದವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ಈ ಹಿಂದೆ ಪ್ರವರ್ಗಕ್ಕೆ ಸೇರಿಸಿದ್ದು ಕೂಡಾ ಕಾಂಗ್ರೇಸ್ ಪಕ್ಷವೇ ಆಗಿದೆ. ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದಿದ್ದು ಕೂಡಾ ನಮ್ಮ ಸರ್ಕಾರವಾಗಿದ್ದು, ಅದನ್ನು ಈಗೀನ ಸರ್ಕಾರ ಸ್ಥಗಿತಗೊಳಿಸಿದೆ. ನನಗೆ ಸತತವಾಗಿ 3ಬಾರಿ ಪಕ್ಷದ ಟೀಕೆಟನ್ನು ನೀಡಿ ಶಾಸಕನ್ನಾಗಿ ಮಾಡಿದ್ದು ಕೂಡಾ ಕ್ರಾಂಗ್ರೇಸ್ ಪಕ್ಷವೇ, ರಾಜಕೀಯ ಸೇರಿದಂತೆ ಇತರ ಕ್ಷೇತ್ರಗಳಲ್ಲಿಯೂ ಹಿಂದುಳಿದ ವರ್ಗಗಳ ಬೆಳವಣಿಗೆಯಲ್ಲಿ ಕಾಂಗ್ರೇಸ ಪಕ್ಷ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಶೋಷಿತ, ಹಿಂದುಳಿದ ವರ್ಗಗಳ ಧ್ವನಿಯಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಕೈ ಬಲಪಡಿಸಲು ಈ ಬಾರಿ ಉಪಚುನಾವಣೆಯಲ್ಲಿ ಗೋಕಾಕ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಲಖನ ಜಾರಕಿಹೊಳಿ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಆಶೀರ್ವದಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಯು. ವೆಂಕೋಬಾ, ನಗರಸಭಾ ಸದಸ್ಯ ಭಗವಂತ ಹುಳ್ಳಿ, ಮುಖಂಡರಾದ ಕಲ್ಲೋಳೆಪ್ಪ ತಹಶೀಲದಾರ, ಲಕ್ಷ್ಮಣ ಬಬಲಿ, ನಾರಾಯಣ ಗುಜನಟ್ಟಿ, ಪರಸಪ್ಪ ಚೂನನ್ನವರ, ರಾಮಣ್ಣ ತೋಳಿ, ಪ್ರಕಾಶ ಬಾಗೇವಾಡಿ, ನಿಂಗಪ್ಪ ಹುಳ್ಳಿ, ಸುಭಾಶ ಬಬಲಿ, ಸಂಜಯ ಜಡಿನವರ, ರಾಮ ಬಡೆಪ್ಪಗೋಳ, ಮುರಳಿಧರ ತೋಳಿ, ಎಮ್.ಕೆ.ದೊಡ್ಡಮೀಸೆ ಸೇರಿದಂತೆ ಅನೇಕರು ಇದ್ದರು.