RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ರಮೇಶ ಪ್ರಚಾರಕ್ಕೆ ತಾರಾ ಮೆರಗು: ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ವಿ.ಪ ಮಾಜಿ ಸದಸ್ಯೆ

ಗೋಕಾಕ:ರಮೇಶ ಪ್ರಚಾರಕ್ಕೆ ತಾರಾ ಮೆರಗು: ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ವಿ.ಪ ಮಾಜಿ ಸದಸ್ಯೆ 

ರಮೇಶ ಪ್ರಚಾರಕ್ಕೆ ತಾರಾ ಮೆರಗು: ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ವಿ.ಪ ಮಾಜಿ  ಸದಸ್ಯೆ  

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 26 :  

 

ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಪ್ರಚಾರಾರ್ಥವಾಗಿ ಮಂಗಳವಾರದಂದು ವಿಧಾನ ಪರಿಷತ್ ಮಾಜಿ    ಸದಸ್ಯೆ ತಾರಾ ಅವರು ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿಗೆ ತೆರಳಿ ಮತಯಾಚನೆ ಮಾಡಿದರು ಮಂಗಳವಾರ ಮುಂಜಾನೆ ರಮೇಶ ಜಾರಕಿಹೊಳಿ ಅವರ ಮನೆಗೆ ಭೇಟಿನೀಡಿದ ತಾರಾ ಅವರು ನಂತರ ಮತಕ್ಷೇತ್ರದ ಕೊಳವಿ, ಗಿಳಿಹೊಸೂರ, ಖನಗಾಂವ ಸೇರಿದಂತೆ ಇತರ ಗ್ರಾಮಗಳಿಗೆ ತೆರಳಿ ಪಕ್ಷದ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಪರವಾಗಿ ಮತಯಾಚನೆ ಮಾಡಿದರು ಗಿಳಿಹೊಸೂರ ಗ್ರಾಮದಲ್ಲಿ ಮತದಾರರನ್ನು ಉದ್ದೇಶಿಸಿ ಮತನಾಡಿದ ಚಲನಚಿತ್ರ ನಟಿ ,ವಿಧಾನ ಪರಿಷತ್     ಮಾಜಿ ಸದಸ್ಯೆ ಶ್ರೀಮತಿ ತಾರಾ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರ್ನಾಟಕ ರಾಜ್ಯವನ್ನು ನಂ 1 ರಾಜ್ಯವನ್ನಾಗಿಸಲು ಹೊರಟಿದ್ದಾರೆ. ಯಡಿಯೂರಪ್ಪ ಅವರ ಕೈ ಬಲ ಪಡಿಸಬೇಕೆಂದರೆ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರನ್ನು ಅತ್ಯಂತ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಚುನಾವಣೆ ಗೆದ್ದು ಬಂದು ರಮೇಶ ಜಾರಕಿಹೊಳಿ ಅವರು ಈ ಭಾಗವನ್ನು ಅಭಿವೃದ್ಧಿಯ ಮಾಡುತ್ತಾರೆಂದು ಶ್ರೀಮತಿ ತಾರಾ ಹೇಳಿದರು ಈ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜೋಲ್ಲೆ , ಶಾಸಕರಾದ ಎ.ಎಸ್‌ ಪಾಟೀಲ್ (ನಡಹಳ್ಳಿ) , ಆನಂದ ಮಾಮನಿ, ಮಹಾದೆವಪ್ಪಾ ಯಾದವಾಡ, ಮಾಜಿ ಶಾಸಕ ಡಾ.ವಿಶ್ವನಾಥ್ ಪಾಟೀಲ, ಜಿ.ಪಂ ಸದಸ್ಯ ಗೋವಿಂದ ಕೋಪ್ಪದ , ಶಶಿಧರ ದೇಮಶೆಟ್ಟಿ, ಮಹಾಂತೇಶ ತಾವಂಶಿ ,ಶಾಮಾನಂದ ಪೂಜಾರಿ, ಶಕೀಲ ಧಾರವಾಡಕರ ಸೇರಿದಂತೆ ಇತರರು ಇದ್ದರು

Related posts: