ಗೋಕಾಕ:ಕಡ್ಡಾಯ ಮತದಾನ ಜಾಗೃತಿ ಜಾಥಾಕ್ಕೆ ನಗರಸಭೆ ಎಇಇ ವಿ.ಎಸ್.ತಡಸಲೂರ ಚಾಲನೆ
ಕಡ್ಡಾಯ ಮತದಾನ ಜಾಗೃತಿ ಜಾಥಾಕ್ಕೆ ನಗರಸಭೆ ಎಇಇ ವಿ.ಎಸ್.ತಡಸಲೂರ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 26 :
ತಾಲೂಕಾ ಸ್ವೀಪ ಸಮಿತಿ ಮತ್ತು ನಗರಸಭೆಯ ಸಹಯೋಗದಲ್ಲಿ ಗೋಕಾಕ ಮತಕ್ಷೇತ್ರದ ವಿಧಾನಸಭಾ ಉಪಚುನಾವಣೆಯಲ್ಲಿ ಶೇ. 100ರಷ್ಟು ಮತದಾನದ ಗುರಿಯೊಂದಿಗೆ ಕಡ್ಡಾಯ ಮತದಾನ ಜಾಗೃತಿ ಜಾಥಾಕ್ಕೆ ನಗರಸಭೆ ಎಇಇ ವಿ.ಎಸ್.ತಡಸಲೂರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಮಿಲ್ಲಾನಟ್ಟಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಮತದಾನ ನಮ್ಮ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಿ ಎಂಬ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಪೌರ ಕಾರ್ಮಿಕರು, ನಗರಸಭೆ ಸಿಬ್ಬಂದಿಯವರು ಮತದಾನದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಪಿಎಸ್‍ಐ ಗುರುನಾಥ ಚವ್ಹಾಣ, ನಗರಸಭೆ ಅಧಿಕಾರಿಗಳಾದ ಎ.ಎಸ್.ರಜಪೂತ, ಎಮ್.ಎಚ್.ಗಜಾಕೋಶ, ಶಿವುಕುಮಾರ ಹಳ್ಳೂರ ಸೇರಿದಂತೆ ಅನೇಕರು ಇದ್ದರು.