ಗೋಕಾಕ:ಲಖನ್ ಜಾರಕಿಹೊಳಿ ಪರ ಕೆಪಿಸಿಸಿ ಅಧ್ಯಕ್ಷ ದಿನೇಶ್ ರೋಡ ಶೋ : ರಮೇಶ ಜಾರಕಿಹೊಳಿ ವಿರುದ್ಧ ಗುಡುಗು
ಲಖನ್ ಜಾರಕಿಹೊಳಿ ಪರ ಕೆಪಿಸಿಸಿ ಅಧ್ಯಕ್ಷ ದಿನೇಶ್ ರೋಡ ಶೋ : ರಮೇಶ ಜಾರಕಿಹೊಳಿ ವಿರುದ್ಧ ಗುಡುಗು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 27 :
ಗೋಕಾಕದಿಂದಲೆ ಉಪ ಚುನಾವಣೆ ಎದುರಾಗಿದೆ ಇದಕ್ಕೆ ಕಾರಣರಾದ ರಮೇಶ ಜಾರಕಿಹೊಳಿ ಅವರಿಗೆ ಜನ ತಕ್ಕಪಾಠ ಕಲಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ ಹೇಳಿದರು.
ಬುಧವಾರದಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ರೋಡ ಶೋ ದಲ್ಲಿ ಭಾಗವಹಿಸಿದ ನಂತರ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು
ರಮೇಶ ಜಾರಕಿಹೊಳಿ ಅವರು ಜನರಿಗೆ ಅನ್ಯವಾಗಿದೆ ಎಂದು ಪಕ್ಷ ಬಿಟ್ಟಿಲ್ಲಾ , ಯುವ ಕಾಂಗ್ರೆಸ್ ದಿಂದ ಹಿಡಿದು ಮಂತ್ರಿ ಅವರಿಗೆ ಕಾಂಗ್ರೆಸ್ ಪಕ್ಷ ಅವರನ್ನು ಎಲ್ಲವನ್ನೂ ನೀಡಿ ಬೆಳೆಸಿತ್ತು. ಯುವ ಕಾಂಗ್ರೆಸ್ ನಲ್ಲಿದ್ದಾಗ ಕೂಡ ಅವರು ಯಾವುದೇ ಕೆಲಸ ಮಾಡಿಲ್ಲ, ಅವರ ಮೇಲೆ ಇದ್ದ ಅಭಿಮಾನ ಈಗ ಕಡಿಮೆಯಾಗಿದೆ. ಎಲ್ಲವನ್ನೂ ಕೊಟ್ಟ ಪಕ್ಷಕ್ಕೆ ಅವರು ಮೋಸ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಇದ್ದ ಗೌರವ ಬಿಜೆಪಿಯಲ್ಲಿ ಸಿಗುವದಿಲ್ಲ, ಮುಂದೆ ಅವರಿಗೆ ಬಿಜೆಪಿ ಪಕ್ಷ ಬಿಡಬೇಕಾದ ಪರಿಸ್ಥಿತಿ ಬರುತ್ತದೆ. ಕೈ ಪಕ್ಷದಲ್ಲಿ ಈಗ ಅವರಿಗೆ ಅವಕಾಶ ವಿಲ್ಲ ಎಂದು ದಿನೇಶ ಉಪ ಚುನಾವಣೆಯಲ್ಲಿ ಗೋಕಾಕನ ಮತದಾರರು ಸ್ವಷ್ಟ ಸಂದೇಶ ನೀಡಬೇಕಾಗಿದೆ. ಮತವನ್ನು ಮಾರಿಕೋಳ್ಳದೆ ಮತ ಚಲಾಯಿಸಬೇಕು ಅನರ್ಹರನ್ನು ಯಾರು ಸಹಿಸುವದಿಲ್ಲ ಎಂಬ ಸಂದೇಶ ರಾಜ್ಯಕ್ಕೆ ನೀಡಬೇಕಾಗಿದೆ.ಜಾರಕಿಹೊಳಿ ಕುಟುಂಬದ ಹೆಸರು ಸತೀಶ ಅವರಿಂದ ಬಂದಿದೆ. ಬಾಲಚಂದ್ರ ಅವರು ಆಪರೇಷನ್ ಮಾಡಿ ಹೆಸರು ಮಾಡಿಕೊಂಡಿದ್ದಾರೆ. ಕಳೆದ 25 ವರ್ಷಗಳಿಂದ ರಮೇಶ ಜಾರಕಿಹೊಳಿ ಅವರಿಂದ ಜನರಿಗೆ ಉಪಕಾರ ಮಾಡುವ ಕಾರ್ಯ ಆಗಿಲ್ಲ. ರಾಜ್ಯದಲ್ಲಿ ರಮೇಶ ಜಾರಕಿಹೊಳಿ ಹೆಸರಿಲ್ಲ ಸತೀಶ ಅವರ ಹೆಸರು ಪ್ರಚಲಿತವಾಗಿದೆ ಎಂದು ದಿನೇಶ ವ್ಯಂಗವಾಡಿದರು.
ಎಂಎಲ್ಎ ಆಗುವದು ಜನಸೇವೆ ಮಾಡಲು ಹೊರತಾಗಿ ವಯಕ್ತಿಕ ಅಭಿವೃದ್ಧಿಗೆ ಅಲ್ಲ, ಪ್ರಜೆಗಳ ಬಗ್ಗೆ ಕಳಕಳಿ ಇಲ್ಲದವರು ನಾಯಕರಾಗಲು ಸಾಧ್ಯವಿಲ್ಲ. ಮತದಾರರು ಜಾಗೃತಿಯಿಂದ ಮತದಾನ ಮಾಡಬೇಕು. ಬಿಜಿಪಿ ಅವರು ಪ್ರತಿಯೊಬ್ಬರೂ25 ಕೋಟಿ ಕೊಡುತ್ತಿದ್ದಾರೆ. ಜಾರಕಿಹೊಳಿ ಸಹೋದರರು ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ ಎಂಬ ವದಂತಿ ತಪ್ಪು ಎಂದ ಗುಂಡೂರಾವ ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸುವದು ಸತೀಶ ಮತ್ತು ಲಖನ ಅವರಿಂದ ಮಾತ್ರ ಸಾಧ್ಯ .ಜನರು ಸ್ವಷ್ಟ ನಿಲುವನ್ನು ತೋರಿದ್ದಾರೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ದೇಶಕ್ಕೆ ಮಾದರಿಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ ಹೇಳಿದರು
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಮಾತನಾಡಿ ರಮೇಶ ಅವರು ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮೋಸ ಮಾಡಿದ್ದಾರೆ . ನೀರಾವರಿ ಮಂತ್ರಿಯಾಗುತ್ತೇನಗ ಎಂದು ಹೇಳುವ ರಮೇಶ ಅವಲ ಅಳಿಯಂದಿರ ಅಭಿವೃದ್ಧಿಗೆ ಮಂತ್ರಿ ಆಗುತ್ತಿದ್ದಾರೆ. ಎನ್ಎಸ್ಎಫ್ ಕಾರ್ಯಾಲಯದಲ್ಲಿ ಪ್ರತಿನಿತ್ಯ 2 ಸಾವಿರ ಜನ ಕುಡಿಸುತ್ತಿದ್ದಾರೆ ಮತದಾರರ ದಾರಿ ತಪ್ಪಿಸುತ್ತಿದ್ದಾರೆ . ರಮೇಶ್ ಜಾರಕಿಹೊಳಿ ಎಲ್ಲಿ ಇರುತ್ತಾರೋ ಅಲ್ಲಿ ಮುಳ್ಳಿನ ಹಾದಿ ಇರುತ್ತದೆ ಮುಂದೆ ಯಡಿಯೂರಪ್ಪ ಅವರಿಗೆ ಆ ಅನುಭ ಎದುರಾಗಲಿದೆ.
ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕೆಪಿಸಿಸಿ ಮತ್ತು ಹೈಕಮಾಂಡ್ ಗೆ ಕೊಡುಗೆಯಾಗಿ ನೀಡಬೇಕೆಂದು ಪ್ರತಿಜ್ಞೆ ಮಾಡಬೇಕು ಎಂದು ಮತದಾರರಲ್ಲಿ ಕೋರಿದರು.
ಈಗ ಬೈಕ್ ನಲ್ಲಿ ತಿರುಗಾಡಿ ಮತಯಾಚನೆ ಮಾಡುತ್ತಿರುವ ರಮೇಶ ಚುನಾವಣೆ ಮುಗಿದ ಮೇಲೆ ಹೆಲಿಕಾಪ್ಟರ್ ನಲ್ಲಿ ತಿರುಗಾಡಿ ಮತದಾರರನ್ನು ಅನಾಥ ಮಾಡುತ್ತಾರೆ. ಈಗ ತಾರೆ ಜಮೀಫರ ಎಂದು ಜನರಿಗೆ ಹಗಲು ಕನಸು ತೊರಿಸುತ್ತಾರೆ ನಂತರ ಅವರು ತಾರೆ ಪರ ನೀವು ಜಮೀಪರ ಎಂದಾಗುತ್ತದೆ ಎಂದು ಸಹೋದರನ ವಿರುದ್ಧ ಹರಿಹಾಯ್ದರು
ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ್ ಮಾತನಾಡಿ ಮಾತೃ ಪಕ್ಷಕ್ಕೆ ದ್ರೋಹ ಮಾಡಿ ಪಕ್ಷಕ್ಕೆ ಕೈ ಕೊಟ್ಟು ಹೋದವರ ನಿಲುವಿನಿಂದ ಈ ಚುನಾವಣೆ ಬಂದಿದೆ .ಕಾರ್ಯಕರ್ತರಿಗೆ ಮೋಸ ಮಾಡಿ ಮುಂಬೈ ಹೋಗಿ ಪಕ್ಷಾಂತರ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು .ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಮಾಡಿ ಕೈ ಅಭ್ಯರ್ಥಿಯನ್ನು ಅತ್ಯಂತ ಅಂತರದಿಂದ ಗೆಲ್ಲಿಸಬೇಕು.
ಲೋಕಸಬಾ ಚುನಾವಣೆ , ಪ್ರವಾಹ ಬಂದಾಗ ಜನರ ಮಧ್ಯೆ ಇರಬೇಕಾದ ರಮೇಶ ಅಂದು ಮಾಯವಾಗಿ ಈಗ ಚುನಾವಣೆಗೆ ಬಂದಿದ್ದಾರೆ. ಅವರಿಗೆ ತಕ್ಕಪಾಠ ಕಲಿಸಬೇಕು. ಎಲ್ಲರೂ ಕಾಯಾ,ವಾಚಾ,ಮನಸಾ ಕಾರ್ಯ ಮಾಡಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿಕೊಂಡದರಲ್ಲದೆ . ಈ ಚುನಾವಣೆ ಸಂವಿಧಾನದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಪ್ರಜಾಪ್ರಭುತ್ವದ ಉಳಿವಿನ ಪ್ರಶ್ನೆ, ಕೌರವ ಮತ್ತು ಪಾಂಡರ ಯುದ್ಧ ವಾಗಿದೆ. ಇದರಲ್ಲಿ ಪಾಂಡವರಿಗೆ ಜಯ ಸಿಗಲಿದೆ ಎಂದು ಪಾಟೀಲ್ ಹೇಳಿದರು. ಮಾತೃ ಪಕ್ಷ ದ್ರೋಹ ಬಗೆದು ಪಕ್ಷ ಬಿಟ್ಟವರಿಗೆ ಜಯ ದೊರೆಯುದಿಲ್ಲ ಸುಪ್ರೀಂಕೋರ್ಟ್ ದಿಂದ ಅನರ್ಹರಾದವರು ನಿಮ್ಮ ಮುಂದೆ ಬಂದು ಮತ ಕೇಳುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಜನರ ಮುಂದೆ ಹೋಗಿ ಅವರು ಹಣ ಮತ್ತು ಗುಣ ಎಲ್ಲವನ್ನು ಕಳೆದು ಕೊಳ್ಳಲ್ಲಿದ್ದಾರೆ ಜನ ಅವರನ್ನು ದೂಳಿಪಟ, ಗಾಳಿಪಟ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಆಡಳಿತ ಸೂತ್ರ ಕೈಯಲ್ಲಿ ಹಿಡಿದ ಯಡಿಯೂರಪ್ಪ ಅವರು ಅನರ್ಹರಿಗೆ ಮಂತ್ರಿ ಮಾಡುತ್ತೇನೆಂದು ಹೇಳಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಇದರ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ದಾಖಲಿಸುವ ಕ್ರಮ ಕೈಗೋಳ್ಳಲಾಗುವದು ಎಂದು ಪಾಟೀಲ ಹೇಳಿದರು.
ಯಮಕನಮರಡಿ ಸತೀಶ ಜಾರಕಿಹೊಳಿ ಮಾತನಾಡಿ ಗೋಕಾಕ ಚುನಾವಣೆ ಅವಶ್ಯಕತೆ ಇರಲಿಲ್ಲ, ರಮೇಶ ಅವರ ತಪ್ಪನಿಂದ ಸರಕಾರ ಬಿದ್ದಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಹೆಚ್ಚಿನ ಅನುದಾನ ತಂದವರು ರಮೇಶ ಮತ್ತು ಬಾಲಚಂದ್ರ ಅವರು ಪಿಡ್ಯ್ಲೂಡಿ ಒಂದರಲ್ಲಿಯೇ 20 ಕೊಟ್ಟಿ ಅನುದಾನ ತಂದಿದ್ದಾರೆ. ಗೋಕಾಕ ಜನತೆ ಇವರ ಜೆಎಸ್ ಟಿ ಗೆ ಬೇಸತ್ತಿದ್ದಾರೆ. ಗೋಕಾಕ ಕ್ಷೇತ್ರದ ಗಡಿಬಾಗದ ಹಳ್ಳಿಗಳಲ್ಲಿ ಒಂದೇ ಒಂದು ಲೈಟ ಕೊಡಲು ಆಗಲಿಲ್ಲ , ಅಭಿವೃದ್ಧಿ ಹೆಸರಿನಲ್ಲಿ ಜನರನ್ನು ಮೋಸ ಮಾಡಿದ್ದಾರೆ. ಇದು ಗೋಕಾಕ ಒಂದರ ಚುನಾವಣೆಯಲ್ಲ ಇಡೀ ದೇಶದ ಚುನಾವಣೆ . ಎಲ್ಲ ಮತದಾರರು ಒಂದು ಮತದ ಜೊತೆಗೆ ಒಂದು ಇನ್ನೊಂದು ಮತಹಾಕಿಸಬೇಕು. ಚುನಾವಣೆಯ ಕ್ಯಾಪ್ಟನ್ ಆಗಿ ಬಾಲಚಂದ್ರ ಆಗಿದ್ದಾರೆ.
ಬಾಲಚಂದ್ರ ಜಾರಕಿಹೊಳಿ ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ. ರಮೇಶ ಜಾರಕಿಹೊಳಿ ಮುಂಬೈದಲ್ಲಿ 25 ಕೋಟಿ ಇಲ್ಲಿ15 ಕೊಟ್ಟಿ ಬಿಜೆಪಿಯಿಂದ ವಸೂಲಿ ಮಾಡಿದ್ದಾರೆ. ಎಲ್ಲರೂ ಒಂದೆ ಎಂದು ಹೇಳಿ ಗೆಲುತ್ತಿದ್ದಾರೆ . ಲಖನ ಕೂಡಾ ರಮೇಶ ಜಾರಕಿಹೊಳಿ ಗರಡಿಯಲ್ಲಿ ಪಳಗಿದ್ದಾರೆ ಅವರ ಕಾರ್ಯತಂತ್ರ ಗೊತ್ತಿದ್ದೆ . ಅವರ ವೈಫಲ್ಯ ಗಳನ್ನು ಜನರಿಗೆ ತಿಳಿಸಿದ್ದೇವೆ . ರಮೇಶ ಜಾರಕಿಹೊಳಿ ಬದಲಾವಣೆ ಒಂದೇ ನಮ್ಮ ಗುರಿ ಈಗಾಗಲೇ ಜನ ತಯಾರಾಗಿದ್ದಾರೆ.
ಕಾಂಗ್ರೆಸ್ ಮತ್ತು ಜಾರಕಿಹೊಳಿ ಬ್ಯ್ರಾಂಡದಲ್ಲಿ ಕಳೆದ 25 ವರ್ಷ ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ . ಬಿಜೆಪಿಯವರು ಸಹ ಮೂರ ಭಾಗವಾಗಿದ್ದಾರೆ. ಕ್ಷೇತ್ರದಲ್ಲಿ ಪಂಚಾಯಿತಿ ಗಳು ಕೆಲವೇ ಕೆಲವು ಜನರ ಆಸ್ತಿಗಳಾಗಿವೆ ಇದನ್ನು ಅರಿತು ಮತ ನೀಡಬೇಕೆಂದು ಸತೀಶ ಮನವಿ ಮಾಡಿದರು. ಅನರ್ಹರಿಗೆ, ದ್ರೋಹ ಬಗೆದಿರುವರಿಗೆ ಪಾಠ ಕಲಿಸಲು ಕಾಲ ಬಂದಿದೆ. ಜನರ ಬಗ್ಗೆ ಕಳಕಳಿ ಇಲ್ಲದವರಿಗೆ ಈ ಬಾರಿ ಬುದ್ಧಿ ಕಲಿಸಬೇಕು ಸತೀಶ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವಂಶಿ ರೆಡ್ಡಿ, ವಿನಯ ನಾವಲಗಟ್ಟಿ, ಸಚಿನ ದೆಗಾಂವ , ಕೆಪಿಸಿಸಿ ಕಾರ್ಯದರ್ಶಿ ದಯಾನಂದ ಪಾಟೀಲ, ಸುನೀಲ ಹಲಮನ್ನವರ , ಅರವಿಂದ ದಳವಾಯಿ, ಜಾಕೀರ ನಧಾಪ , ಪ್ರಕಾಶ ಡಾಂಗೆ , ಕೆ. ಎಂ.ಗೋಕಾಕ , ಶ್ರೀಮತಿ ಈಟಿ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ವಿವೇಕ ಜತ್ತಿ ನಿರೂಪಿಸಿ, ವಂದಿಸಿದರು