ಗೋಕಾಕ:ನಾನು ಕೊಟ್ಟ ತೀರ್ಪು ರಮೇಶ ಕುಮಾರ ತೀರ್ಪಲ್ಲ ಸಂವಿಧಾನದ ತೀರ್ಪು : ಮಾಜಿ ಸ್ಪೀಕರ್ ರಮೇಶ ಕುಮಾರ
ನಾನು ಕೊಟ್ಟ ತೀರ್ಪು ರಮೇಶ ಕುಮಾರ ತೀರ್ಪಲ್ಲ ಸಂವಿಧಾನದ ತೀರ್ಪು : ಮಾಜಿ ಸ್ಪೀಕರ್ ರಮೇಶ ಕುಮಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 28 :
ನಾನು ಕೊಟ್ಟ ತೀರ್ಪು ರಮೇಶ ಕುಮಾರ ತೀರ್ಪಲ್ಲ ಸಂವಿಧಾನದ ತೀರ್ಪಾಗಿದೆ ಎಂದು ಮಾಜಿ ಸಭಾಪತಿ ರಮೇಶ ಕುಮಾರ್ ಹೇಳಿದರು
ಗುರುವಾರದಂದು ನಗರದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರ ಗೃಹ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು
ಸುಪ್ರೀಂಕೋರ್ಟ್ ನಮ್ಮ ತೀರ್ಪು ಎತ್ತಿ ಹಿಡಿದು ಅವಧಿಯನ್ನು ಜನತಾ ನ್ಯಾಯಾಲಕ್ಕೆ ಕೊಟ್ಟಿದೆ ಬರುವ ಉಪ ಚುನಾವಣೆಯಲ್ಲಿ ಜನರು ಅನರ್ಹರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದರು.ಸಂವಿಧಾನದ ಪ್ರಕಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೊದಲು ನನಗೆ ಅನರ್ಹರಿಗೆ ಸಂಭಂದವಿಲ್ಲ ಎಂದು ಹೇಳಿದರು.
ಆದರೆ ಅವರನ್ನು ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಜಾತಿ ಹೆಸರಿನಲ್ಲಿ , ಧರ್ಮದ ಹೆಸರಿನಲ್ಲಿ ಮತ ಕೇಳುವದು ಕ್ರೀಮಿನಲ್ ಅಪರಾಧವಾಗಿದ್ದು , ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ರಮೇಶ ಜಾರಕಿಹೊಳಿ ಅವರನ್ನು ಮತಹಾಕುವಂತೆ ಬಹಿರಂಗವಾಗಿ ವೀರಶೈವ ಲಿಂಗಾಯತ ಸಮಾಜ ಬಾಂಧವರಿಗೆ ಹೇಳಿದ್ದಾರೆ ಇವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ದಾಖಲಿಸುತ್ತೇವೆ ಎಂದು ರಮೇಶಕುಮಾರ ಹೇಳಿದರು
ಚಮಚಾಗಿರಿ ಸಂಪ್ರದಾಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಚಾಮಚಾಗಳಿಗೆ ಚಮಚಾಗಿರಿ ಗೊತ್ತಾಗುತ್ತದೆ ನನಗೆ ಅಲ್ಲ ಎಂದು ಅಲ್ಲಗಳೆದರು
ರಾಜೀನಾಮೆ ಎನ್ನುವದು ಗೌರವ ಪ್ರಕೀಯೆ ಅನರ್ಹತೆ ಎನ್ನುವುದು ಶಿಕ್ಷೆ ಅವಧಿಯ ಬಗ್ಗೆ ನನ್ನ ಅಭಿಪ್ರಾಯಕ್ಕೆ ಸುಪ್ರೀಂಕೋರ್ಟ್ ಗೆ ಗೊಂದಲ ಇದೆ. ಪಕ್ಷಾಂತರ ಕಾಯ್ದೆ ಇನ್ನೂ ಗಟ್ಟಿಯಾಗಿ ಬೇಕು,ಪರೀಕ್ಷಕರಣೆ ಆಗುಬೇಕು. ಜನರಿಗೆ ನನ್ನ ತೀರ್ಪು ಮನವರಿಕೆ ಮಾಡಲು ಬಂದಿದ್ದೇನೆ.
ಸಂವಿಧಾನದ ಪಾವಿತ್ರ್ಯ ತೆಯನ್ನು ಉಳಿಸಲು ನನ್ನ ಹೋರಾಟ.ಜನತಾ ನ್ಯಾಯಾಲದಲ್ಲಿ ನಮಗೆ ಗೆಲ್ಲುವಾಗುತ್ತೆ . 15 ಮತಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಸೋತರೆ ಸಂವಿಧಾನಕ್ಕೆ ಹಿನ್ನೆಲೆಯಾಗಲಿದೆ ಎಂದು ರಮೇಶ ಕುಮಾರ ಹೇಳಿದರು
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅನರ್ಹರು ತ್ಯಾಗ ಮಾಡಿ ನನ್ನನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂದಿದ್ದಾರೆ. ಜಾತಿ,ಧರ್ಮದ ಹೆಸರಿನಲ್ಲಿ ಮತ ಕೇಳುವದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಈ ಹೇಳಿಕೆ ಖಂಡನೀಯ
ವೀರಶೈವ ಸಮಾಜದ ತತ್ವಾದರ್ಶಗಳನ್ನು ಪಾಲನೆ ಮಾಡುವ ಸಮಾಜ ಯಾವುದೇ ಕಾರಣಕ್ಕೂ ಜಾತಿಯ ಹೆಸರಿನಲ್ಲಿ ಮತ ಹಾಕುವದಿಲ್ಲ. ರಮೇಶ ಜಾರಕಿಹೊಳಿ ಅವರು ತಮಗೆ ಮತ ಕೊಟ್ಟವರಿಗೆ ದ್ರೋಹಮಾಡಿ ಗೋಕಾಕ ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ. ಜಾತಿ ಧರ್ಮದ ಹೆಸರಿನಲ್ಲಿ ಮತ ಕೇಳುವವರಿಗೆ ಜನರು ತಕ್ಕ ಪಾಠ ಕಲಿಸಬೇಕು. ಯಡಿಯೂರಪ್ಪ ಅಧಿಕಾರ ಚುಕ್ಕಾಣಿ ಹಿಡಿದ ಯಡಿಯೂರಪ್ಪ ನೆರೆ ಸಂತ್ರಸ್ತರಿಗೆ ಏನು ಮಾಡಿದ್ದಾರೆ , ಅದರ ಮೇಲೆ ಮತ ಕೇಳುವದನ್ನು ಬಿಟ್ಟು ,ಜಾತಿಯ ಹೆಸರಿನಲ್ಲಿ ಮತ ಕೇಳಿ ಅಪರಾಧ ವೆಸಗಿದ್ದಾರೆ. ಅನರ್ಹರು ಅಧಿಕಾರದ ದಾಹಕ್ಕಾಗಿ ಯಾವುದೇ ಕೆಲಸಕ್ಕೆ ತಯಾರು, ತಾಯಿಗೆ ದ್ರೋಹ ಮಾಡಿ ಬೆನ್ನಿಗೆ ಚೂರಿ ಹಾಕಿ ಪಕ್ಷ ಬಿಟ್ಟವರಿಗೆ ಈ ರಾಜ್ಯದ ಜನತೆ ಬುದ್ಧಿ ಕಲಿಸುತ್ತಾರೆ. ಮಹಾರಾಷ್ಟ್ರ ದಲ್ಲಿ ಅಧಿಕಾರಕ್ಕಾಗಿ ಪಕ್ಷಬಿಟ್ಟುವರು ಎಲ್ಲರೂ ಸೋತಿದ್ದಾರೆ. ಇಲ್ಲಿಯೂ ಅದೇ ಆಗಲಿದೆ.ಸರ್ವಾಧಿಕಾರಿ ದೋರಣೆ, ಪ್ರತಿಪಕ್ಷವೇ ಇಲ್ಲದ ರೀತಿಯಲ್ಲಿ ಬಿಜೆಪಿ ಅವರು ವರ್ತಿಸುತ್ತಿದ್ದಾರೆ
ಊಢಾಪೆಯಾಗಿ ಪಕ್ಷಾಂತರ ಮಾಡಿದ ರಮೇಶ ಜಾರಕಿಹೊಳಿ ಅವರು ಸಂತ್ರಸ್ತರಿಗೆ ಏನು ಮಾಡಿಲ್ಲ ಬದಲಾಗಿ ಸ್ಟಾರ್ ಹೋಟೆಲ್ ನಲ್ಲಿ ಕುಳಿತ್ತಿದ್ದರು ಜನ ಇದನ್ನು ಗಮನಿಸಿದ್ದಾರೆ ಉಪ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಲಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಸತೀಶ ಜಾರಕಿಹೊಳಿ , ಕಾಂಗ್ರೆಸ್ ಮುಖಂಡರುಗಳಾದ ನಜೀರ್ ಅಹ್ಮದ್, ವಿನಯ ನಾವಲಗಟ್ಟಿ ಇದ್ದರು