ಗೋಕಾಕ:ನೀತಿ ಸಂಹಿತೆ ಉಲ್ಲಂಘನೆ ಅಧಿಕೃತ ಮಾಹಿತಿ ಬಂದಿಲ್ಲ: ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಮಾಹಿತಿ
ನೀತಿ ಸಂಹಿತೆ ಉಲ್ಲಂಘನೆ ಅಧಿಕೃತ ಮಾಹಿತಿ ಬಂದಿಲ್ಲ: ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 28 :
ಜೋಳಿಗೆ ಹಾಕಿ ಅಶೋಕ್ ಪೂಜಾರಿ ಮತಯಾಚನೆ ಹಿನ್ನೆಲೆ ನೀತಿ ಸಂಹಿತೆ ಉಲ್ಲಂಘನೆ ದೂರು ವಿಚಾರ ಮಾತನಾಡಿದ ಅವರು ನನಗೆ ಅಧಿಕೃತ ಮಾಹಿತಿ ಬಂದಿಲ್ಲ ಎಂದ ಗೋಕಾಕ್ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಹೇಳಿದರು.
ಉಪ್ಪಾರಹಟ್ಟಿ ಗ್ರಾಮದಲ್ಲಿ ಅಶೋಕ್ ಪೂಜಾರಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿ ನಾವು ಈ ದೇಶದ ನಾಗರಿಕರು, ಕಾನೂನು ಪಾಲನೆ ನಮ್ಮ ಕರ್ತವ್ಯ. ನನ್ನ ವಿರುದ್ಧ ಕೇಸ್ ದಾಖಲಾಗಿದ್ರೆ ಏನು ಮಾಡಬೇಕೆಂದು ವಿಚಾರ ಮಾಡುವೆ. ನಾನು ಜಂಗಮನಾಗಿ ಹುಟ್ಟಿದ್ದು ಜೋಳಿಗೆ ನಮ್ಮ ಜನ್ಮಸಿದ್ಧ ಹಕ್ಕು. ಕಾನೂನಾತ್ಮಕವಾಗಿ ನಾನಿದನ್ನು ವಿಮರ್ಶೆ ಮಾಡುವುದಿಲ್ಲ.
ಧಾರ್ಮಿಕವಾಗಿ ನಾವು ಜೋಳಿಗೆ ಹಾಕಿಕೊಂಡು ಭಿಕ್ಷಾಟನೆ ಮಾಡಿ ದಾಸೋಹ ಕಾರ್ಯ ಮಾಡುತ್ತಾ ಬಂದಿದ್ದೇವೆ. ಮತದಾನ ಅಂದ್ರೆ ಮತವನ್ನು ದಾನ ಮಾಡೋದು. ಜೋಳಿಗೆಯಲ್ಲಿ ಕಾಣಿಕೆ ಹಾಕಿದ್ರೂ ದಾನ, ಮತ ಹಾಕುವೂದು ದಾನವೇ ಆಗಿದೆ. ಭಾವನಾತ್ಮಕ ವಿಷಯ ಎನ್ನುವ ಬಗ್ಗೆ ಪ್ರಶ್ನೆಯೇ ಇಲ್ಲ. ಮತ ಹಾಕುವವರೆಲ್ಲ ವೀರಶೈವರಲ್ಲ, ಎಲ್ಲ ಧರ್ಮದವರು ಮತ ಹಾಕುತ್ತಾರೆ.
ನನ್ನ ದೃಷ್ಟಿಯಲ್ಲಿ ದುಡ್ಡು ಕೊಟ್ಟು ಮತ ಪಡೆದ್ರೆ ದೊಡ್ಡ ಅಪರಾಧ. ಅದು ನಮ್ಮ ಗೋಕಾಕ್ ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದು, ಅದನ್ನು ಪ್ರಶ್ನಿಸುವಂತಹ ಕಾನೂನಿನ ಶಕ್ತಿ ಬೇಕಾಗಿದೆ. ಹೊರತು ಜೋಳಿಗೆ ಕೇಳಿ ಮತ ಕೇಳಿದ್ರೆ ಕೇಸ್ ಹಾಕೋದು ದೊಡ್ಡ ಕೆಲಸ ಅಲ್ಲ. ಅಕಸ್ಮಾತ್ ಕೇಸ್ ದಾಖಲಾಗಿದ್ರೆ ಕಾನೂನು ರೀತಿ ನಡೆದುಕೊಳ್ಳುವೆ ಎಂದರು.
ಗೋಕಾಕ್‌ನಲ್ಲಿ ಚುನಾವಣೆ ವೇಳೆ ಅವ್ಯಾಹತವಾಗಿ ಹಣ ಹಂಚಿಕೆ ಆಗುತ್ತದೆ ಎಂದು ಹೇಳಿದ ಅವರು ಹಿಂದಿನ ಮೂರು ಚುನಾವಣೆಯಲ್ಲಿ ದೂರು ಕೊಟ್ಟರೂ ಪ್ರತಿಫಲ ಸಿಕ್ಕಿಲ್ಲ. ಹತಾಶರಾಗಿ ನಾವು ಸುಮ್ಮನೇ ಕುಳಿತಿದ್ದೇವೆ ಎಂದ ಅಶೋಕ್ ಪೂಜಾರಿ ಹೇಳಿದರು