ಚಿಕ್ಕೋಡಿ:ಕಾಗವಾಡ ಶಾಸಕ ರಾಜು ಕಾಗೆ ಗಂಡಸಲ್ಲ : ಸಚಿವ ಜಾರಕಿಹೊಳಿ ತಿರುಗೇಟು
ಕಾಗವಾಡ ಶಾಸಕ ರಾಜು ಕಾಗೆ ಗಂಡಸಲ್ಲ : ಸಚಿವ ಜಾರಕಿಹೊಳಿ ತಿರುಗೇಟು
ಚಿಕ್ಕೋಡಿ ಅ 1: ಕಾಗವಾಡ ಶಾಸಕ ರಾಜು ಕಾಗೆ ಗಂಡಸಲ್ಲ ಎಂದು ಹೇಳುವ ಮೂಲಕ ಶಾಸಕ ಕಾಗೆ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ
ಜುಲೈ 23 ರಂದು ರಾಯಬಾಗದಲ್ಲಿ ಗ್ಯಾಸ್ ವಿತರಿಸುವ ಸಂದರ್ಭದಲ್ಲಿ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಗಂಡಸರೆ ಇಲ್ಲ ಎಂದು ಹೇಳಿದ್ದರು ಎನ್ನಲಾಗಿದೆ. ಇದಕ್ಕೆ ಸಚಿವ ರಮೇಶ ಜಾರಕಿಹೊಳಿ ಇಂದು ಪ್ರತಿಕ್ರಿಯಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವೀಕ್ಷಣೆ ಬಳಿಕ ಮಾತನಾಡಿದ ಅವರು, ರಾಜು ಕಾಗೆನೆ ಗಂಡಸಲ್ಲ. ಅಥಣಿ, ರಾಯಬಾಗ, ಕಾಗವಾಡದಲ್ಲಿ ಬೇರೆಯವರನ್ನು ನಿಲ್ಲಿಸಿ ಗೆಲ್ಲಿಸುವ ವಿಶ್ವಾಸ ಹಾಗೂ ಗಂಡಸುತನ ನಮಗಿದೆ. ಆದರೆ ರಾಜು ಕಾಗೆಗೆ ಇಲ್ಲ. ಮುಂಬರುವ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವ ಜಾರಕಿಹೊಳಿ ಹೇಳಿದರು