ಗೋಕಾಕ:ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಬಿಜೆಪಿಯನ್ನು ಬೆಂಬಲಿಸಿ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಬಿಜೆಪಿಯನ್ನು ಬೆಂಬಲಿಸಿ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 29 :
ನಿಮ್ಮೊಂದಿಗೆ ಇದ್ದು ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತೇನೆ. ಯಾವುದೇ ಅಂಜಿಕೆಯಿಲ್ಲದೇ ಧೈರ್ಯವಾಗಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವಂತೆ ಅರಭಾವಿ ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶುಕ್ರವಾರ ಸಂಜೆ ನಗರದ ಗುರುವಾರ ಪೇಟೆಯ ಸುಣಗಾರ ಗಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ಪ್ರಚಾರ ಭಾಷಣ ಮಾಡಿದ ಅವರು, ಗೋಕಾಕ ನಗರದ ಸಮಗ್ರ ಅಭಿವೃದ್ಧಿಗೆ ಹಲವಾರು ಮಹತ್ತರ ಯೋಜನೆಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದರು.
ಈ ಚುನಾವಣೆಯಲ್ಲಿ ಯಾರೂ ಹೆದರಬೇಡಿ. ನಿಮ್ಮ ಅಹವಾಲುಗಳಿಗೆ ಸ್ಪಂದಿಸುವ ಏಕೈಕ ಪಕ್ಷವೇ ಬಿಜೆಪಿ. ಅದರಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಎಲ್ಲ ವರ್ಗಗಳನ್ನು ಸಮಾನವಾಗಿ ತೂಗಿಕೊಂಡು ಜನರ ಅಶೋತ್ತರಗಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತಿದ್ದಾರೆ. ಕಳೆದ ಅಗಷ್ಟ ತಿಂಗಳಲ್ಲಿ ಈ ಶತಮಾನದ ಭಯಂಕರ ನೆರೆ ಹಾವಳಿ ಸಂಭವಿಸಿದ್ದು, ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಹೊಸ ಮನೆಗಳ ನಿರ್ಮಾಣಕ್ಕೆ 5 ಲಕ್ಷ ರೂ ಗಳನ್ನು ನಮ್ಮ ಸರ್ಕಾರ ನೀಡಿರುವದು ದೇಶದಲ್ಲಿಯೇ ಮೊದಲು. ಯಾವುದೇ ಸರ್ಕಾರ ಇಷ್ಟೊಂದು ಪ್ರಮಾಣದಲ್ಲಿ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿರಲಿಲ್ಲ. ಇದು ಸಂತ್ರಸ್ತರ ಕುಟುಂಬಗಳ ಮೇಲೆ ಯಡಿಯೂರಪ್ಪನವರು ಇಟ್ಟಿರುವ ಪ್ರೀತಿ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ರಮೇಶ ಜಾರಕಿಹೊಳಿ ಅವರು ಕಳೆದ ಎರಡು ದಶಕದಿಂದ ಕ್ಷೇತ್ರದ ಅಭಿವೃದ್ಧಿಗಾಗಿ ನಿಮ್ಮೆಲ್ಲರ ಆಶೀರ್ವಾದದಿಂದ ಅವಿರತವಾಗಿ ದುಡಿಯುತ್ತಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಹಿಂದಿನ ಪಕ್ಷವನ್ನು ತೊರೆದಿದ್ದು, ಬಿ.ಎಸ್.ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ಜನರ ಒಳತಿಗಾಗಿ, ಕ್ಷೇತ್ರದ ಸರ್ವಾಂಗೀಣ ಪ್ರಗತಿಗಾಗಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಯಡಿಯೂರಪ್ಪನವರ ಕೈಗಳನ್ನು ಬಲಪಡಿಸಬೇಕಾದರೆ ರಮೇಶ ಜಾರಕಿಹೊಳಿ ಅವರ ಶೇಜ್ ನಂ.2 ಇದ್ದು, ಕಮಲ ಗುರ್ತಿಗೆ ಮತ ನೀಡಿ ಮತ್ತೊಮ್ಮೆ ಈ ಕ್ಷೇತ್ರದ ಸೇವೆಗಾಗಿ ಅವಕಾಶ ಕಲ್ಪಿಸಿಕೊಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.
ಮಾಜಿ ನಗರಾಧ್ಯಕ್ಷ ಸಿದ್ಲಿಂಗ ದಳವಾಯಿ, ನಗರಸಭೆ ಸದಸ್ಯ ಶಿವಪ್ಪ ಗುಡ್ಡಾಕಾರ, ಟಿಎಪಿಸಿಎಂಎಸ್ ನಿರ್ದೇಶಕ ಸುರೇಶ ಗುಡ್ಡಾಕಾರ, ಪ್ರಭಾ ಶುಗರ್ ಚೇರಮನ್ ಅಶೋಕ ಪಾಟೀಲ, ಅರ್ಬನ್ ಬ್ಯಾಂಕ್ ಅಧ್ಯಕ್ಷÀ ಬಸವರಾಜ ಕಲ್ಯಾಣಶೆಟ್ಟಿ, ಲಕ್ಷ್ಮಣ ಪಾಶ್ಚಾಪೂರ, ವರ್ತಕ ವಿಕ್ರಮ ಅಂಗಡಿ, ಶಬ್ಬೀರ್ ಬೇಪಾರಿ, ಯಲ್ಲಪ್ಪ ಮೊತ್ಯಾಗೋಳ, ಶಿವಾನಂದ ವಾಳವಿ, ರಾಜು ಗುಮತಿ, ಸುರೇಶ ಕೋಳಿ, ಸಿದ್ದಪ್ಪ ಮುತ್ತೇಪ್ಪಗೋಳ, ಜಾವೀದ್ ಬೇಪಾರಿ, ವಾಸುದೇವ ಕೋಲಕಾರ, ಲಗಮಪ್ಪ ದುಂಡಗಿ, ರಾಮಚಂದ್ರ ಸುಣಗಾರ, ಸುರೇಶ ಗುದಗಾಪೂರ, ಪರಮಾನಂದ ಪಾಟೀಲ, ನಾಗೇಶ ಲಟ್ಟಿ, ಸಂಜು ಪಾಟೀಲ, ಮುರುಗೇಶ ಹುಕ್ಕೇರಿ, ಕೃಷ್ಣಾ ಖಾನಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ನಾಯಿಕ ಗಲ್ಲಿ, ಕುರುಬರ ಓಣಿಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ಪಾದಯಾತ್ರೆ ಮೂಲಕ ಮತಯಾಚಿಸಿದರು.