RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಲಿಂಗಾಯತ ಸಮಾಜದ ಸಭೆಯಲ್ಲಿ ಅಶೋಕ ಪೂಜಾರಿ ಬೆಂಬಲಿಗರಿಂದ ಭಾರಿ ಗೊಂದಲ.

ಗೋಕಾಕ:ಲಿಂಗಾಯತ ಸಮಾಜದ ಸಭೆಯಲ್ಲಿ ಅಶೋಕ ಪೂಜಾರಿ ಬೆಂಬಲಿಗರಿಂದ ಭಾರಿ ಗೊಂದಲ. 

ಲಿಂಗಾಯತ ಸಮಾಜದ ಸಭೆಯಲ್ಲಿ ಅಶೋಕ ಪೂಜಾರಿ ಬೆಂಬಲಿಗರಿಂದ ಭಾರಿ ಗೊಂದಲ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 30 :

 

ನಗರದ ಕೆಎಲ್‍ಇ ಶಾಲೆಯ ಸಭಾಂಗಣದಲ್ಲಿ ಲಿಂಗಾಯತ ಸಮುದಾಯದ ಮುಖಂಡರ ಸಭೆ ಮುಗಿದ ಬಳಿಕ ದೊಡ್ಡ ಗದ್ದಲವೇ ನಡೆಯಿತು.
ಅಶೋಕ ಪೂಜಾರಿ ಅವರಿಗೆ ಬೆಂಬಲ ನೀಡಿರುವ ಪಕ್ಷೇತರ ಅಭ್ಯರ್ಥಿ ಪ್ರಕಾಶ ಬಾಗೋಜಿ ಲಿಂಗಾಯತ ಮುಖಂಡರ ಸಭೆ ಮುಗಿದ ಬಳಿಕ ಸುರೇಶ್ ಅಂಗಡಿ ಅವರ ಕಾಲಿಗೆ ಬಿದ್ದು ಕೈ ಮುಗಿದು ನೀವು ಒಬ್ಬರನ್ನೇ ಬೆಂಬಲಿಸುವದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆ ಮುಗಿಯುತ್ತಿದ್ದಂತೆ ಲಿಂಗಾಯತ ಮುಖಂಡರಿಂದಲೇ ದಾಂಧಲೆ ನಡೆಸಿದರು. ಲಿಂಗಾಯತ ಸಭೆಯಲ್ಲಿ ಭಾರಿ ಹೈಡ್ರಾಮಾವೇ ನಡೆಯಿತು. ರಮೇಶ ಜಾರಕಿಹೊಳಿಯವರನ್ನ ನಾವು ಬೆಂಬಲಿಸೊಲ್ಲ ಎಂದು ಪಟ್ಟು ಹಿಡಿದರು. 30 ವರ್ಷದಿಂದ ನಮ್ಮನ್ನು ಹಾಗೂ ನಮ್ಮ ಸಮಾಜವನ್ನ ರಮೇಶ ಜಾರಕಿಹೊಳಿ ತುಳಿದಿದ್ದಾರೆ. ಈಗ ನೀವು ಬಂದು ಅವರಿಗೇ ಮತ ನೀಡುವಂತೆ ಹೇಳುತ್ತಿದ್ದಿರಿ. ಇದು ಎಷ್ಟರ ಮಟ್ಟಿಗೆ ಸರಿ ಎಂದು ತರಾಟೆಗೆ ತೆಗೆದುಕೊಂಡ ಪ್ರಕಾಶ್ ಬಾಗೋಜಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ದಯವಿಟ್ಟು ಸಮಾಜದ ಮೇಲೆ ಒತ್ತಡ ಹಾಕದಂತೆ ಮನವಿ ಮಾಡಿದ ಪ್ರಕಾಶ ಬಾಗೋಜಿ, ಸಭೆಯಲ್ಲಿ ಭಾಗಿಯಾಗಿದ್ದ ಪ್ರಭಾಕರ್ ಕೋರೆ, ಮಹಾಂತೇಶ ಕವಟಗಿಮಠ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಸೇರಿದಂತೆ ಹಲವಾರು ನಾಯಕರ ಮುಂದೆ ಬಿಕ್ಕಿ ಬಿಕ್ಕಿ ಅತ್ತು ನಮ್ಮ ಸಮಾಜದ ಮೇಲೆ ಒತ್ತಡ ಹಾಕಬೇಡಿ ಎಂದು ಬೇಡಿಕೆ ಇಟ್ಟರು.

Related posts: