RNI NO. KARKAN/2006/27779|Tuesday, November 5, 2024
You are here: Home » breaking news » ಗೋಕಾಕ:ಅಶೋಕ ಪೂಜಾರಿಯನ್ನು ಗೆಲ್ಲಿಸಿ ಕೊಟ್ಟರೆ, ಮಂತ್ರಿ ಮಾಡಿ ಕಳುಹಿಸುತ್ತೇನೆ : ಮಾಜಿ ಸಿಎಂ ಕುಮಾರಸ್ವಾಮಿ

ಗೋಕಾಕ:ಅಶೋಕ ಪೂಜಾರಿಯನ್ನು ಗೆಲ್ಲಿಸಿ ಕೊಟ್ಟರೆ, ಮಂತ್ರಿ ಮಾಡಿ ಕಳುಹಿಸುತ್ತೇನೆ : ಮಾಜಿ ಸಿಎಂ ಕುಮಾರಸ್ವಾಮಿ 

ಅಶೋಕ ಪೂಜಾರಿಯನ್ನು ಗೆಲ್ಲಿಸಿ ಕೊಟ್ಟರೆ, ಮಂತ್ರಿ ಮಾಡಿ ಕಳುಹಿಸುತ್ತೇನೆ : ಮಾಜಿ ಸಿಎಂ ಕುಮಾರಸ್ವಾಮಿ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 30 :

 

ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರನ್ನು ಗೆಲ್ಲಿಸಿದರೆ ಮಂತ್ರಿಮಾಡಿ ಕಳುಹಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು

ಶನಿವಾರದಂದು ಸಾಯಂಕಾಲ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಪರ ಹಮ್ಮಿಕೊಂಡಿದ್ದ ರೋಡ್ ಶೋ ದಲ್ಲಿ ಮತಯಾಚನೆ ಮಾಡಿ ಮತದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು

ಡಿ 9 ರ ನಂತರ ಯಾವುದೇ ಸರಕಾರ ವಿರಲಿ ಗೋಕಾಕ ಮತಕ್ಷೇತ್ರದ ಅಭಿವೃದ್ಧಿ ಮಾಡಲು ಅಶೋಕ ಪೂಜಾರಿ ಅವರನ್ನು ಮಂತ್ರಿ ಮಾಡವ ಜವಾಬ್ದಾರಿ ನನ್ನದು. ಇದು ಮತ ತೆಗೆದು ಕೋಳ್ಳಲು ಈ ಮಾತು ಹೇಳುತ್ತಿಲ್ಲಾ ಮಾಡಿ ತೊರಿಸುತ್ತೇನೆ .ಕಾಂಗ್ರೆಸ್ ಮತ್ತು ಬಿಜೆಪಿಯವರು ನನ್ನ ಮುಂದೆ ಬರುವ ಕಾಲ ಮತ್ತೆ ದೂರವಿಲ್ಲ‌ ಆರಿಸಿ ಕಳುಹಿಸಿ. ಬೆಂಗಳೂರಿನಿಂದ ವಾಪಸ ಗೋಕಾಕ್ಕೆ ಬರುವಾಗ ಮಂತ್ರಿ ಮಾಡಿ ಕಳುಹಿಸುತ್ತೇನೆ ಎಂದು ಭರವಸೆ ನೀಡಿದರು
ಅಶೋಕ ಪೂಜಾರಿ ನಿಮ್ಮನ್ನು ನಂಬಿ ಈ ಚುನಾವಣೆ ನಿಂತಿದ್ದಾರೆ ಈ ಬಾರಿ ಅವಕಾಶ ನೀಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದ ಕುಮಾರಸ್ವಾಮಿ ಬೆಳಗಾವಿ ಮಹಾ ಜನತೆ ಮನಸ್ಸು ಮಾಡಿ ನಮ್ಮ ಪಕ್ಷಕ್ಕೆ ಮತ ನೀಡಿ ಲಿಂಗಾಯತ ಸಮಾಜಕ್ಕೆ ಶಕ್ತಿ ಕೊಡುತ್ತೇನೆ. ಎಂದು ಹೇಳಿದರು .

ಅಶೋಕ ಪೂಜಾರಿ ಅವರು ಕೊನೆಯ ಹಂತದವರೆಗು ಚುನಾವಣೆ ನಿಲ್ಲಲು ತಯಾರಿರಲಿಲ್ಲ, ಜನತೆ ವಿನಂತಿ ಮೇರೆಗೆ ಜನತೆಯ ಧ್ವನಿಯಾಗಿ ಅಶೋಕ ಚುನಾವಣೆ ನಿಂತಿದ್ದಾರೆ. ಈ ಚುನಾವಣೆ ಧರ್ಮ ಮತ್ತು ಅಧರ್ಮಗಳ ಮಧ್ಯ ನಡೆಯುವ ಹೋರಾಟ ಗೋಕಾಕ ಜನತೆಯ ಅಭ್ಯರ್ಥಿಯಾಗಿ ಅಶೋಕ ಚುನಾವಣೆ ಕಣದಲ್ಲಿ ಇದ್ದಾರೆ. ತಾಲೂಕಿನ ಅಭಿವೃದ್ಧಿಗೆ ಮತ ಹಾಕಬೇಕು , ಸರಕಾರ ಬಿದ್ಧದು ನನಗೆ ಬೇಜಾರಿಲ್ಲ ಸಂಪೂರ್ಣ ಸರಕಾರ ಕೊಟ್ಟು . ಸಿದ್ದರಾಮಯ್ಯ ಕಾಲದಲ್ಲಿಯ ಎಲ್ಲ ಯೋಜನೆಗಳನ್ನು ಮುಂದೆ ವರೆಸಿ, ‌21 ಸಾವಿರ ಕೋಟಿ ಹಣ ಬಿಡುಗೆ ಮಾಡಿ ನಾನು ತಪ್ಪು ಮಾಡಿದ್ದೇನೆ ಅನಿಸುತ್ತದೆ. ಪ್ರತಿಯೋಬ್ಬರಿಗೂ ಸಾಲಮನ್ನಾ ಮಾಡಿದ್ದೇನೆ.ಇದನ್ನು ನೋಡಿ ಮತಹಾಕಿ . ನಮ್ಮ ಸರಕಾರ ರಮೇಶ ಜಾರಕಿಹೊಳಿಗೆ ನಾನು ಯಾವದೇ ಅನ್ಯಾಯ ಮಾಡಿಲ್ಲ ರಸ್ತೆ ಅಭಿವೃದ್ಧಿ 150 ಕೋಟಿ , ಏತ ನೀರಾವರಿಗೆ ಯೋಜನೆಗೆ 165 ಕೋಟಿ ಕೊಟ್ಟರು ನನಗೆ ಮೋಸ ಮಾಡಿದ್ದಾರೆ. ಬೆಳಗಾವಿ ಸವಕಾರ ಎಂದು ಹೆಸರು ಹೊಂದಿದ ಇವರು ಅದೆಂತಾ ಸವಕಾರ ಜನರ ಸಮಸ್ಯೆಗೆ ಸ್ವಂದಿಸದೆ ಆರಾಮಾಗಿದ್ದರು ಎಂದು ಕುಮಾರಸ್ವಾಮಿ ಲಿಂಗಾಯತ ಸಮಾಜದ ಬಂಧುಗಳಿಗೆ ‌ಆಮಿಷಕ್ಕೆ ಹಾಕಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಂದೆ ಸಮಾಜಕ್ಕೆ ಮುಖ್ಯಮಂತ್ರಿಯಾ ಅಥವಾ ಎಲ್ಲ ಸಮಾಜಕ್ಕೆ ಎಂದು ಪ್ರಶ್ನಿಸಿದ ಅವರು . ಅನರ್ಹ ಶಾಸಕ ರಮೇಶ ಬೆಂಬಿಲಿಸಲು ಲಿಂಗಾಯತ ಮುಂದಾಗಬೇಕಾ, ಗುಂಡಾಗಳಿಗೆ ಪ್ರಾಣ ಕೊಟ್ಟು ಉಳಿಸಿಕೋಳುತ್ತೇನೆ ಎಂದು ಹೇಳುವ ಯಡಿಯೂರಪ್ಪ ಅವರಿಗೆ ಜನ ಪಾಠ ಕಲಿಸುತ್ತಾರೆ
ಅಶೋಕ ಪೂಜಾರಿ ಅವರಿಗೆ ಬಿಜೆಪಿ ಪಕ್ಷದವರು ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಕೊಟ್ಟರು ಅವರು ತಿರಸ್ಕಾರ ಮಾಡಿ ಚುನಾವಣೆಗೆ ನಿಂತಿದ್ದಾರೆ. ಅನರ್ಹ ಶಾಸಕ ನೀರಾವರಿ ಸಚಿವರಾಗ ಬೇಕೆಂದು ಸರಕಾರ ಕೆಡವಿದ್ದಾರೆ . ಈ ಬಾರಿ ಅಶೋಕ ಪೂಜಾರಿ ಅವರಿಗೆ ಮತಹಾಕಿ ಆರ್ಶಿವಾದ ಮಾಡಬೇಕೆಂದು ಮನವಿ ಮಾಡಿದರು.
ಅಭ್ಯರ್ಥಿ ಅಶೋಕ ಪೂಜಾರಿ ಮಾತನಾಡಿ ಮೂರು ಸಲಾ ಚುನಾವಣೆ ನಿಂತು ಸೋತಿದ್ದೇನೆ ದೊಡ್ಡ ಪ್ರಮಾಣದ ಬೆಂಬಲ ಕೊಟ್ಟಿದಿರಿ , ನೀವು ಸೋತಿಲ್ಲ , ನಾವು ಸೋತ್ತಿಲ್ಲಾ ಚುನಾವಣೆ ಆಯೋಗ ಸೊತ್ತಿದೆ, ಆಡಳಿತ ಯಂತ್ರ ಸೊತಿದ್ದೆ . 25 ಕೊಟ್ಟಿ ರೊಕ್ಕ ಹಂಚಿ ಗೆದಿದ್ದಾರೆ ಅದು ಪ್ರಾಮಾಣಿಕ ಗೆಲುವಲ್ಲ , ಇಂತಹ ಸಂದರ್ಭದಲ್ಲಿ ಗಾಂಧಿಜೀ ನಿಂತರೂ ಸೋಲುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದ ಅಶೋಕ ಪೂಜಾರಿ

ಚುನಾವಣೆಯಿಂದ ಹಿಂದೆ ಸರಿಯಲು ನನಗೆ ಆಮಿಷ ಒಡಿದ್ದರು .ಆವಾಗ ನನಗೆ ನೀವು ನೆನಪಾಗಿ ಚುನಾವಣೆಗೆ ನಿಂತಿದ್ದೇನೆ ನನಗೆ ಆರ್ಶಿವಾದ ಮಾಡಿರಿ ಎಂದು ಮನವಿ ಮಾಡಿದರು .
2 ಬಾರಿ ಜೆಡಿಎಸ್ 1 ಬಾರಿ ಬಿಜೆಪಿ ಅನಿವಾರ್ಯವಾಗಿ ಬಿಜೆಪಿ ನಿಂತಿದ್ದೆ ಆಗ ನಮ್ಮವರೆ ನಮಗೆ ಕೈ ಕೋಟ ಪರಿಣಾಮ ನಾವು ಮತ್ತೆ ಸೋತ್ತಿದ್ದೇವೆ.
ಈ ಬಾರಿ ಜನರೆ ನನ್ನ ಚುನಾವಣೆ ಮಾಡುತ್ತಿದ್ದಾರೆ ಇದರಿಂದ ನನಗೆ ಬಲ ಬಂದಿದೆ . ಇದರಲ್ಲಿ ನಮ್ಮ ಗೆಲುವ ನಿಚ್ಚಿತ . ವವ್ಯಸ್ಥೆ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ಪೂಜಾರಿ . ಗೆದ್ದರು ನೀವೆ, ಸೋತರೆ ನೀವೆ. ಈ ಹೋರಾಟ ವವ್ಯಸ್ಥೆ ವಿರುದ್ಧ ಹೋರಾಟ ಇದರಲ್ಲಿ ಗೆಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗುಡಿಯಲ್ಲಿ ದೇವರಿಲ್ಲ ಚಿಕ್ಕೋಳಿ ಹತ್ತಿರ ವಿರುವ ಮನೆಯಲ್ಲಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜಿಲ್ಲಾ ಆಗಿಲ್ಲ, ಕಾಲೇಜು ಆಗಿಲ್ಲ, ಕಾರಖಾನೆಯ ಇಲ್ಲ, ಎಂದು ರಮೇಶ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟಿದರೆ . ನಾನೇ ಅವರಿಗೆ ಮಾಲಿ ಹಾಕುತ್ತಿದ್ದೆ ಆದರೆ ನೀರಾವರಿ ಖಾತೆಗಾಗಿ ರಾಜೀನಾಮೆ ಕೊಟ್ಟಿದ್ದಾರೆ. ಈ ಬಾರಿ ನನ್ನನ್ನು ಆಯ್ಕೆಮಾಡಿ ನಿಮ್ಮ ಅವಕಾಶ ಮಾಡಿ ಕೊಡಬೇಕೆಂದು ಅಶೋಕ ಪೂಜಾರಿ ಮನವಿ ಮಾಡಿಕೊಂಡರು.

ರೋಡ್ ಶೋ ದಲ್ಲಿ ಜೆಡಿಎಸ್ ಮುಖಂಡರುಗಳಾದ ಬಂಡೆಪ್ಪಾ ಕಾಶಂಪೂರ , ಕೋನರೆಡ್ಡಿ, ಭೀಮಪ್ಪ ಗಡಾದ ಸೇರಿದಂತೆ ಇತರರು ಇದ್ದರು

Related posts: