ಗೋಕಾಕ:ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ಕೀರ್ತಿ ರಮೇಶ ಜಾರಕಿಹೊಳಿ ಅವರಿಗೆ ಸಲ್ಲುತ್ತದೆ : ಕೇಂದ್ರ ಸಚಿವ ಅಂಗಡಿ
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ಕೀರ್ತಿ ರಮೇಶ ಜಾರಕಿಹೊಳಿ ಅವರಿಗೆ ಸಲ್ಲುತ್ತದೆ : ಕೇಂದ್ರ ಸಚಿವ ಅಂಗಡಿ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಡಿ 1:
ರಮೇಶ ಜಾರಕಿಹೋಳಿಯವರಿಗೆ ಕಾಂಗ್ರೆಸ್ಸದಲ್ಲಿ ಸಾಕಷ್ಟು ಅವಕಾಶಗಳಿದ್ದರೂ ತಮ್ಮ ಸ್ವಾಬಿಮಾನಕ್ಕೆ ದಕ್ಕೆ ಉಂಟಾಗಿದ್ದಕ್ಕಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ತಮ್ಮ ಜೊತೆಗೆ 15 ಜನ ಶಾಸಕರನ್ನು ಕರೆದುಕೊಂಡು ಬಿಜೆಪಿ ಸೇರಿ ಯಡಿಯೂರಪ್ಪನವರನ್ನು ಮುಖ್ಯ ಮಂತ್ರಿಮಾಡಿದ್ದಾರೆಂದು ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಹೇಳಿದರು.
ಅವರು ಶನಿವಾರ ಘಟಪ್ರಭಾ ಗಾಂಧಿ ಚೌಕದಲ್ಲಿ ಉಪಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೋಳಿಯವರ ಪ್ರಚಾರರಾರ್ಥ ಸಬೆಯನ್ನದ್ದೇಶಿಸಿ ಮಾತನಾಡುತ್ತ, ರಮೇಶ ಜಾರಕಿಹೋಳಿಯವರ ಸ್ವಾಭಿಮಾನವನ್ನು ಉಳಿಸುವದಕ್ಕಾಗಿ ಯಡಯೂರಪ್ಪನವರನ್ನು ಮುಖ್ಯ ಮಂತ್ರಿಯಾಗಿ ಮುಂದುವರೆಸುದಕ್ಕಾಗಿ ತಾವೆಲ್ಲರೂ ಒಟ್ಟಾಗಿ ರಮೇಶ ಜಾರಕಿಹೋಳಿಯವರನ್ನು ಬೆಂಬಲಿಸಿ ಬಾರತೀಯ ಜನತಾ ಪಾರ್ಟಿಯ ಕಮಲದ ಚಿತ್ರಕ್ಕೆ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೆಳಗಾವ ಜಿಲ್ಲಾ ಗ್ರಾಮೀಣ ಅಧ್ಯಕ್ಷ ವಿಶ್ವನಾಥ ಪಾಟೀಲ,ಲಕ್ಷ್ಮಣ ತಪಶಿ,ಜಿಲ್ಲಾ ಪಂಚಾಯತಿ ಸದಸ್ಯ ಗೋವಿಂದ ಕೊಪ್ಪದ, ಜಿಲ್ಲಾ ಮಹಿಳಾ ಮೂರ್ಚಾ ಅಧ್ಯಕ್ಷೆ ಪ್ರೇಮಾ ಭಂಡಾರಿ, ಸುರೇಶ ಕಾಡದವರ, ಜಿ.ಎಸ್.ರಜಪೂತ, ಸುರೇಶ ಪಾಟೀಲ, ರಾಜು ಕತ್ತಿ, ಡಿ.ಎಮ್.ದಳವಾಯಿ,ರಾಮಣ್ಣ ಹುಕ್ಕೇರಿ, ಗಂಗಾದರ ಬಡಕುಂದ್ರಿ, ಎಸ್.ಆಯ್ ಬೆನವಾಡೆ,ಸಲೀಮ ಕಬ್ಬೂರ, ಮಲ್ಲಿಕಾರ್ಜುನ ತುಕ್ಕಾನಟ್ಟಿ,ಕೆಂಪನ್ನ ಚೌಕಶಿ, ನಾಗರಾಜ ಚಚಡಿ ಸೇರಿದಂತೆ ಅನೇಕರು ಇದ್ದರು.