ಗೋಕಾಕ:ಯಡಿಯೂರಪ್ಪ ಆತಂಕ ಪಡುವ ಅವಶ್ಯಕತೆ ಇಲ್ಲ ನಾವು ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವದಿಲ್ಲ : ಮಾಜಿ ಪ್ರಧಾನಿ ದೇವೇಗೌಡ
ಯಡಿಯೂರಪ್ಪ ಆತಂಕ ಪಡುವ ಅವಶ್ಯಕತೆ ಇಲ್ಲ ನಾವು ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವದಿಲ್ಲ : ಮಾಜಿ ಪ್ರಧಾನಿ ದೇವೇಗೌಡ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 2 :
ರಾಜ್ಯದಲ್ಲಿ ಅಡಳಿತ ನಡೆಸುತ್ತಿರುವ ಯಡಿಯೂರಪ್ಪನವರು ಆತಂಕ ಪಡುವ ಅಗತ್ಯವಿಲ್ಲ, ನಾವು ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವದಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ಸೋಮವಾರದಂದು ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು
ನಾವು ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ಹೊಂದಾಣಿಕೆ ಮಾಡಿಕೊಂಡು ಕೈ ಸುಟ್ಟಿಕೊಂಡಿದ್ದೇವೆ ಈಗಾಗಲೇ ನಾವು ಮಾಡಿದ ತಪ್ಪುಗಳನ್ನು ಮತ್ತೆ ಮರುಕಳಿಸದಂತೆ ಜಾಗೃತಿಯನ್ನು ವಹಿಸಿ. ನಾವು ಸಿದ್ದರಾಮಯ್ಯನವರೊಂದಿಗೆ ಕೈ ಜೋಡಿಸಲ್ಲ ಎಂದು ತಿಳಿಸಿದರು.
ಈಗಾಗಲೇ ಬಿಜೆಪಿಯಲ್ಲಿ 105 ಜನರೊಂದಿಗೆ ಆಡಳಿತ ನಡೆಸುತ್ತಿರುವ ಯಡಿಯೂರಪ್ಪನವರು ಅವರೇ ಮುಂದು ವರಿಯಲಿ ಎಂದು ವ್ಯಂಗ್ಯವಾಗಿ ಹೇಳಿದ ಅವರು ಅನರ್ಹರೆಲ್ಲರನ್ನು ಮಂತ್ರಿಗಳನ್ನಾಗಿ ಮಾಡಲಾಗುವದು ಎಂದು ಹೇಳಿಕೆಗಳನ್ನು ನೀಡುತ್ತಿರುವ ಯಡಿಯೂರಪ್ಪಪವರು ಸೋತವರನ್ನು ಮಂತ್ರಿಯನ್ನಾಗಿ ಮಾಡಿ ಹಿರಿಯ ಶಾಸಕರನ್ನು ಕಡೆಗಣೆಸುತ್ತಿದ್ದಾರೆ . ತಮ್ಮ ಪಕ್ಷದಲ್ಲಿ ನಿಷ್ಠಾವಂತ ಶಾಸಕರ ಬಗ್ಗೆಯೂ ಕಾಳಜಿಯನ್ನು ವಹಿಸಲಿ ಎಂದು ಸಲಹೆ ನೀಡಿದರು
ರಾಜ್ಯದಲ್ಲಿ ಕುದುರೆ ವ್ಯಾಪಾರ ಮಾಡಿ ಆಡಳಿತಕ್ಕೆ ಬಂದ ಬಂದಿರುವ ಯಡಿಯೂರಪ್ಪ ನೆರೆ ಸಂದರ್ಭದಲ್ಲಿ ಏಕಾಂಗಿಯಾಗಿ ಕಾರ್ಯನಿರ್ವಹಿಸಿದರು. ಸಂತ್ರಸ್ತರಿಗೆ ಪರಿಹಾರವನ್ನು ಕಲ್ಪಿಸಲು ಪರದಾಡಿದ ಅವರ ನಡೆ ತೃಪ್ತಿಕರವಾಗಿಲ್ಲ ಎಂದು ತಿಳಿಸಿದರು.
ನಾನು ಯಾವತ್ತು ಜಾತಿ ರಾಜಕಾರಣ ಮಾಡಿಲ್ಲ ನಮ್ಮ ಅಧಿಕಾರವಧಿಯಲ್ಲಿ 8 ಹಿಂದುಳಿದ ವರ್ಗಗಳಿಗೆ ಹಾಗೂ 7 ಜನ ಲಿಂಗಾಯತ ಶಾಸಕರನ್ನು ಮಂತ್ರಿ ಮಾಡಿದ್ದೇನೆ ಆದರೂ ನನಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ ನಾನು ಜಾತಿವಾದಿಯಲ್ಲ ಎಂದು ಸ್ವಷ್ಟಪಡಿಸಿದರು.
ನಿಮ್ಮ ಗರಡಿಯಲ್ಲಿಯೇ ಬೆಳೆದ ನಿಮ್ಮವರೆ ಇಂದು ನಿಮ್ಮನ್ನು ಕುಕ್ಕೂತ್ತಿದ್ದಾರಲ್ಲ , ದ್ರೋಹ ಮಾಡ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು ಇದನ್ನು ದ್ರೋಹ ಅಂತ ನಾನು ಹೇಳಲ್ಲ ಇದು ನನ್ನ ಕರ್ಮ ಎಂದ ಮಾಜಿ ಪ್ರಧಾನಿ ದೇವೆಗೌಡ ಹೇಳಿದರು
ನಾನು ಪ್ರಧಾನಿಯಾಗಿದ್ದಾಗ 35 ಕೋಟಿ ಜನರಿಗೆ ಅಕ್ಕಿ ಗೋದಿ,ಚಿಮಣಿಎಣ್ಣೆ ಕೊಟ್ಟವ ನಾನು ನಿಮ್ಮ ಮುಂದೆ ಕುಳಿತಿದ್ದಿನಿ, ನಾನು ಹಿಂದಿನ ಘಟನೆ ಹೇಳ್ತಾ ಹೋದರೆ ಅವರಿಗೆ ಮನಸಿಗೆ ಹರ್ಟ ಆಗುತ್ತೆ, ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರು ಟಿಕಿಸಿದರು
ಅಶೋಕ ಪೂಜಾರಿ ಕಳೆದ 20 ವರ್ಷಗಳಿಂದ ನಮ್ಮ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ನಮ್ಮ ಪಕ್ಷದ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಮ್ಮಲ್ಲಿಯ ಕೆಲ ತಪ್ಪುಗಳಿಂದ ಅವರು ಬಿಜೆಪಿ ಸೇರಿದ್ದರು ಇಂದು ಮತ್ತೆ ನಮ್ಮ ಪಕ್ಷಕ್ಕೆ ಕರೆ ತಂದಿದ್ದೇವೆ ಅವನಿಗೆ ಸಾಕಷ್ಟು ಅನ್ಯಾಯವಾಗಿದೆ ಈ ಬಾರಿ ಅವರನಿಗೆ ನ್ಯಾಯ ದೊರೆಕಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಂಡೆಪ್ಪಾ ಕಾಶಂಪೂರ, ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ, ಭೀಮಪ್ಪ ಗದಾಡಿ ಸೇರಿದಂತೆ ಇತರರು ಇದ್ದರು.