RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಬಿಗಿ ಭದ್ರತೆ ಮಧ್ಯ ನಾಳೆ ಉಪ ಚುನಾವಣೆಯ ಬಿಗ್ ಪೈಟ್

ಗೋಕಾಕ:ಬಿಗಿ ಭದ್ರತೆ ಮಧ್ಯ ನಾಳೆ ಉಪ ಚುನಾವಣೆಯ ಬಿಗ್ ಪೈಟ್ 

ಬಿಗಿ ಭದ್ರತೆ ಮಧ್ಯ ನಾಳೆ ಉಪ ಚುನಾವಣೆಯ ಬಿಗ್ ಪೈಟ್

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 4 :

 

ನಾಳೆ ಡಿಸೆಂಬರ 5 ರಂದು ಗೋಕಾಕ ಕ್ಷೇತ್ರದ ಉಪಚುನಾವಣೆಯ ಮತದಾನ ನಡೆಯಲಿದ್ದು , ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,42,124 ಮತದಾರರಿದ್ದು ಅದರಲ್ಲಿ ಪುರುಷ – 1,19,737, ಮಹಿಳಾ – 1,22,373, ಮತ್ತು ಇತರೆ – 14 ಮತದಾರರಿದ್ದಾರೆ.

ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1573 ಸೇವಾ ಮತದಾರರಿದ್ದಾರೆ.ಗೋಕಾಕ ಕ್ಷೇತ್ರದ ನಗರ ಪ್ರದೇಶದಲ್ಲಿ 123, ಗ್ರಾಮೀಣ ಪ್ರದೇಶದಲ್ಲಿ 165 ಸೇರಿ ಒಟ್ಟು 288 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ

18 ರಿಂದ 19 ವಯಸ್ಸಿನ ಒಟ್ಟು 4,763 ಯುವ ಮತದಾರರು ಈ ಬಾರಿ ತಮ್ಮ ಮೊದಲನೆಯ ಮತ ಚಲಾವಣೆ ಮಾಡಲಿದ್ದಾರೆ .ಗೋಕಾಕ್ ವಿಧಾನಸಭಾ ಕ್ಷೇತ್ರದ ಮಹಿಳಾ ಮತದಾರರಿಗಾಗಿ ಒಂದು ಸಖಿ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

ಡಿಸೆಂಬರ್ 5ರಂದು‌ ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ
ಮೂರು

ಉಪ ಚುನಾವಣೆ ಪ್ರಯುಕ್ತ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಈ ನಿಷೇಧಾಜ್ಞೆ ಡಿಸೆಂಬರ್ 5 ರ ಸಂಜೆ 6 ಗಂಟೆಯವರೆಗೆ ಜಾರಿಯಲ್ಲಿರಲಿದ್ದೆ ಇದಲ್ಲದೆ ಡಿಸೆಂಬರ್ 5 ರ‌ ಮಧ್ಯರಾತ್ರಿ 12ರವರೆಗೆ ಮದ್ಯಮಾರಾಟ ನಿಷೇಧ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಪೊಲೀಸ ಭದ್ರತೆ : ಮುಂಜಾಗ್ರತಾ ಕ್ರಮವಾಗಿ ಗೋಕಾಕ ಮತಕ್ಷೇತ್ರದಾದ್ಯಂತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. 6 ಡಿ ಎಸ್ ಪಿ, 12 ಪಿಐ, 33 ಪಿಎಸ್ಐ, 62 ಎಎಸ್ಐ,1143 ಪೊಲೀಸ್ ಪೊಲೀಸ್ ಪೇದೆಗಳು ಮತ್ತು ಮುಖ್ಯಪೇದೆಗಳು,991 ಹೋಮ್ ಗಾರ್ಡ್ ಸೇರಿ 2248 ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.  ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ 15 ಡಿಎಆರ್ 15 ಕೆಎಸ್ ಆರ್‌ಪಿ 8 ಸಿಎಪಿಎಫ್ ತುಕಡಿಗಳ ನಿಯೋಜನೆ ಮಾಡಲಾಗಿದ್ದು ಗೋಕಾಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚುನಾವಣಾ ಸಿಬ್ಬಂದಿಗಳು ಮತಯಂತ್ರ ಸೇರಿದಂತೆ ಮತದಾನಕ್ಕೆ ಅಗತ್ಯವಿರುವ ಸಾಮಾಗ್ರಿಗಳನ್ನು ಪಡೆಯುತ್ತಿದ್ದಾರೆ.

ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗಳು ಮತಯಂತ್ರಗಳೊಂದಿಗೆ ಮತಗಟ್ಟೆಗಳಿಗೆ ಕರೆದೊಯ್ಯಲು ಬಸಗಳು ಸಜ್ಜುಗೊಂಡಿವೆ

Related posts: