RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಮತದಾರರ ಒಲವು ನಮ್ಮ ಮೇಲಿದ್ದು ನಮ್ಮ ಗೆಲುವು ನಿಚ್ಚಿತವಾಗಿದೆ : ಕಾಂಗ್ರೆಸ್ ಅಭ್ಯರ್ಥಿ ಲಖನ್

ಗೋಕಾಕ:ಮತದಾರರ ಒಲವು ನಮ್ಮ ಮೇಲಿದ್ದು ನಮ್ಮ ಗೆಲುವು ನಿಚ್ಚಿತವಾಗಿದೆ : ಕಾಂಗ್ರೆಸ್ ಅಭ್ಯರ್ಥಿ ಲಖನ್ 

ಮತದಾರರ ಒಲವು ನಮ್ಮ ಮೇಲಿದ್ದು ನಮ್ಮ ಗೆಲುವು ನಿಚ್ಚಿತವಾಗಿದೆ : ಕಾಂಗ್ರೆಸ್ ಅಭ್ಯರ್ಥಿ ಲಖನ್

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 5 :

 

ಮತದಾರರ ಒಲವು ನಮ್ಮ ಮೇಲಿದ್ದು ನಮ್ಮ ಗೆಲುವು ನಿಚ್ಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು

ಗುರುವಾರದಂದು ನಗರದ ಕೆಬಿಎಸ್ ನಂ 3 ಯಲ್ಲಿಯ ಮತಗಟ್ಟೆ ಸಂಖ್ಯೆ131 ರಲ್ಲಿ ಮತದಾನ ಮಾಡಿ ಪತ್ರಕರ್ತರೊಂದಿಗೆ ಮತನಾಡುತಾ ಕ್ಷೇತ್ರದಲ್ಲಿ ಜನತೆ ಅತಿ ಉತ್ಸಾಹದಿಂದ ಕಾಂಗ್ರೆಸ್ ಪರ ಮತ ಚಲಾಯಿಸುತ್ತಿದ್ದು , ನಮ್ಮ ಗೆಲುವು ನಿಚ್ಚಿತ ಎಂದು ಲಖನ್ ಜಾರಕಿಹೊಳಿ ತಿಳಿಸಿದರು

ನಮ್ಮ ತಂದೆ ತಾಯಿ ಅನ್ಯಾಯದ ವಿರುಧ್ಧ ಹೋರಾಡುವದನ್ನು ನಮಗೆ ಕಲಿಸಿದ್ದು ಆದ್ದರಿಂದಲೇ ಸಂಬಂಧಗಳನ್ನು ಲೆಕ್ಕಿಸಿದೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಈ ಚುನಾವಣೆಯಲ್ಲಿ ಸ್ವರ್ಧಿಸಿದ್ದೇವೆ ನಮ್ಮ ವಿರೋಧಿಗಳು ಸೋಲಿನ ಭಯದಿಂದ ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾರೆ . ಫಲಿತಾಂಶ ಬಂದ ನಂತರ ವಾಸ್ತವಿಕತೆ ತಿಳಿಯುತ್ತದೆ. ಹಿಂದೆ ಯಮಕನಮರಡಿ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಿಸಿ ಜಗಳ ಹಚ್ಚುವಂತಹ ಕೆಲಸ ರಮೇಶ ಜಾರಕಿಹೊಳಿ ಅವರೇ ಮಾಡಿದ್ದಾರೆ ಎಂದು ರಮೇಶ ಜಾರಕಿಹೊಳಿ ಅವರ ವಿರುದ್ಧ ಹರಿಹಾಯ್ದರು.

Related posts: