RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಉಪ ಚುನಾವಣೆ : ಶೇ. 73.08 ಮತದಾನ ಕೆಲವು ಕಡೆಗೆ ಚಿಕ್ಕಪುಟ್ಟ ಮಾತಿನ ಚಕಮಕಿ

ಗೋಕಾಕ:ಉಪ ಚುನಾವಣೆ : ಶೇ. 73.08 ಮತದಾನ ಕೆಲವು ಕಡೆಗೆ ಚಿಕ್ಕಪುಟ್ಟ ಮಾತಿನ ಚಕಮಕಿ 

ಉಪ ಚುನಾವಣೆ : ಶೇ. 73.08 ಮತದಾನ ಕೆಲವು ಕಡೆಗೆ ಚಿಕ್ಕಪುಟ್ಟ ಮಾತಿನ ಚಕಮಕಿ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 5 :
ಉಪ-ಚುನಾವಣೆಯ ಹೈವೋಲ್ಟೆಜ ಕ್ಷೇತ್ರವಾದ ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಕೆಲವು ಕಡೆಗೆ ಚಿಕ್ಕಪುಟ್ಟ ಮಾತಿನ ಚಕಮಕಿ ಬಿಟ್ಟರೆ ಒಟ್ಟಾರೆ ಶಾಂತಿಯುತ ಮತದಾನವಾಗಿದ್ದು ಶೇ. 73.08 ಮತದಾನವಾಗಿದೆ.
ಕೆಲ ಮತಗಟ್ಟೆಗಳ ಮುಂದೆ ಮುಂಜಾನೆಯಿಂದಲೇ ಜನರು ಸಾಲಿನಲ್ಲಿ ನಿಂತು ಮತ ಚಲಾಯಿಸಿದರೆ ಕೆಲವೆಡೆ ಮತದಾನ ನಿಧಾನವಾಗಿತ್ತು. ಮಧ್ಯಾನ್ಹದ ನಂತರ ಮತದಾನ ಚುರುಕುಗೊಂಡಿತ್ತು. ಕೆಲವೊಂದೆಡೆ ಮತಯಂತ್ರಗಳಲ್ಲಿ ಲೋಪದೋಷಗಳು ಕಂಡು ಬಂದಿದ್ದು ಅಧಿಕಾರಿಗಳು ತ್ವರಿತವಾಗಿ ಸರಿಪಡಿಸಿದರು. ಚುನಾವಣಾ ಆಯೋಗ ನಿರ್ಮಿಸಿದ ಸಖಿ ಪಿಂಕ್ ಮತಗಟ್ಟೆಗಳಲ್ಲಿ ಮಹಿಳೆಯರು ಅತ್ಯಂತ ಹುಮ್ಮಸ್ಸಿನಿಂದ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ವಿಶೇಷವಾಗಿ ಅಂಗವಿಕಲರಿಗೆ ಹಾಗೂ ವಯೋವೃದ್ದರಿಗೆ ವ್ಹೀಲ್‍ಚೇರ್‍ಗಳನ್ನು ವ್ಯವಸ್ಥೆಯನ್ನು ಮಾಡಲಾಗಿತ್ತು. ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಇವರಿಗೆ ಮತದಾನ ಮಾಡಲು ಸಹಾಯ ಮಾಡಿದರು. ಪೋಲೀಸ ಇಲಾಖೆ ಅವಶ್ಯಕ ಬಂದೋಬಸ್ತ ಏರ್ಪಡಿಸಿದರಿಂದ ಯಾವುದೇ ಅಹಿತಕರ ಘಟನೆಗಳಿಗೆ ನಡೆದಿರುವದಿಲ್ಲ. ಮತದಾರರಿಗೆ ತೊಂದರೆಗಳು ಆಗದಂತೆ ಮತದಾನಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನು ಚುನಾವಣಾಧಿಕಾರಿಗಳು ವಿಶೇಷವಾದ ಮುರ್ತುವರ್ಜಿ ವಹಿಸಿದ್ದರು.

Related posts: