RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಶಿಕ್ಷಣ ಮತ್ತು ಉದ್ಯೋಗ ಜನರ ಮೂಲಭೂತ ಹಕ್ಕಾಗಿರಬೇಕು : ಬಸವರಾಜ ಖಾನಪ್ಪನವರ

ಗೋಕಾಕ:ಶಿಕ್ಷಣ ಮತ್ತು ಉದ್ಯೋಗ ಜನರ ಮೂಲಭೂತ ಹಕ್ಕಾಗಿರಬೇಕು : ಬಸವರಾಜ ಖಾನಪ್ಪನವರ 

ಶಿಕ್ಷಣ ಮತ್ತು ಉದ್ಯೋಗ ಜನರ ಮೂಲಭೂತ ಹಕ್ಕಾಗಿರಬೇಕು : ಬಸವರಾಜ ಖಾನಪ್ಪನವರ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 6 :

 

ಶಿಕ್ಷಣ ಮತ್ತು ಉದ್ಯೋಗ ಜನರ ಮೂಲಭೂತ ಹಕ್ಕಾಗಿರಬೇಕು ಆ ಹಕ್ಕನ್ನು ನೀಡುವ ಕೆಲಸವನ್ನು ಆಳುವ ಸರಕಾರಗಳು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು

ನಗರದ ಕರವೇ ಕಾರ್ಯಾಲಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 63 ನೇ ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು

ಎಲ್ಲರಿಗೂ ಶಿಕ್ಷಣ ಸಿಗಬೇಕು. ಎಲ್ಲರಿಗೂ ಉದ್ಯೋಗ ಸಿಗಬೇಕು ಎನ್ನುವ ಮೂಲ ಪರಿಕಲ್ಪನೆ ಕಟ್ಟಿಕೊಟ್ಟವರು ಅಂಬೇಡ್ಕರ್. ಅಸಮಾನ ಶಿಕ್ಷಣ ನಿವಾರಣೆಗೆಯಾಗಿ ಸಮಾನ ಶಿಕ್ಷಣ ದೊರೆಯಬೇಕು ಎಂದು ಸಂವಿಧಾನದಲ್ಲಿ ಹೇಳಿದ್ದಾರೆ. ಆದರೆ ಆಳುವ ಸರಕಾರಗಳು ಅದನ್ನು ಜಾರಿ ಮಾಡದಿರುವದು ದುರಂತವೇ ಸರಿ. ಆರ್ಥಿಕ , ರಾಜಕೀಯ,ಶೈಕ್ಷಣಿಕ ಅಸಮಾನತೆ ನಿವಾರಿಸಿ, ಜಗತ್ತಿನಲ್ಲಿ ತನ್ನದೆ ಆದ ಸ್ಥಾನ ಪಡೆಯುವ ಶಕ್ತಿ ಭಾರತ ದೇಶಕ್ಕಿದೆ ಆದರೆ ಆಳುವ ಸರಕಾರಗಳಿಗೆ ಇಚ್ಛೆ ಇಲ್ಲದ ಕಾರಣ ನಾವಿಂದು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಈಗಲಾದರೂ ಎಚ್ಚತ್ತು ಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪಾಲಿಸಿ ಭವ್ಯ ಭಾರತವನ್ನು ಕಟ್ಟಲು ಪರಿಶ್ರಮ ಪಡಬೇಕಾಗಿದೆ. ಆ ದಿಸೆಯಲ್ಲಿ ನಾವಿಂದು ಹೆಜ್ಜೆ ಹಾಕಬೇಕೆಂದು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು

ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ಬಸವರಾಜ ಹತ್ತರಕಿ , ಮಂಜುನಾಥ್ ಪ್ರಭುನಟ್ಟಿ, ಮಹಾದೇವ ಕಂಕಾಳೆ, ಯಲ್ಲಪ್ಪ ಆಶಿ, ಭೀಮಣ್ಣ ದುಂಡಗಿ, ಮಡೆಪ್ಪ ಕೋರಕಪೂಜಾರಿ, ಲಕ್ಷ್ಮಣ ಬಿಲಾಯಿ, ಯಲ್ಲಪ್ಪ ನಾಯಿಕ, ರಮೇಶ ಕಳ್ಳಿಮನಿ ,ಹಸನ ಚೌಧರಿ, ಮುಗುಟ ಪೈಲವಾನ, ಪುರಷೋತ್ತಮ ಗುಡ್ಡದಮನಿ,ಲಕ್ಷ್ಮಣ ಕೊಳವಿ ಸೇರಿದಂತೆ ಇತರರು ಉಪಸ್ಥಿತರಿದ್ದರು

Related posts: