ಗೋಕಾಕ:ಸರ್ಕಾರ ಘೋಷಣೆ ಮಾಡಿದ ಬೆಂಬಲ ಬೆಲೆಕ್ಕಿಂತ ಹೆಚ್ಚಿನ ಬೆಲೆ ನೀಡಿ ಗೋವಿನ ಜೋಳ ಖರೀದಿವಂತೆ ಕರ್ನಾಟಕ ರಾಜ್ಯ ಹಸಿರು ಸೇನೆ ಪ್ರತಿಭಟನೆ
ಸರ್ಕಾರ ಘೋಷಣೆ ಮಾಡಿದ ಬೆಂಬಲ ಬೆಲೆಕ್ಕಿಂತ ಹೆಚ್ಚಿನ ಬೆಲೆ ನೀಡಿ ಗೋವಿನ ಜೋಳ ಖರೀದಿವಂತೆ ಕರ್ನಾಟಕ ರಾಜ್ಯ ಹಸಿರು ಸೇನೆ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಡಿ 7 :
ಗೋವಿನಜೋಳದ ಬೆಳೆಗೆ ಸರ್ಕಾರ ಘೋಷಣೆ ಮಾಡಿದ ಬೆಂಬಲ ಬೆಲೆಕ್ಕಿಂತ ಹೆಚ್ಚಿನ ಬೆಲೆ ನೀಡಿ ಗೋವಿನ ಜೋಳ ಖರೀದಿ ಮಾಡಬೇಕು. ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಹಸಿರು ಸೇನೆ ಜಿಲ್ಲಾ ಸಂಚಾಲಕ ಮುತ್ತೆಪ್ಪ ಕುರುಬರ ನೇತೃತ್ವದಲ್ಲಿ ರೈತರ ಬೆಳೆಗೆ ಯೋಗ್ಯ ಬೆಲೆ ನೀಡುವಂತೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಡಾ.ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟಸಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಡಾ.ಅಂಬೇಡ್ಕರ ವೃತ್ತದಲ್ಲಿ ಶನಿವಾರ ಡಿ.7 ರಂದು ರೈತರ ಬೆಳೆಗೆ ಯೋಗ್ಯ ಬೆಲೆ ನೀಡುವಂತೆ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿದ ಕರ್ನಾಟಕ ರಾಜ್ಯ ಹಸಿರು ಸೇನೆ ಜಿಲ್ಲಾ ಸಂಚಾಲಕ ಮುತ್ತೆಪ್ಪ ಕುರುಬರ ಮಾತನಾಡಿ, ಸರ್ಕಾರ ಪ್ರತಿಕ್ವಿಂಟ್ಲಿಗೆ ಗೋವಿನಜೋಳಕ್ಕೆ 2236/-ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ ಮಧ್ಯವರ್ತಿಗಳು, ಗೋವಿನಜೋಳ ಕಾರ್ಖಾನೆಯವರು ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಗೋವಿನಜೋಳ ಖರೀದಿ ಮಾಡುತ್ತಿದ್ದು, ನಿನ್ನೆ ಶುಕ್ರವಾರ ಡಿ.6ರಂದು ಪ್ರತಿಕ್ವಿಂಟಲ್‍ಗೆ ಕೇವಲ 1840/-ರೂ.ಗಳಿಗೆ ಗೋವಿನಜೋಳ ಖರೀದಿ ಮಾಡಲಾಗುತ್ತಿದ್ದು, ಇದು ರೈತರಿಗೆ ಮೋಸ, ಅನ್ಯಾಯ ಮಾಡಿದಂತಾಗುತ್ತದೆ ಎಂದರು.
ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಯವರು ಕಬ್ಬಿನ ಬೆಳೆಗೆ ಈಗಾಗಲೇ ಘೋಷಣೆ ಮಾಡಿದ ಎಲ್ಲಾ ವೆಚ್ಚ ಸೇರಿ ಪ್ರತಿಟನ್‍ಗೆ ಒಟ್ಟು 3300/-ರೂ.ಗಳನ್ನು ರೈತರು ಕಾರ್ಖಾನೆಗೆ ಕಬ್ಬು ಸಾಗಿಸಿದ ಬಳಿಕ ಪ್ರತಿ ಹದಿನೈದು ದಿನಕ್ಕೂಮ್ಮೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡಬೇಕು. ರೈತರಿಂದ ಗೋವಿನಜೋಳವನ್ನು ಕಾರ್ಖಾನೆಯವರು ನೇರವಾಗಿ ಖರೀದಿ ಮಾಡಬೇಕು. ಏಜೆಂಟರ್ ಮೂಲಕ ಗೋವಿನಜೋಳ ಖರೀದಿಗೆ ಕಾರ್ಖಾನೆಯವರು ಮುಂದಾಗುತ್ತಿದ್ದಾರೆ. ಇದರಿಂದ ರೈತರಿಗೆ ಭಾರಿ ಪ್ರಮಾಣದ ನಷ್ಟವಾಗುತ್ತದೆ. ಸರ್ಕಾರ ಘೋಷಣೆ ಮಾಡಿದ ಬೆಂಬಲ ಬೆಲೆಕ್ಕಿಂತ ಹೆಚ್ಚಿನ ಬೆಲೆ ನೀಡಿ ರೈತರು ಬೆಳೆದ ವಿವಿಧ ಬೆಳೆಗಳನ್ನು ಖರೀದಿ ಮಾಡಬೇಕು. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಜಿಲ್ಲೆಯಾಧ್ಯಂತ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹಸಿರು ಸೇನೆ ಜಿಲ್ಲಾ ಸಂಚಾಲಕ ಮುತ್ತೆಪ್ಪ ಕುರುಬರ ಎಚ್ಚರಿಸಿದರು.
ಸ್ತಳೀಯ ರೈತಮುಖಂಡರಾದ ಹಾಲಪ್ಪ ಖಿಲಾರಿ, ಸುಭಾಷ ಕೋಣಿ, ಬೀರಪ್ಪ ಮಾವಿನ ಗಿಡದ, ಕರೆಪ್ಪ ಚಂದರಗಿ, ರಾಮಣ್ಣ ಕತ್ತಿ, ಮುತ್ತೆಪ್ಪ ವಡೇರ, ಸೇರಿದಂತೆ ಕರ್ನಾಟಕ ರಾಜ್ಯ ಹಸಿರು ಸೇನೆ ಇಲ್ಲಿಯ ಗ್ರಾಮ ಘಟಕದ ಪದಾಧಿಕಾರಿಗಳು, ಸದಸ್ಯರು, ರೈತಮುಖಂಡರು, ರೈತರು ಸ್ಥಳೀಯರು ಇದ್ದರು.