ಬೆಳಗಾವಿ:ಎರಡು ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ: ಗೋಕಾವಿಗೆ ಮೊದಲ ಬಾರಿ ಡಿಸಿಎಂ ಪಟ್ಟ !
ಎರಡು ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ: ಗೋಕಾವಿಗೆ ಮೊದಲ ಬಾರಿ ಡಿಸಿಎಂ ಪಟ್ಟ !
ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಡಿ 9 :
ರಾಜ್ಯದ ಉಪಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ಬಿಜೆಪಿ ರಾಜ್ಯದಲ್ಲಿ ಸರಕಾರ ಸುಭದ್ರಪಡಿಸಿಕೊಂಡಿದ್ದು ಬುಧವಾರ ಅಥವಾ ಗುರುವಾರ ಸಚಿವ ಸಂಪುಟ ವಿಸ್ತರಣೆ ಮಾಡಲು ಬಿಜೆಪಿ ಮಹೂರ್ತ ಫಿಕ್ಸ್ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ
ಸಮ್ಮಿಶ್ರ ಸರಕಾರ ಪತನಗೊಳಿಸಿ ಬಿಜೆಪಿಯಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲವು ಹಾದಿಯಲ್ಲಿ ಇರುವ ಜಿಲ್ಲೆಯ ಮೂವರಿಗೂ ಬಹುತೇಕ ಸಚಿವ ಸ್ಥಾನ ದೊರೆಯಲಿದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ಪತನಗೊಳಿಸಿ ಬಿಜೆಪಿಯಿಂದ ಗೋಕಾಕ ಕ್ಷೇತ್ರದಲ್ಲಿ ಗೆಲವು ಸಾಧಿಸಿರುವ ರಮೇಶ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಜತೆಗೆ ಪ್ರಮುಖ ಖಾತೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ರಾಜಕಾರಣದಲ್ಲಿ ಬೆಳಗಾವಿಯ ಪಾತ್ರ ಮಹತ್ವದ್ದಾಗಿದೆ. ಸರಕಾರ ರಚಿಸುವಲ್ಲಿ ಸರಕಾರ ಕೆಡುವುದರಲ್ಲಿ ಬೆಳಗಾವಿಯೇ ಮಂಚೂಣಿಯಲ್ಲಿರುತ್ತದೆ.
ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಬೆಳಗಾವಿಯಿಂದ ಒಟ್ಟು ಐದು ಸಚಿವ ಸ್ಥಾನ ಲಭಿಸಲಿದೆ ಎಂದು ಹೇಳಿದ್ದರು.
ಗೋಕಾಕ ಮತಕ್ಷೇತ್ರದ ಇತಿಹಾಸದಲ್ಲಿಯೇ ಪ್ರಥಮವಾಗಿ ಡಿಸಿಎಂ ಸ್ಥಾನ ಸಿಗಲಿದ್ದು , ಗೋಕಾಕ ಮತಕ್ಷೇತ್ರ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ