RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ಬಿಜೆಪಿಯ ರಮೇಶ ಜಾರಕಿಹೊಳಿ ಅವರಿಗೆ ಭಾರಿ ಗೆಲವು : ಅಣ್ಣನ ವಿರುದ್ಧ ಮೊದಲ ಪರೀಕ್ಷೆಯಲ್ಲಿ ಫೇಲ್ ಆದ ಲಖನ

ಬೆಳಗಾವಿ:ಬಿಜೆಪಿಯ ರಮೇಶ ಜಾರಕಿಹೊಳಿ ಅವರಿಗೆ ಭಾರಿ ಗೆಲವು : ಅಣ್ಣನ ವಿರುದ್ಧ ಮೊದಲ ಪರೀಕ್ಷೆಯಲ್ಲಿ ಫೇಲ್ ಆದ ಲಖನ 

ಬಿಜೆಪಿಯ ರಮೇಶ ಜಾರಕಿಹೊಳಿ ಅವರಿಗೆ ಭಾರಿ ಗೆಲವು : ಅಣ್ಣನ ವಿರುದ್ಧ ಮೊದಲ ಪರೀಕ್ಷೆಯಲ್ಲಿ ಫೇಲ್ ಆದ ಲಖನ

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಡಿ 9 :

 
ತ್ರೀವ ಕುತೂಹಲ ಕೆರಳಿಸಿದ್ದ ಗೋಕಾಕ ವಿಧಾನ ಸಭೆ ಉಪ ಚುನಾವಣಾ ಕಣಕ್ಕೆ ಸೋಮವಾರ ತೆರೆ ಬಿದಿದ್ದು , ಬಿಜೆಪಿಯ ರಮೇಶ ಜಾರಕಿಹೊಳಿ ಭಾರಿ ಅಂತರದಿಂದ ಗೆಲುವು ಸಾಧಿಸಿ ಸತತ 6 ನೇ ಬಾರಿಗೆ ವಿಧಾನ ಸಭೆ ಪ್ರವೇಶ ಮಾಡಿದ್ದಾರೆ

ರಮೇಶ ಜಾರಕಿಹೊಳಿ ಅವರ ಪ್ರತಿ ಸ್ವರ್ಧಿ ಕಿರಿಯ ಸಹೋದರ ಲಖನ ಜಾರಕಿಹೊಳಿ ಅವರು ತಮ್ಮ ಮೊದಲ ಪರೀಕ್ಷೆಯಲ್ಲಿ ಪೇಲ್ ಆಗಿದ್ದು, ರಮೇಶ ವಿರುದ್ಧ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ
ಲಖನ ಜಾರಕಿಹೊಳಿ ಅವರ ಬೆನ್ನಿಗೆ ನಿಂತು ಸತತ ನಾಲ್ಕು ತಿಂಗಳ ಕಾಲ ಭಾರಿ ಪ್ರಚಾರ ಮಾಡಿದ್ದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ತೀವ್ರ ಮುಖಭಂಗವಾಗಿದ್ದು , ಸತೀಶ ಅವರ ಕಾರ್ಯ ತಂತ್ರ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿಲ್ಲ ಎಂಬುದು ಸಾಬೀತಾಗಿದೆ.

ನಡೆಯಲಿಲ್ಲ ಮಾಸ್ಟರ್ ಮೈಂಡ ಸತೀಶ ಆಟ : ರಾಜಕೀಯ ಮಾಸ್ಟರ ಮೈಂಡ ಅಂತ ಹೇಳಲಾಗುವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಗೇಮ್ ಪ್ಲಾನ್ ಗೋಕಾಕ ಉಪ ಚುನಾವಣೆಯಲ್ಲಿ ನಡೆಯಲಿಲ್ಲ ನೆರೆ ಬಂದಾಗ ನೆರ ಸಂತ್ರಸ್ತರ ಸಹಾಯಕ್ಕೆ ಅಭಯ ಹಸ್ತ ಬಾಚಿದ ಸತೀಶ ಜಾರಕಿಹೊಳಿ ಅವರಿಗೆ ಸಂತ್ರಸ್ತರು ಮನೆಹಾಕಲಿಲ್ಲ , ಕಳೆದ ನಾಲ್ಕು ತಿಂಗಳಿನಿಂದ ಗೋಕಾಕ ಮತಕ್ಷೇತ್ರದ ಸುತ್ತಾಡಿ ರಮೇಶ ಮತ್ತು ಅಳಿಯ ಅಂಬಿರಾವ ಅವರ ವಿರುದ್ಧ ಬಹಿರಂಗವಾಗಿ ಗುಡುಗಿದ್ದ ಸತೀಶ ಜಾರಕಿಹೊಳಿ ಅವರಿಗೆ ಗೋಕಾಕ ಮತದಾರರು ಸೋಪ್ಪು ಹಾಕಿಲ್ಲ. ಸಂಘಟನೆ ಕಡೆಗೆ ಗಮನ ಹರಿಸಿದ ಸತೀಶ ಜಾರಕಿಹೊಳಿ ಅವರು ಸಹೋದರ ವಿರುದ್ಧ ವಾಗ್ದಾಳಿ ನಡೆಸುವದನ್ನೆ ಅಸ್ತ್ರವಾಗಿ ಬಳಸಿಕೊಂಡು ಕ್ಷೇತ್ರದಾದ್ಯಂತ ಬಲಿಷ್ಠವಾದ ಸಂಘಟನೆ ಕಟ್ಟುವಲ್ಲಿ ಎಡವಿದ್ದ ಪರಿಣಾಮವೇ ಉಪ ಚುನಾವಣೆಯಲ್ಲಿ ಬಾರಿ ಸೋಲಿಗೆ ಕಾರಣವಾಯಿತು ಎಂದು ಲೆಕ್ಕ ಹಾಕಲಾಗುತ್ತಿದ್ದೆ .

ಮೊದಲ ಪರೀಕ್ಷೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ ಫೇಲ್ : ಸಹೋದರ ರಮೇಶ ಜಾರಕಿಹೊಳಿ ಅವರ ವಿರುದ್ಧ ಬಹಿರಂಗವಾಗಿ ತೊಡೆತಟ್ಟಿ ಕಾಂಗ್ರೆಸ್ ಪಕ್ಷದಿಂದ ರಮೇಶ ಜಾರಕಿಹೊಳಿ ಅವರ ವಿರುಧ್ಧ ಉಪ ಚುನಾವಣೆಯಲ್ಲಿ ಕಣಕ್ಕೆ ಇಳಿದು ಕೋಶನ ಪೇಪರ ಲಿಕ್ ಮಾಡುವದಿಲ್ಲ ಡಿ 9 ಕ್ಕೆ ಮತದಾರರು ರಮೇಶ ಜಾರಕಿಹೊಳಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳುತ್ತೇಲೆ ಬಂದಿದ್ದ ಲಖನ್ ನಾನು 20 ವರ್ಷಗಳಿಂದ ರ್ಯಾಂಕ ಸ್ಟುಡೆಂಟ್ ಆಗಿದ್ದೇನೆ ಎಂದಿದ್ದರು ಆದರೆ ಉಪ ಚುನಾವಣೆ ಪರೀಕ್ಷೆಯಲ್ಲಿ ಲಖನ್ ಜಾರಕಿಹೊಳಿ ಅವರಿಗೆ ಮನೆ ಹಾಕದ ಮತದಾರರು ಮೊದಲನೇ ಪರೀಕ್ಷೆಯಲ್ಲಿ ಅವರಿಗೆ ಫೇಲ್ ಮಾಡಿ ಸೋಲಿನ ರುಚಿ ಉಣ್ಣಿಸಿದ್ದಾರೆ

ರಮೇಶ ಕೈ ಹಿಡಿದ ಮತದಾರರು : ಕಳೆದ ಐದು ಅವಧಿಗೆ ಗೋಕಾಕ ವಿಧಾನಸಭಾ ಕ್ಷೇತ್ರದ ಶಾಸಕರಾಗಿ, ಸಚಿವರಾಗಿ ಜನರ ಮನ ಗೆದಿದ್ದ ರಮೇಶ ಜಾರಕಿಹೊಳಿ ಅವರಿಗೆ ಮತದಾರ 6 ನೇ ಬಾರಿಗೆ ಕೈ ಹಿಡಿದಿದ್ದು 27892 ಮತಗಳ ಭಾರಿ ಅಂತರದಿಂದ ಗೆಲಿಸಿ ವಿಧಾನಸಭೆಗೆ ಕಳುಹಿಸಿ ಮತ್ತೋಮ್ಮೆ ಸಚಿವರಾಗುವ ಅವಕಾಶವನ್ನು ಕೊಟ್ಟಿದ್ದಾರೆ.
ಅಲ್ಪಸಂಖ್ಯಾತರ, ಹಿಂದುಳಿದ ಮತದಾರರು ರಮೇಶ ಜಾರಕಿಹೊಳಿ ಅವರಿಗೆ ಕೈ ಕೊಡುತ್ತಾರೆ ಎಂಬ ಊಹಾ ಪೋಹಗಳಿಗೆ ಡಿ 9 ರ ಮತ ಎಣಿಕೆ ತೆಲೆ ಕೆಳಗಾಗಿಸಿದ್ದು ರಮೇಶ ಜಾರಕಿಹೊಳಿ ಅವರಿಗೆ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಮತದಾರರು ಸಹ ಮತ ನೀಡಿ ಮತ್ತೋಮ್ಮೆ ತಮ್ಮ ಸೇವೆ ಮಾಡಲು ಅನುವು ಮಾಡಿ ಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು
ಒಟ್ಟಾರೆ ಸಹೋದರರ ವಾಕ್ ಸಮರದಿಂದ ಇಡೀ ರಾಜ್ಯ ಮತ್ತು ದೇಶದ ಗಮನ ಸೆಳೆದಿದ್ದ ಗೋಕಾಕ ವಿಧಾನಸಭಾ ಉಪ ಚುನಾವಣೆಯಲ್ಲಿ ಕ್ಷೇತ್ರದ ಜನರು ಮತ್ತೋಮ್ಮೆ ರಮೇಶ್ ಜಾಯಕಿಹೊಳಿ ಅವರ ಕೈ ಹಿಡಿದಿದ್ದು ಕಿರಿಯ ಸಹೋದರ ಲಖನ ಜಾರಕಿಹೊಳಿ ಅವರಿಗೆ ಸೋಲಿನ ರುಚಿ ಉಣಿಸಿದ್ದಾರೆ .

Related posts: