ಬೆಳಗಾವಿ:ನಗರಸಭೆ ಭ್ರಷ್ಟಾಚಾರದ ಬಗ್ಗೆ ತನಿಖೆಗೆ ಠರಾವ ಮಾಡಿ ಸರಕಾರಕ್ಕೆ ಕಳಿಸುತ್ತೇವೆ : ಶಾಸಕ ರಮೇಶ ಜಾರಕಿಹೊಳಿ
ನಗರಸಭೆ ಭ್ರಷ್ಟಾಚಾರದ ಬಗ್ಗೆ ತನಿಖೆಗೆ ಠರಾವ ಮಾಡಿ ಸರಕಾರಕ್ಕೆ ಕಳಿಸುತ್ತೇವೆ : ಶಾಸಕ ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 10 :
ಗೋಕಾಕ ನಗರಸಭೆಯಲ್ಲಿ ಆದ ಭ್ರಷ್ಟಾಚಾರದ ತನಿಖೆ ಠರಾವ ಮಾಡಿ ಸರಕಾರಕ್ಕೆ ಕಳುಹಿಸುತ್ತೇವೆ ಎಂದು ನೂತನ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದರು
ಮಂಗಳವಾರದಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸತೀಶ ಮತ್ತು ಲಖನ್ ಗೋಕಾಕ ನಗರಸಭೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುತ್ತಿದ್ದಾರೆ ಆದರೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಾದ ನಂತರ ಮೊದಲನೇಯ ಸಭೆಯಲ್ಲಿಯೇ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡುವಂತೆ ಠರಾವ ಮಾಡಿ ಸರಕಾರಕ್ಕೆ ಕಳುಹಿಸಿ ತನಿಖೆ ಮಾಡಿಸುತ್ತೇವೆ. ಈ ಬಾರಿ ಉಪ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದವರು ಜಿಲ್ಲೆಯ ಮೂರು ಜನರಿಗೆ ಆರ್ಶಿವಾದ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮುಸ್ಲಿಂ, ಎಸ್‌ಸಿ,ಎಸ್.ಟಿ ಸಮುದಾಯದ ಜನರ ಮನ ಒಲಿಸಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವಂತೆ ಪ್ರಯತ್ನಿಸಲಾಗುವದು ಎಂದು ರಮೇಶ ಜಾರಕಿಹೊಳಿ ಹೇಳಿದರಲ್ಲದೆ . ಬಿಎಂಟಿ ನಾಗರಾಜ ಮತ್ತು ಎಸ್.ವಿಶ್ವನಾಥ್ ಅವರ ತ್ಯಾಗವೂ ಸಹ ಬಹಳಿದೆ ಅವರಿಗೂ ಸಹ ಉತ್ತಮ ಸ್ಥಾನ ಮಾನ ನೀಡಲು ಮುಖ್ಯಮಂತ್ರಿ ಅವರು ಬದ್ದರಾಗಿದ್ದಾರೆ ಇಂದು ರಾತ್ರಿ ಎಲ್ಲರೂ ಸಹ ಬೆಂಗಳೂರಿನಲ್ಲಿ ಭೇಟಿಯಾಗುವವರಿದ್ದೇವೆ ಎಲ್ಲರೂ ಸೇರಿ ಚರ್ಚಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ಅವರನ್ನು ಬೇಟಿಯಾಗಿ ಚರ್ಚೆ ನಡೆಸುತ್ತೇವೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು