ಖಮಖಂಡಿ:ಕಿಲಿ ಹಾಕಿದ ಮನೆ ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯ ಕಳ್ಳನ ಬಂಧನ : ಜಮಖಂಡಿಯಲ್ಲಿ ಘಟನೆ
ಕಿಲಿ ಹಾಕಿದ ಮನೆ ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯ ಕಳ್ಳನ ಬಂಧನ : ಜಮಖಂಡಿಯಲ್ಲಿ ಘಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಜಮಖಂಡಿ ಡಿ 10:
ರಾತ್ರಿ ವೇಳೆಯಲ್ಲಿ ಕಿಲಿ ಹಾಕಿದ ಮನೆಗಳನ್ನು , ದೇವಸ್ಥಾನಗಳ ಕಿಲಿ ಮುರಿದು ಹಣ,ಬಂಗಾರ ಮತ್ತು ಬೆಳ್ಳಿಯನ್ನು ಕಳುವು ಮಾಡುತ್ತಿದ ಅಂತರ ರಾಜ್ಯ ಕಳ್ಳನನ್ನು ಬಂಧಿಸಿರುವ ಘಟನೆ ಜರುಗಿದೆ
ಜಮಖಂಡಿ ನಗರದಲ್ಲಿ ಮಂಗಳವಾರದಂದು ಮುಂಜಾನೆ ಗಸ್ತು ತಿರುಗುವಾಗ ಕಳ್ಳವು ಮಾಡಿದ ಆರೋಪಿ ಲೋಕೇಶ ಸುತಾರ ಸಾ. ಲಿಂಗಸೂರ ತಾ.ಮಿರಜ ಇತನನ್ನು ಜಮಖಂಡಿ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಎಸ್.ಪಿ ಲೋಕೇಶ ಜಗಲಾಸರ , ಡಿಎಸಪಿ ಆರ್.ಕೆ ಪಾಟೀಲ ಅವರ ಮಾರ್ಗದರ್ಶನದಲ್ಲಿ ಜಮಖಂಡಿ ಸಿಪಿಐ ಡಿ.ಕೆ ಪಾಟೀಲ ಮತ್ತು ಪಿಎಸ್ಐ ಅನಿಲಕುಮಾರ ರಾಠೋಡ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.
ಬಂಧಿತ ಆರೋಪಿವು ಒಟ್ಟು 10 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು , ಬಂಧಿತನಿಂದ ಸುಮಾರು 501 ಗ್ರಾಮ ಬಂಗಾರದ ಆಭರಣ, 690 ಗ್ರಾಮ ಬೆಳ್ಳಿಯ ಆಭರಣ,ಒಂದು ಕಾರು ,ಒಂದು ಬೈಕ್ ಮತ್ತು ಒಟ್ಟು 23,31,300 ರೂಗಳ ಬೆಳೆಬಾಳುವ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ
ಕಾರ್ಯಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಗಳಾದ ಬಾಹುಬಲಿ ಕುಸನಾಳ, ಗಣಪತಿ ಎಮ್.ಎಸ್. ಶಿಗುಣಸಿ , ಮೋಕಾಶಿ ,ವಿ.ವಿ ಕೋಲಂಬಿ,ಪಿ.ಐ.ಕಾಜಗಾರ,ಸಿದ್ದು ಹನಗಂಡಿ,ಉಮೇಶ ಛಲವಾದಿ,ಸಂಗಮೇಶ ತುಪ್ಪದ, ಐ.ಜಿ. ದಾಶ್ಯಾಳ, ಎಂ.ಡಿ.ಕಡೋಳ್ಳಿ ಹಾಗೂ ಚಿಪ ಚಾಲಕರಾದ ಶಂಕರ ಮೂಲಿಮನಿ,ಚಿಪ್ಪಲಕಟ್ಟ ಅವರ ಕಾರ್ಯವನ್ನು ಪ್ರಶಂಸಿಸಿರುವ ಬಾಗಲಕೋಟೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅವರು ಇವರಿಗೆ ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.
ಈ ಕುರಿತು ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ