ಗೋಕಾಕ:ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿಸಿ ದೇಶಕ್ಕೆ ಕೊಡುಗೆಯಾಗಿ ನೀಡುವ ಶಕ್ತಿ ತಾಯಂದಿರಲ್ಲಿ ಮಾತ್ರ ಇದೆ : ಎಲ್.ಟಿ.ತಪಸಿ
ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿಸಿ ದೇಶಕ್ಕೆ ಕೊಡುಗೆಯಾಗಿ ನೀಡುವ ಶಕ್ತಿ ತಾಯಂದಿರಲ್ಲಿ ಮಾತ್ರ ಇದೆ : ಎಲ್.ಟಿ.ತಪಸಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 11 :
ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿಸಿ ದೇಶಕ್ಕೆ ಕೊಡುಗೆಯಾಗಿ ನೀಡುವ ಶಕ್ತಿ ತಾಯಂದಿರಲ್ಲಿ ಮಾತ್ರ ಇದೆ ಎಂದು ಇಲ್ಲಿಯ ವಿದ್ಯಾನಿಕೇತನ ಶಾಲೆಯ ಅಧ್ಯಕ್ಷ ಎಲ್.ಟಿ.ತಪಸಿ ಹೇಳಿದರು.
ಬುಧವಾರದಂದು ನಗರದ ವಿದ್ಯಾನಿಕೇತನ ಶಾಲೆಯಲ್ಲಿ ಹಮ್ಮಿಕೊಂಡ ತಾಯಂದಿರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಮಕ್ಕಳ ಪಾಲನೆ, ಪೋಷಣೆಯೊಂದಿಗೆ ಶಿಕ್ಷಣ ಹಾಗೂ ಸಂಸ್ಕಾರ ನೀಡುತ್ತಾ ತಮ್ಮ ಇನ್ನೂಳಿದ ಕೆಲಸ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ ಸಹಾನಾಮೂರ್ತಿಗಳಾಗಿದ್ದಾರೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಲ್ಲಿಯ ಎಸ್‍ಎಸ್‍ಎ ಕಾಲೇಜಿನ ಪ್ರೊ. ವಿದ್ಯಾ ರೆಡ್ಡಿ ಮಾತನಾಡುತ್ತಾ, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ಮಹತ್ವದಾಗಿದೆ. ತಾಯಂದಿರು ಧಾರಾವಾಹಿಗಳಿಂದ ದೂರವಿದ್ದು, ಮಕ್ಕಳ ಶಿಕ್ಷಣದತ್ತ ಹೆಚ್ಚು ಗಮನ ಹರಿಸಬೇಕು. ಅತಿಯಾದ ಮುದ್ದುಗಿಂತ ಅವರಿಗೆ ಬದುಕುವ ಕಲೆಯನ್ನು ಕಲಿಸುವಂತೆ ಹೇಳಿದರು.
ವೇದಿಕೆ ಮೇಲೆ ಸಂಸ್ಥೆಯ ನಿರ್ದೇಶಕ ಸುರೇಶ ಜಾಧವ, ಮುಖ್ಯೋಪಾಧ್ಯಾಯಿನಿ ರೇಖಾ ಗಾಣಿಗೇರ, ಚುಟುಕು ಸಾಹಿತಿ ಸುರೇಖಾ ತೋಳಿ, ಪಾಲಕರ ಪ್ರತಿನಿಧಿಗಳಾದ ಸುನೀತಾ ಹಳದೋಡಿ, ಸಾವಿತ್ರಿ ಸಂಪಗಾಂವಿ, ನೇತ್ರಾ ಸತ್ತಿಗೇರಿ ಇದ್ದರು. ಶಿಕ್ಷಕಿ ಸೀಮಾ ಹಳಕಟ್ಟಿ ಸ್ವಾಗತಿಸಿ, ವಂದಿಸಿದರು.