ಮೂಡಲಗಿ:ದೇಶದಲ್ಲಿ ಕೃಷಿಯ ನಂತರ ಮತ್ತೊಂದು ಉತ್ಪಾದನೆಯ ಮಹಾ ಪರ್ವವೆಂದರೆ ಮಿನುಗಾರಿಕೆ ಉತ್ಪಾದನೆಯವಾಗಿದೆ
ದೇಶದಲ್ಲಿ ಕೃಷಿಯ ನಂತರ ಮತ್ತೊಂದು ಉತ್ಪಾದನೆಯ ಮಹಾ ಪರ್ವವೆಂದರೆ ಮಿನುಗಾರಿಕೆ ಉತ್ಪಾದನೆಯವಾಗಿದೆ
ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಡಿ 11 :
ದೇಶದಲ್ಲಿ ಕೃಷಿಯ ನಂತರ ಮತ್ತೊಂದು ಉತ್ಪಾದನೆಯ ಮಹಾ ಪರ್ವವೆಂದರೆ ಮಿನುಗಾರಿಕೆ ಉತ್ಪಾದನೆಯವಾಗಿದೆ, ಮಕ್ಕಳ ಬೆಳವಣಿಗೆಯಲ್ಲಿ ಮೀನಿ ಖ್ಯಾಧ್ಯ ಬಹು ಉಪಕಾರಿಯಾಗಿರುವದರಿಂದ ಇಂದು ಮೀನಿ ಬೇಡಿಕೆ ಹೆಚ್ಚಾದ ಕಾರಣ ಮೀನುಗಾರು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಕೊಚ್ಚಿನ್ ಕೇಂದ್ರೀಯ ಮೀನುಗಾರಿಕೆ ತಂತ್ರಜ್ಞಾನಗಳ ಸಂಸ್ಥೆಯ ಮುಂಬೈ ಶಾಖೆಯ ಪ್ರಧಾನ ವಿಜ್ಞಾನಿ ಡಾ. ಎಲ್. ನರಸಿಂಹ ಮೂರ್ತಿ ಹೇಳಿದರು.
ಅವರು ಬುಧವಾರದಂದು ತುಕ್ಕಾನಟ್ಟಿ ಐಸಿಏಆರ್-ಬಡ್ರ್ಸ ಕೃಷಿ ವಿಜ್ಞಾನಕೇಂದ್ರ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮತ್ತು ಕೊಚ್ಚಿನ್ ಕೇಂದ್ರೀಯ ಮೀನುಗಾರಿಕೆ ತಂತ್ರಜ್ಞಾನಗಳ ಸಂಸ್ಥೆ ಮುಂಬೈ ಶಾಖೆಯ ಹಾಗೂ ಬೆಳಗಾವಿ ಮೀನುಗಾರಿಕೆ ಇಲಾಖೆಯ ಆಶ್ರಯದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಪ್ರವಾಹ ಪೀಡಿತ ಪರಿಶಿಷ್ಟ ಜಾತಿ ಮೀನುಗಾರರಿಗೆ ಜೀವನಾಧಾರಕ್ಕಾಗಿ ನೆರವಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಐದು ಕೋಟಿ ಜನರು ಮೀನುಗಾರಿಕೆಯಲ್ಲಿ ತೊಡಗಿದ್ದಾರೆ, ಪ್ರತಿ ವರ್ಷ ಐದು ಲಕ್ಷ ಕೋಟಿ ವ್ಯವಹಾರ ಹೊಂದಿ, 1.14 ಲಕ್ಷ ಕೋಟಿ ಟಂನ್ ಮೀನು ಉತ್ಪಾದನೆಯಾದರೆ ಅದರಲ್ಲಿ 10 ಲಕ್ಷ ಟಂನ್ ಮೀನು ವಿದೇಶಕ್ಕೆ ರಫ್ತು ಆಗಿ ಉಳಿದಿದು ದೇಶದಲ್ಲಿ ಆಹಾರವಾಗುತ್ತಿದೆ ಎಂದರು.
ಮೀನನಲ್ಲಿ ಕೆವಲ್ಲ ಎರಡು ತರನಾದ ಅಡಿಗೆ ತಯಾರಿಸುತ್ತಿರುವರು ಈಗ 10-15 ತೇರನಾದ ಆಹಾರ ಖ್ಯಾದಗಳನ್ನು ತಯಾರಿಸಬುಹುದು, ಮೀನಿನ ಖ್ಯಾದಗಳಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದ್ದೆ ಎಂದವರು ಈ ಕಾರ್ಯಗಾರದಲ್ಲಿ ತಮ್ಮಗೆ ತಿಳಿಯದನ್ನು ನೇರವಾಗಿ ಪ್ರಶ್ನಿಸಿ ತಿಳಿದುಕೊಂಡರೆ ತಮ್ಮಗೆ ಮೀನುಗಾರಿಕೆ ಬೇಕಾದ ಸಲಕರಣೆಗಳನ್ನು ಇಲಾಖೆಯಿಂದ ನಿಜವಾದ ಫಲಾನುಬಹುವಿಗಳಿಗೆ ತಲುಪಿಸಲ್ಲಿಕೆ ಪ್ರಾಮಾಣಿಕ ಪ್ರಯತ್ನ ಮಾಡಲ್ಲಾಗುವುದು ಎಂದರು.
ವಿಜಯಪೂರ ಮೀನುಗಾರಿಕೆ ಸಂಶೋಧನಾ ಕೇಂದ್ರ ಮುಖ್ಯಸ್ಥ ಡಾ. ವಿಜಯಕುಮಾರ್ ಮಾತನಾಡಿ, ಮೀನು ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಭಾರತ ಎರಡನೇ ಸ್ಥಾನದಲ್ಲಿದರೆ ಕರ್ನಾಟಕ 10 ನೇ ಸ್ಥಾನದಲ್ಲಿದು, ಒಳನಾಡಿನಲ್ಲಿ ಮೀನುಗಾರಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದು, ಆಹಾರಕ್ಕಾ ಬಳಸುವ ಜೀವಂತ ಮೀನಿಗೆ 280 ರಿಂದ 350 ರೂ ಒಂದು ಕೆಜಿಗೆ ಇದೆ ಎಂದರು. ವಿಜಾಪೂರ ಜಿಲ್ಲೆಯಲ್ಲಿ ಕೃಷಿ ಹೊಂಡದಲ್ಲಿ 15 ಸಾವಿರ ಟನ್ ಮೀನು ಉತ್ಪಾದನೆಯಾಗುತ್ತಿದು. ಮೀನುಗಾರಿಕೆಯಲ್ಲಿ ವೈಜಾನಿಕವಾಗಿ ಬೆಳೆಸಿದ್ದರೆ 7-8 ತಿಂಗಳಲ್ಲಿ ಒಳ್ಳೆಯ ಆದಾಯ ಪಡೆಯಬಹುದು ಎಂದರು.
ಬೆಳಗಾವಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಪಾದ ಕಲಕರ್ಣಿ ಮಾತನಾಡಿ,ಕೇಂದ್ರ ಸರಕಾರದ ನೀಲಿ ಕಾಂತ್ರಿ ಯೋಜನೆಯಲ್ಲಿ ಮೀನುಗಾರರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದು, ಒಂದು ಹೆಕ್ಟೇರ ಪ್ರದೇಶದಲ್ಲಿ ಹತ್ತು ಸಾವಿರ ಮೀನು ಕೃಷಿ ಮಾಡುವದಕ್ಕೆ ಯಾವುದೆ ತೋಂದರೆ ಇಲ್ಲ, ರೈತರು ಕೃಷಿ ಹೊಂಡದಲ್ಲಿ ಮೀನುಗಾರಿಕೆ ಮಾಡುವರಿಗೆ ಇಲಾಖೆ ಮಾಹಿತಿ ನೀಡಲಾಗುವುದು ಎಂದರು. ಖಾಸಗಿ ವಲಯದಲ್ಲಿ ಮೀನು ಮರಿಗಳ ಉತ್ಪಾದನಾ ಘಟಕಗಳು ಆರಂಭಿಸಲ್ಲು ಮುಂದೆ ಬರಬೇಕೆಂದರು.
ಅಧ್ಯಕ್ಷತೆ ವಹಿಸಿದ ಬಡ್ರ್ಸ ಕೃಷಿ ವಿಜ್ಞಾನಕೇಂದ್ರ ಚೇರಮನ್ ಆರ್.ಎಂ.ಪಾಟೀಲ್ ಮಾತನಾ, ಜಿಲ್ಲೆಯಲ್ಲಿ ಪ್ರವಾಹ ಪೀಡಿತದಿಂದ ಬಳಲುತ್ತಿರು ಮಿನುಗಾರರಿಗೆ ಅನೂಕೂಲವಾಗಲೆಂದು ಈ ಕಾರ್ಯಾಗಾರವನ್ನು ಏರ್ಪಡಿಸಿದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸಮಾರಂಭದಲ್ಲಿ ಮೀನುಗಾರಿಕೆ ಇಲಾಖೆಯ ಜಿಲ್ಲೆಯ ತಾಲೂಕಾ ಸಹಾಯಕ ನಿರ್ಧೇಶಕರಾದ ಸಂಜೀವ ಅರಕೇರಿ, (ಚಿಕ್ಕೋಡಿ-ಅಥಣಿ), ಶ್ರೀನಿವಾಸ್(ರಾಯಬಾಗ), ಸಿದ್ಧಪ್ಪ ಕುರಗಹಳ್ಳಿ(ಬೈಲಹೊಂಗಲ) ಮಾತನಾಡಿದರು.
ಇದೇ ಸಂಧರ್ಭದಲ್ಲಿ ಬಡ್ರ್ಸ ಕೃಷಿ ವಿಜ್ಞಾನಕೇಂದ್ರ ಮೀನುಗಾರಿಕೆ ವಿಜ್ಞಾನಿ ಆದರ್ಶ ಹೆಚ್ ಅವರು ಬೆಳಗಾವಿ ಜಿಲ್ಲಿಯಲ್ಲಿ ಮೀನುಗಾರಿಕೆ ಅಭಿವೃದಿಗಾಗಿ ಶ್ರಮಿಸುತ್ತಿರುವ ಬಡ್ರ್ಸ ಕೃಷಿ ವಿಜ್ಞಾನಕೇಂದ್ರ ಕಾರ್ಯಗಳನ್ನು ಮತ್ತು ಮೀನುಗಾರಿಕೆ ಉತ್ಪಾದನಾ ಸ್ಥಳಗಳನ್ನು ಹಾಗೂ ಮುಂದೆ ಕೈಗೋಳ ಬಹುದಾದ ಕಾರ್ಯಗಳ ಬಗ್ಗೆ ತಾಯಾರಿಸಿದ ಸಾಕ್ಷ ಚಿತ್ರದ ಸಿಡಿಯನ್ನು ಅಧಿಕಾರಿಗಳು ಬಿಡುಗಡೆ ಮಾಡಿದರು
ಬಡ್ರ್ಸ ಕೃಷಿ ವಿಜ್ಞಾನಕೇಂದ್ರ ಹಿರಿಯ ವಿಜ್ಞಾನಿ ಡಿ.ಸಿ.ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೆವ್ಹಿಕೆ ಮೀನುಗಾರಿಕೆ ವಿಜ್ಞಾನಿ ಆದರ್ಶ.ಹೆಚ್ ನಿರೂಪಿಸಿದರು. ಎನ್.ಆರ್.ಸಾಲಿಮಠ ವಂದಿಸಿದರು.