ಗೋಕಾಕ:ಅಪ್ರಾಪ್ತ ಬಾಲಕಿಯೋರ್ವಳು ನೇಣು ಹಾಕಿಕೊಂಡು ಆತ್ಮಹತ್ಯೆ : ಗೋಕಾಕದಲ್ಲಿ ಘಟನೆ
ಅಪ್ರಾಪ್ತ ಬಾಲಕಿಯೋರ್ವಳು ನೇಣು ಹಾಕಿಕೊಂಡು ಆತ್ಮಹತ್ಯೆ : ಗೋಕಾಕದಲ್ಲಿ ಘಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ.11-
ಮನೆಯಲ್ಲಿ ಬುದ್ಧಿವಾದ ಹೇಳಿದಕ್ಕೆ ಮಾನಸಿಕ ಮಾಡಿಕೊಂಡ ಅಪ್ರಾಪ್ತ ಬಾಲಕಿಯೋರ್ವಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರದಂದು ಸಂಜೆ ನಗರದಲ್ಲಿ ಜರುಗಿದೆ.
ಇಲ್ಲಿಯ ಬಾಂಬೆ ಚಾಳ ನಿವಾಸಿ ರೇಣುಕಾ ನಂದೀಶ ಉಪನಾಳ (17) ಎಂಬ ಅಪ್ರಾಪ್ತೆ ಬಾಲಕಿ ಟಿ.ವಿ. ನೋಡಬೇಡ ಎಂದು ತಂದೆ-ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮಾನಸಿಕ ಮಾಡಿಕೊಂಡು ಮನೆಯ ಬೆಡ್ ರೂಮಿನಲ್ಲಿ ಸ್ಲ್ಯಾಬ್‍ದ ಹುಕ್‍ಗೆ ಸೀರೆಯಿಂದ ಕಟ್ಟಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ಬಾಲಕಿಯ ತಂದೆ ನಗರ ಠಾಣೆ ಪೋಲೀಸರಿಗೆ ದೂರು ನೀಡಿದ್ದು ಪೋಲೀಸರು ದೂರು ದಾಖಲಿಸಿಕೊಂಡಿದ್ದಾರೆ.