ಮೂಡಲಗಿ:ಸರಕಾರಿ ಶಾಲೆಗಳ ಅಳಿವು ಉಳಿವಿಗಾಗಿ ಶಿಕ್ಷಕರ ಪಾಲಕರ ಎಸ್.ಡಿ.ಎಮ್.ಸಿ ಹಾಗೂ ಜನ ಪ್ರತಿನಿಧಿಗಳ ಸಹಕಾರದ ಪಾತ್ರ ಅಮೂಲ್ಯವಾಗಿದೆ
ಸರಕಾರಿ ಶಾಲೆಗಳ ಅಳಿವು ಉಳಿವಿಗಾಗಿ ಶಿಕ್ಷಕರ ಪಾಲಕರ ಎಸ್.ಡಿ.ಎಮ್.ಸಿ ಹಾಗೂ ಜನ ಪ್ರತಿನಿಧಿಗಳ ಸಹಕಾರದ ಪಾತ್ರ ಅಮೂಲ್ಯವಾಗಿದೆ
ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಡಿ 13 :
ಇಂದಿನ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ನಗರ ಪ್ರದೇಶಗಳಲ್ಲಿ ಸರಕಾರಿ ಶಾಲೆಗಳ ಅಳಿವು ಉಳಿವಿಗಾಗಿ ಶಿಕ್ಷಕರ ಪಾಲಕರ ಎಸ್.ಡಿ.ಎಮ್.ಸಿ ಹಾಗೂ ಜನ ಪ್ರತಿನಿಧಿಗಳ ಸಹಕಾರದ ಪಾತ್ರ ಅಮೂಲ್ಯವಾಗಿದೆ ಎಂದು ಮೂಡಲಗಿ ಸಿ.ಆರ್.ಪಿ ಕೆ ಎಲ್ ಮೀಶಿ ಹೇಳಿದರು.
ಇಂದು ಆಕಸ್ಮೀಕವಾಗಿ ನಗರದ ತಳವಾರ ತೋಟದ ಶಾಲೆಯಲ್ಲಿ ಜರುಗಿದ ಸರಕಾರಿ ಶಾಲಾ ಮಕ್ಕಳಿಗೆ ಪುರಿ ಪುಳಿಯೋಗರೆ ವಿಶೇಷ ಭೋಜನಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರಕ್ಕೆ ಹೊಂದಿಕೊಂಡು ತೋಟ ಪಟ್ಟಿಯಲ್ಲಿದ್ದರು ಸುಂದರ ತಾಣದ ರೂಪದಲ್ಲಿ ಕಾಣುತ್ತಿರುವ ಶಾಲೆ ನೀಜಕ್ಕೂ ಮಾದರಿಯದಾಗಿದೆ. ಶಾಲೆಯಲ್ಲಿಯ ಮಕ್ಕಳ ಕಲಿಕೆ, ಪೂರಕ ವಾತಾವರಣ, ಪರಿಸರ ಪ್ರೇಮತ್ವ ಮೆಚ್ಚುಗೆ ನೀಡುವಂತಿದೆ. ಪ್ರಸಕ್ತ ವರ್ಷ ಈ ಶಾಲೆಯಲ್ಲಿ 2 ಸಲ ಇಂಡ್ಲಿ, ಜಪಾತಿ, ಸೀರಾ, ಹಾಲುಗ್ಗಿಯಂತಹ ಪೌಷ್ಠಿಕಾಂಶಯುಳ್ಳ ಆಹಾರಗಳನ್ನು ಸ್ವತಃ ಹಾಗೂ ಶಿಕ್ಷಣ ಪ್ರೇಮಿಗಳಿಂದ ಪಡೆದು ನೀಡಿರುವದು ಪ್ರಶಂಸಾರ್ಹವಾಗಿದೆ. ಈ ಶಾಲೆಯ ಪ್ರಧಾನ ಗುರುಮಾತೆ ಆರ್ ಬಿ ಶೆಕ್ಕಿಯವರಿಗೆ ರಾಜ್ಯ ಮಟ್ಟದ ಉತ್ತಮ ನಲಿ ಕಲಿ ಶಿಕ್ಷಕಿ ಪ್ರಶಸ್ತಿ ದೊರೆತಿರುವದು ದುಡಿಮೆಗೆ ತಕ್ಕ ಫಲ ಸಿಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಮದ್ಯಾಹ್ನ ಉಪಹಾರ ಯೋಜನೆಯಡಿ ಶಾಲೆಯ 60 ಮಕ್ಕಳಿಗೆ ಪುರಿ, ಪುಳಿಯೋಗರೆಯನ್ನು ನೀಡಿದರು.ಈ ಸಂದರ್ಭದಲ್ಲಿ ಪ್ರಧಾನ ಗುರುಮಾತೆ ಆರ್.ಬಿ ಶೆಕ್ಕಿ, ಎಸ್.ಎನ್ ದಬಾಡಿ, ಜಯಶ್ರೀ ಕಾಗಲಿ, ಕೆಂಪಣ್ಣ ಮಾವನೂರಿ, ಪಮ್ಮವ್ವ ತಳವಾರ, ಮಹಾದೇವಿ ಕುರಬಟ್ಟಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.