ಕಲಾದಗಿ:ವಿಜಂಭ್ರನೆಯಿಂದ ನಡೆದ ಅನಾಥ ನಿರ್ಗತಿಕ ಹೆಣ್ಣು ಮಕ್ಕಳ ವಿವಾಹ ಸಮಾರಂಭ
ವಿಜಂಭ್ರನೆಯಿಂದ ನಡೆದ ಅನಾಥ ನಿರ್ಗತಿಕ ಹೆಣ್ಣು ಮಕ್ಕಳ ವಿವಾಹ ಸಮಾರಂಭ
ನಮ್ಮ ಬೆಳಗಾವಿ ಇ – ವಾರ್ತೆ , ಕಲಾದಗಿ ಡಿ 15
ಮಂಗಳೂರಿನ ಸುನ್ನಿ ಸ್ಟುಡೆಂಟ್ ಫೆಡರೇಷನ್ (ಎಸ್.ಎಸ್.ಎಫ್ ) ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ಕರ್ನಾಟಕ ಕಲ್ಚರಲ್ ಫೌಂಡೇಶನ್ ( ಕೆ.ಎಫ್.ಸಿ) ಒಮಾನ ಸಂಘಟನೆಯ ಸಹಕಾರದೊಂದಿಗೆ ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ಅನಾಥ- ನಿರ್ಗತಿಕ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮ ಅತ್ಯಂತ ವಿಜಂಭ್ರನೆಯಿಂದ ಜರುಗಿತ್ತು
ರವಿವಾರದಂದು ಕಲಾದಗಿ ಗ್ರಾಮದ ಶಾದಿ ಮಹಲದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಕಲಾದಗಿ ಗ್ರಾಮದ ಸಿಮ್ರನ್ ಅಕ್ಕರಸಾಬ ಜಿರಾಯಿತಿ ವದು ಹುಬ್ಬಳ್ಳಿಯ ಮುಬಾರಕ ಇಬ್ರಾಹಿಂಸಾಬ ಜಮಾದಾರ ಮತ್ತು ನಾಜಮಿನ ವಧು ಬಾಗಲಕೋಟೆಯ ಅಬ್ದುಲ್ ನಜಿರ ಎಂಬುವವರ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಈ ಅವಿಸ್ಮರಣೀಯ ಕ್ಷಣವನ್ನು ಕಣ್ಣತುಂಬಿ ಕೊಂಡ ಸಾವಿರಾರು ಜನರು ಈ ಅಪರೂಪದ ವಿವಾಹವನ್ನು ಸಾಕ್ಷೀಕರಿಸಿದರು.
ಕಳೆದ ಸೆಪ್ಟೆಂಬರ್ ನಲ್ಲಿ ಬಂದೆರಗಿದ ಮಹಾ ಜಲಪ್ರವಾಹಕ್ಕೆ ಉತ್ತರ ಕರ್ನಾಟಕದ ಬಹುಭಾಗಗಳು ತತ್ತರಿಸಿ ಸಾವಿರಾರು ಕುಟುಂಬಗಳು ಮನೆ, ಮಠ, ಆಸ್ತಿ ಪಾಸ್ಥಿಗಳನ್ನು ಕಳೆದುಕೊಂಡು ಕಂಗಾಲಾಗಿದ್ದರು ಅಂತಹ ಹೊಡೆತಕ್ಕೆ ತತ್ತರಿಸಿ ಮನೆಗಳನ್ನು ಕಳೆದುಕೊಂಡ ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ಈ ಎರೆಡು ಕುಟುಂಬಗಳು ತಮ್ಮ ಮಕ್ಕಳ ಮದುವೆ ನೆರೆವೆರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಆಗ ಮಂಗಳೂರಿನ ಎಸ್ಎಸ್ಎಫ್ ಸಂಘಟನೆಯ ಕಣ್ಣಿಗೆ ಬಿದ್ದ ಈ ಎರೆಡು ಕುಟುಂಬಗಳ ಪರಿಸ್ಥಿತಿಯನ್ನು ಅವಲೋಕಿಸಿದ ಈ ಸಂಘಟನೆ ತಕ್ಷಣದಲ್ಲಿ ಕಾರ್ಯ ಪ್ರವೃತ್ತರಾಗಿ ಎಲ್ಲವನ್ನು ಕಳೆದುಕೊಂಡು ಅನಾಥವಾಗಿ ಬಿಟ್ಟ ಈ ಇಬ್ಬರೂ ಹೆಣ್ಣು ಮಕ್ಕಳ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಡಿಸೆಂಬರ್ 15 ರಂದು ಅತ್ಯಂತ ವಿಜಂಭ್ರನೆಯಿಂದ ಮದುವೆ ಸಮಾರಂಭವನ್ನು ನೇರವೆರಿಸಿ ಮಾತೃತ್ವವನ್ನು ತೋರಿ ನೊಂದವರ ಬೆನ್ನಿಗೆ ನಾವಿದ್ದೆವೆ ಎಂದು ಸಾಬೀತು ಪಡೆಸಿ ನುಡಿದಂತೆ ನಡೆದಿದೆ. ಮಾತ್ರವಲ್ಲ ಈ ಇಬ್ಬರೂ ಹೆಣ್ಣು ಮಕ್ಕಳಿಗೆ ಬಂಗಾರದ ಒಡುವೆ, ಬಟ್ಟೆ , ಪಾತ್ರೆ ಸೇರಿದಂತೆ ಎಲ್ಲ ರೀತಿಯ ಗೃಹಬಳಕೆ ಸಾಮಾಗ್ರಿಗಳನ್ನು ನೀಡಿ ಮದುವೆಗೆ ಬಂದ ಸಾವಿರಾರು ಜನರಿಗೆ ಔತಣಕೂಟವನ್ನು ಏರ್ಪಡಿಸಿ ಮಾನವಿಯತೆಯನ್ನು ಮೆರೆದಿದ್ದಾರೆ
ವಿವಾಹ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಮುಸ್ಲಿಂ ಜಮಾತನ ಉಪಾಧ್ಯಕ್ಷ ಮೌಲಾನ ಅಬು ಸುಪೀಯಾನ ಮದನಿ ವಿವಾಹ ಎಂಬುವದು ಒಂದು ಪವಿತ್ರ ಒಪ್ಪಂದವಾಗಿದ್ದು, ಎಸ್ಎಸ್ಎಫ್ ಮುಖೇನ ಈ ಪವಿತ್ರವಾದ ಕಾರ್ಯ ಯಶಸ್ವಿಯಾಗಿದ್ದು ತುಂಬಾ ಸಂತೋಷ ತಂದಿದೆ. ಸಮಾಜಿಕವಾಗಿ , ಶೈಕ್ಷಣಿಕವಾಗಿ ಸಮಾಜವನ್ನು ಗಟ್ಟಗೋಳಿಸುವ ಜವಾಬ್ದಾರಿ ಪ್ರತಿಯೋಬ್ಬರ ಮೇಲಿದೆ ಆ ದಿಸೆಯಲ್ಲಿ ಎಲ್ಲರೂ ಸಹ ನೊಂದು ಬೆಂದವರ ಪರವಾಗಿ ನಿಂತು ಸದೃಢ ಸಮಾಜ ಕಟ್ಟಲು ಮುಂದಾಗಬೇಕಾಗಿದೆ ಅಂದಾಗ ಮಾತ್ರ ಹಿಂಚಹ ಪವಿತ್ರ ಕಾರ್ಯಗಳು ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು
ಎಸ್ಎಸ್ಎಫ್ ನ ರಾಜ್ಯ ಉಪಾಧ್ಯಕ್ಷ ಹಾಫಿಜ ಸುಪೀಯಾನ ಸಖಾಪಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಈ ಸಂದರ್ಭದಲ್ಲಿ ಮುಸ್ಲಿಂ ಜಮಾತ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮೌಲಾನ ಶಾಪೀ ಸಾದಿ , ಹಾಫಿಜ ಸುಪೀಯಾನ ಸಾಖಾಪೀ , ಮಹೆಬೂಬಸಾಬ ಮುಲ್ಲಾ, ಆರೀಪ ಬೂರಿಸಾಬ , , ನವಾಜ್ ಭಟ್ಕಳ, ನಜೀಫ ತಂಬಾಕಿ , ಬದ್ರೋದ್ದೀನ ಸಖಾಪಿ , ಸಿನಾನ ಸಖಾಪೀ , ನಿಜಾಮ ಜಗಳೂರ, ಸೇರಿದಂತೆ ಅನೇಕರು ಇದ್ದರು